ಕಾರ್ಕಳ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ “ವಿಶ್ವ ಮಹಿಳಾ ದಿನ” ಆಚರಣೆ

 

ಪ್ರತಿಷ್ಠಿತ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ವತಿಯಿಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪೆರ್ವಾಜೆ, ಕಾರ್ಕಳ ಇಲ್ಲಿ ಮಾ. 17ರಂದು ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.


ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾಳ ಪ್ರಾಥಮಿಕ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಹಾಗು ರೋಟರಿ ಕ್ಲಬ್ ಕಾರ್ಕಳ ಇದರ ಸದಸ್ಯರಾದ ಡಾ.ದಿಶಾ ದಿವಾಕರ್ ಭಾಗವಹಿಸಿದ್ದರು.


ಕಾರ್ಯಕ್ರಮದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯನ್ನು ಮಾಡಿರುವ ಕುಮಾರಿ ರಕ್ಷಾ ಪೂಜಾರಿ, ರೆಂಜಾಳ ಇವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಡಾ.ವೆನ್ಸಿಟಾ ಪ್ರಿಯಾಂಕ ಅರಾನ್ಹ ಕುಕ್ಕುಂದೂರು ಮತ್ತು ಡಾ.ಅಂಬಿಕಾ ನಾಯಕ್ ಅಜೆಕಾರು ಇವರು ರೋಟರಿ ಕುಟುಂಬಕ್ಕೆ ಸದಸ್ಯರಾಗಿ ಸೇರ್ಪಡೆಗೊಂಡರು.

ವೇದಿಕೆಯಲ್ಲಿ ಕ್ಲಬ್ ನ ಮಾರ್ಗದರ್ಶಕರಾದ ರೋಟರಿ ಮಾಜಿ ಜಿಲ್ಲಾ ಗವರ್ನರ್ ರೊ| ಡಾ. ಭರತೇಶ್ ಆದಿರಾಜ್, ಕ್ಲಬ್ ಅಧ್ಯಕ್ಷರು ರೋ| ಸುರೇಂದ್ರ ನಾಯಕ್, ಕಾರ್ಯದರ್ಶಿ ರೋ| ರಾಘವೇಂದ್ರ ಕಾಮತ್ ಮತ್ತು ಆನ್ಸ್ ಅಧ್ಯಕ್ಷರು ಶರ್ಮಿಳಾ ರಮೇಶ್ ಶೆಟ್ಟಿ ಉಪಸ್ಥಿತರಿದ್ದರು. ರೋ| ಸುಬ್ರಹ್ಮಣ್ಯ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು.

Related posts

ಕಾರ್ಕಳ: ಟ್ರಾಕ್ಟರ್‌ನಿಂದ ಬಿದ್ದು ಮೃತ್ಯು

Madhyama Bimba

ಪಡುಕುಡೂರಿನಿಂದ ಸಿರಿಬೈಲು ದೇವಸ್ಥಾನಕ್ಕೆ ಪಾದಯಾತ್ರೆ

Madhyama Bimba

ಜ್ಞಾನಸುಧಾ: ಎಸ್.ಎಸ್.ಎಲ್.ಸಿ. ಫಲಿತಾಂಶ – 02 ವಿದ್ಯಾರ್ಥಿಗಳು ರಾಜ್ಯಕ್ಕೆ ದ್ವಿತೀಯ- 11 ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ಹತ್ತರೊಳಗಿನ ಸ್ಥಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More