Blog

ಮಹಾವೀರ ಕಾಲೇಜಿನಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮೆಶಿನ್ ಲರ್ನಿಂಗ್ ಲ್ಯಾಬೋರೇಟರಿ ಉದ್ಘಾಟನೆ

ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಿಷಿನ್ ಲರ್ನಿಂಗ್ ಲ್ಯಾಬೊರೋಟರಿಯ ಉದ್ಘಾಟನೆ ನಡೆಯಿತು. ಕರ್ನಾಟಕ ಬ್ಯಾಂಕ್ ನ ಸಹಾಯಕ ಮಹಾ ಪ್ರಬಂಧಕರಾದ ವಿಶ್ವನಾಥ್ ಎಸ್. ಆರ್. ಉದ್ಘಾಟನೆಯನ್ನು ನೆರವೇರಿಸಿದರು. ನಂತರ ಮಾತನಾಡಿದ ಅವರು ಬ್ಯಾಂಕಿಂಗ್ ಕ್ಷೇತ್ರ ಬಹಳಷ್ಟು ತಾಂತ್ರಿಕ ಸೌಲಭ್ಯದೊಂದಿಗೆ ಬೆಳೆಯುತ್ತಿದ್ದು, ಆಧುನಿಕ ಪ್ರಗತಿಗೆ ಸಾಫ್ಟ್ವೇರ್ ನಂತಹ ವ್ಯವಸ್ಥೆಗಳು ಅಗತ್ಯವಾಗಿದೆ ಎಂದು ಹೇಳಿದರು. ಕರ್ನಾಟಕ ಬ್ಯಾಂಕ್ ನ ವಿಶ್ರಾಂತ ಮಹಾ ಪ್ರಬಂಧಕರಾದ ಚಂದ್ರಶೇಖರ ರಾವ್ ಬಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಎಐ ಅಧ್ಯಯನ ಇಂದಿನ ಅವಶ್ಯಕತೆಯಾಗಿದ್ದು, ಉದ್ಯೋಗಗಳ ಹೆಚ್ಚಳಕ್ಕೂ ಅನುಕೂಲಕರವಾಗಿದೆ ಎಂದು ಹೇಳಿದರು. ಶ್ರೀ ಮಹಾವೀರ ಕಾಲೇಜು ವಿಶ್ವಸ್ಥ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರ ಸಭಾಧ್ಯಕ್ಷತೆ ವಹಿಸಿ ಟಿಎಂಎ ಪೈ ಯವರ ಶಿಕ್ಷಣದ ದೂರದರ್ಶಿತ್ವ ದಿಂದಾಗಿ ಗ್ರಾಮಾಂತರ ಪ್ರದೇಶದ ಜನರು ಕೂಡ ವಿದ್ಯಾಭ್ಯಾಸ ಪಡೆದುಕೊಳ್ಳಲು ಅವಕಾಶವಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಂತ್ರಜ್ಞಾನದಿಂದಾಗಿ ಹೆಚ್ಚಿನ ಅವಕಾಶಗಳನ್ನು ಹೊಂದಿದ್ದು, ವಿದ್ಯಾರ್ಥಿಗಳು ಈ ಅವಕಾಶಗಳನ್ನು ಬಳಸಿಕೊಳ್ಳುವಂತೆ ಸಲಹೆಯಿತ್ತರು.
ಕರ್ನಾಟಕ ಬ್ಯಾಂಕ್ ನ ಮಹಾವೀರ ಕಾಲೇಜು ಶಾಖ ಪ್ರಬಂಧಕ ರಕ್ಷಿತ್ ಎನ್. ಶೆಟ್ಟಿ, ಕಾಲೇಜು ಪ್ರಾಂಶುಪಾಲರಾದ ಡಾ. ರಾಧಾಕೃಷ್ಣ ಶೆಟ್ಟಿ, ವಿಶ್ವಸ್ಥ ಮಂಡಳಿ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಬಿಸಿಎ ವಿಭಾಗ ಮುಖ್ಯಸ್ಥೆ ಕೀರ್ತಳ ವೇದಿಕೆಯಲ್ಲಿದ್ದರು. ವಿಶ್ವಸ್ಥ ಮಂಡಳಿ ಕೋಶಾಧಿಕಾರಿ ರಾಮ್ ಪ್ರಸಾದ್ ಭಟ್, ಸದಸ್ಯರಾದ ಸಿ. ಎಚ್. ಗಫೂರ್, ವೆಂಕಟೇಶ್ ಕಾಮತ್, ಕೆ. ಆರ್. ಪಂಡಿತ್, ವಿಶ್ರಾಂತ ಪ್ರಾಂಶುಪಾಲರಾದ ಜೆ. ಜೆ. ಪಿಂಟೋ, ಪ್ರೊ. ರಮೇಶ್ ಭಟ್ ಸಮಾರಂಭದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿನಿ ಸ್ವಪ್ನ ಸ್ವಾಗತಿಸಿ ಸಹನ ಮತ್ತು ತಂಡದವರು ಪ್ರಾರ್ಥನೆಗೈದರು. ಪ್ರೇಕ್ಷ ಕೆ. ಧನ್ಯವಾದವಿತ್ತರು. ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು.

Related posts

ಮತದಾರ ಪಟ್ಟಿ ಪರಿಷ್ಕರಣೆ ವೋಟ್ ಚೋರಿದಾರರಿಗೆ ಆತಂಕ: ಸುನಿಲ್ ಕುಮಾರ್

Madhyama Bimba

ಹಿರ್ಗಾನ ಸಮೀಪ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ -ಗಾಯ

Madhyama Bimba

ಕಾರ್ಕಳ ಜೇಸಿಸ್ ಅಧ್ಯಕ್ಷೆ ಶ್ವೇತಾ ಗೆ ಪ್ರಶಸ್ತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More