ಕೆ ಆರ್ ಎಸ್ ಪಾರ್ಟಿಯ ತಂಡವು ಇಂದು ಕುಕ್ಕುಂದೂರಿನ ಮೇಲ್ಜಡ್ಡುಗೆ ಭೇಟಿ ನೀಡಿತು.
ಮೇಲ್ಜಡ್ಡುವಿನ ನಿವಾಸಿಗಳಾದ ಗುಲಾಬಿ ಮೂಲ್ಯ ಹಾಗೂ ಜಯಂತಿ ಆಚಾರ್ಯರ ಮೇಲೆ ಆಗುತ್ತಿರುವ ದೌರ್ಜನ್ಯ ಬಗ್ಗೆ ಮಾಹಿತಿ ಪಡೆದ ಪಾರ್ಟಿಯ ಪದಾಧಿಕಾರಿಗಳು ಸಮಸ್ಯೆಗಳನ್ನು ಆಲಿಸಿ ಅವರಿಗೆ ಧೈರ್ಯ ತುಂಬಿದರು.
ಬಳಿಕ ಕಾನೂನು ರೀತಿಯಲ್ಲಿ ನ್ಯಾಯ ಒದಗಿಸಿ ಕೊಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷರಾದ ಉಮೇಶ್ ಕಲ್ಲೊಟ್ಟೆ, ಉಪಾಧ್ಯಕ್ಷರಾದ ನಾಗೇಶ್ ನಾಯಕ್,ಪ್ರ.ಕಾರ್ಯರ್ಶಿ ಶೋಭಾ, ಸಂತೋಷ ಕುಲಾಲ್ ಪದವು,ಸಹ ಕಾರ್ಯದರ್ಶಿ ಯಾದವ್ ಆಚಾರ್ಯ,ಕುಟ್ಟಿ ಗೌಡ,ಅಣ್ಣಿಗೌಡ ಹಾಗೂ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಆರತಿ ಅಶೋಕ್ ಇವರು ಉಪಸ್ಥಿತರಿದ್ದರು.

