ಕಾರ್ಕಳ

ಕಾರ್ಕಳ: ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ

ಕಾರ್ಕಳ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ವಾಣಿಜ್ಯ ಸಂಘ ಮತ್ತು ಆಳ್ವಾಸ್ ಇಸ್ಪಿಟ್ಯೂಟ್ ಮೂಡಬಿದ್ರೆ ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮವನ್ನು ಆಳ್ವಾಸ್ ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸಮ್ಯಕ್ ಜೈನ್ ಮತ್ತು ಅಶೋಕ್ ರವರು ನಡೆಸಿಕೊಟ್ಟರು. ಸಂದರ್ಶನಕ್ಕೆ ತಯಾರಿ, ಗುಂಪು ಚರ್ಚೆ, ತಂಡ ನಿರ್ವಹಣೆ ಮತ್ತು ಸಂದರ್ಶನಕ್ಕೆ ಹಾಜರಾಗುವ ಮೊದಲು ತಯಾರಿಯ ಮಹತ್ವ, ಆತ್ಮವಿಶ್ವಾಸ, ಸರಿಯಾದ ಸಂವಹನ ಸಂದರ್ಶನದಲ್ಲಿ ಯಶಸ್ಸು ಪಡೆಯಲು ಹೇಗೆ ಸಹಾಯವಾಗುತ್ತದೆ ಎಂಬ ಪ್ರಮುಖ ವಿಷಯಗಳ ಕುರಿತು ತರಬೇತಿಯನ್ನು ವಿದ್ಯಾರ್ಥಿನಿಯರಿಗೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಗೀತಾ. ಜಿ ವಹಿಸಿದ್ದರು.
ವಾಣಿಜ್ಯ ವಿಭಾಗದ ಉಪನ್ಯಾಸಕಿ ಕು. ಅರ್ಪಿತಾ ಸ್ವಾಗತಿಸಿದರು, ವಿದ್ಯಾರ್ಥಿನಿಯರಾದ ಕು.ದೀಪ ವಂದಿಸಿ, ಕು. ಸಹನಾ ಕಾರ್ಯಕ್ರಮ ನಿರೂಪಿಸಿದರು.

Related posts

ಗಣೇಶ್‌ ಕೆ. ಶೆಟ್ಟಿ ಸಾರಥ್ಯದಲ್ಲಿ ತುಳುಕೂಟ ಗೋವಾ ಲೋಕಾರ್ಪಣೆ – ಸಂಭ್ರಮದ ಕಾರ್ಯಕ್ರಮ

Madhyama Bimba

ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಡಾ.ಕೀರ್ತಿನಾಥ್ ಬಳ್ಳಾಳ್‌ರಿಗೆ ಬೀಳ್ಕೊಡುಗೆ

Madhyama Bimba

ನಕ್ರೆ: ದಿ. ಯಶವಂತಿ ಎಸ್ ಸುವರ್ಣ ಹುಟ್ಟುಹಬ್ಬದ ಪ್ರಯುಕ್ತ ಅಶಕ್ತರಿಗೆ ಆರ್ಥಿಕ ನೆರವು ವಿತರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More