ಕಾರ್ಕಳ: ಥೈಲ್ಯಾಂಡ್‌ನಲ್ಲಿ ಮಾರ್ಚ್ 3 ರಿಂದ ಮಾ. 5 ರವರೆಗೆ ನಡೆದ 30ನೇ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕುಕ್ಕುಂದೂರಿನ ರಾಜೇಶ್ ಶೆಟ್ಟಿ ಮೂರು ಬಹುಮಾನಗಳನ್ನು ಗೆದ್ದು ವಿಶಿಷ್ಟ ಸಾಧನೆಯನ್ನು ಮಾಡಿದ್ದಾರೆ
ಭಾರತದ ಪರವಾಗಿ ಕ್ರೀಡಾಕೂಟದಲ್ಲಿ ಬಾಗವಹಿಸಿದ ಇವರು 400*400ಮತ್ತು 400*100ರ ರಿಲೆಯಲ್ಲಿ ದ್ವಿತೀಯ ಸ್ಥಾನ, ಲಾಂಗ್ ಜಂಪ್‌ನಲ್ಲಿ ತೃತೀಯ ಬಹುಮಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ವೃತ್ತಿಯಲ್ಲಿ ಅಟೋ ಚಾಲಕರಾಗಿ, ಕುಕ್ಕುಂದೂರು ಗ್ರಾಮ ಪಂಚಾಯತ್‌ನ ನಿಕಟಪೂರ್ವ ಸದಸ್ಯರಾಗಿದ್ದಾರೆ. ಜಾರ್ಕಳ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ, ಜಯ ಕರ್ನಾಟಕ ಆಟೋ ಚಾಲಕರ ಸಂಘದ ಗೌರವ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

