Blog

ಮುಂಡ್ಲಿ ಜಲಾಶಯದಲ್ಲಿ ರೂ 24 ಲಕ್ಷ ಮೌಲ್ಯದ ಸೊತ್ತು ಕಳವು – ಇಬ್ಬರ ಮೇಲೆ ಕೇಸು ದಾಖಲು



ಜಿ.ವಿ.ಪಿ ಇನ್ ಫ್ರಾ ಪವರ್ ಪ್ರಾಜೆಕ್ಟ್ಸ್ 15ಎಂವಿ ಮುಂಡ್ಲಿ ಇವರಿಗೆ ಸೇರಿರುವ ಕಿರು ಜಲ ವಿದ್ಯುತ್ ಯೋಜನೆಯಲ್ಲಿ ಸರಿ ಸುಮಾರು 24 ಲಕ್ಷ ರೂಪಾಯಿ ಮೌಲ್ಯದ ಟ್ರಾಷ್ ರ್ಯಾಂಕ್ ಗೇಟ್ ಮತ್ತು ಗೇಟ್ ಮೇಲೆತ್ತುವ ಲಿಫ್ಟಿಂಗ್ ಬೀಮ್ ಕಳ್ಳತನಕ್ಕೆ ಸಂಬಂಧಪಟ್ಟಂತೆ ಸಂಸ್ಥೆಯ ವ್ಯವಸ್ಥಾಪಕರು ಕಾರ್ಕಳ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ‌.

ಕಳೆದ ವರ್ಷ ನವೆಂಬರ್ 23 ರಂದು ತೆಳ್ಳಾರಿನ ಮುಂಡ್ಲಿಯಲ್ಲಿ ಕಾರ್ಯಾಚರಿಸುವ ಜಿವಿಪಿ ಇಂಫ್ರಾ ಹೈಡ್ರೋ ಪವರ್ ಸಂಸ್ಥೆಗೆ ಸೇರಿದ 6 ಟ್ರಾಷ್ ರ್ಯಾಂಕ್ ಗೇಟ್ ಮತ್ತು 1 ಲಿಫ್ಟಿಂಗ್ ಬೀಮ್ ಕಾಣೆಯಾಗಿರುವ‌ ಕುರಿತು ಗಮನಕ್ಕೆ ಬಂದಿತ್ತು. ಈ ಸಂಬಂಧ ಸಂಸ್ಥೆಯು ನಡೆಸಿದ ಆಂತರಿಕ ವಿಚಾರಣೆಯಲ್ಲಿ ಸಂಸ್ಥೆಯ ನೌಕರರಾಗಿರುವ ಸುದೀಪ್ ಎಂಬವರು ವಸ್ತುಗಳನ್ನು ಗುತ್ತಿಗೆದಾರರಿಗೆ ನೀಡಿರುವುದಾಗಿ ತಿಳಿಸಿದ್ದು, ಮರು ದಿನ 3 ಗೇಟ್ ಗಳನ್ನು ಹಿಂದಿರುಗಿಸಲಾಗಿತ್ತು. ಬಾಕಿ ಉಳಿದ 3 ಗೇಟ್ ಹಾಗೂ ಲಿಫ್ಟಿಂಗ್ ಬೀಮ್ ಹಿಂದಿರುಗಿಸುವಂತೆ ಸಂಸ್ಥೆ ಸೂಚನೆ ನೀಡಿದ್ದರೂ ಇದು ವರೆಗೂ ಹಿಂದಿರುಗಿಸಿಲ್ಲ ಎಂದು ಸಂಸ್ಥೆಯ ಪ್ರಮುಖರು ದೂರಿದ್ದಾರೆ.

ಈ ಕುರಿತು ಆರೋಪಿತನಲ್ಲಿ ಪ್ರಶ್ನಿಸಿದರೆ ಆತ ಉಳಿದ ಸಾಮಾಗ್ರಿಗಳನ್ನು ಸಂಸ್ಥೆಯ ಮತ್ತೊಬ್ಬ ಉದ್ಯೋಗಿ ಸುರೇಶ್ ಎಂಬವರಿಗೆ ನೀಡಿರುವ ಬಗ್ಗೆ ತಿಳಿಸಿದ್ದಾರೆ. ಇದು ವರೆಗೂ ಕಳ್ಳತನದ ಸಾಮಾಗ್ರಿಗಳನ್ನು ಹಿಂದಿರುಗಿಸದಿರುವ‌ ಕಾರಣ ಕೇಂದ್ರ ಕಚೇರಿಯ ಸೂಚನೆಯಂತೆ ಸಂಸ್ಥೆಯ ವ್ಯವಸ್ಥಾಪಕರು ಅಜೆಕಾರು ಪೊಲೀಸ್ ಠಾಣೆಯಲ್ಲಿ (BNS U/s-306) ಪ್ರಕರಣ ದಾಖಲಿಸಿದ್ದಾರೆ.

Related posts

ಮಹಾವೀರ ಕಾಲೇಜಿನಲ್ಲಿ ಶ್ರೀ ಭಗವಾನ್ ಮಹಾವೀರ ಜಯಂತಿ

Madhyama Bimba

ಹೆಬ್ರಿಯಲ್ಲಿ ಪೂಜಿಸಲ್ಪಡುವ ಶಾರದಾ ಮೂರ್ತಿ

Madhyama Bimba

ನಾಪತ್ತೆಯಾಗಿದ್ದ ಸತೀಶ್ ಆಚಾರ್ಯ ಪತ್ತೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More