ಮೂಡುಬಿದಿರೆ

  ಏಪ್ರಿಲ್ 9ರಿಂದ 12 ಬೆದ್ರ ಉತ್ಸವ

ಮೂಡುಬಿದಿರೆಯಲ್ಲಿ ಏಪ್ರಿಲ್ 9ರಿಂದ 12ರವರಿಗೆ ಬೆದ್ರ ಉತ್ಸವ ನಡೆಯಲಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಸಮಾಜಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಮರನಾಥ ಶೆಟ್ಟಿ ವೃತ್ತದಿಂದ ಸ್ವರಾಜ್ಯ ಮೈದಾನ ಹಾಗೂ ಕನ್ನಡ ಭವನ ವರೆಗೆ ವಿವಿಧ ಮಳಿಗೆಗಳು ಬರಲಿದೆ.
ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಸಸ್ಯಾಹಾರಿ ಮಾಂಸಹಾರಿ ಆಹಾರ ಮಳಿಗೆ, ಮನೋರಂಜನೆ ನೀಡುವ ಮಕ್ಕಳ ಆಟದ ಉಪಕರಣಗಳು ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿದೆ.

ಉತ್ಸವದಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಎಂ ಎನ್. , ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ ಮೋಹನ್ ಆಳ್ವ, ಡಿಜಿಪಿ ಅಬ್ದುಲ್ ಅಹದ, ಅದಾನಿ ಸಮೂಹದ ಕಿಶೋರ್ ಆಳ್ವ ರಿಗೆ ಬೆದ್ರ ಮಾಣಿಕ್ಯ ಪ್ರಶಸ್ತಿ ನೀಡಿ ಗೌರವಿಸಲು ಉದ್ದೇಶಿಸಲಾಗಿದೆ.

ಸಂಚಾಲಕ ಹರೀಶ್ ದೇವಾಡಿಗ, ಪ್ರಧಾನ ಕಾರ್ಯದರ್ಶಿ, ಗೋಪಾಲ್ ಶೆಟ್ಟಿಗಾರ್, ಕೋಶಾಧಿಕಾರಿ ನಾಗೇಶ್ ಬಂಗೇರ, ಸಂತೋಷ್ ಶೆಟ್ಟಿ, ಲೋಕೇಶ್ ಶೆಟ್ಟಿ ಮುಚ್ಚೂರು, ಪುರಸಭಾ ಮಾಜಿ ಅಧ್ಯಕ್ಷರಾದ ಪ್ರಸಾದ್ ಕುಮಾರ್, ಸಂತೋಷ್ ಕುಮಾರ್, ಗಣೇಶ್ ಅಳಿಯೂರು, ಸತೀಶ್ ಈ ಸಂದರ್ಭದಲ್ಲಿದ್ದರು.

Related posts

ಎಕ್ಸಲೆ೦ಟ್ ವಾರ್ಷಿಕೋತ್ಸವ- ನಾವು ಕಾರ್ಯದಲ್ಲಿ ಸಾಗಬೇಕೇ ಹೊರತು ಕಾರಣದಲ್ಲಿ ಅಲ್ಲ: ಡಾ. ಔದ್ರಾಮ

Madhyama Bimba

ಮೂಡುಬಿದಿರೆಯಲ್ಲಿ ‘ವಿಶ್ವ ಕಾರ್ಮಿಕ ದಿನಾಚರಣೆ’ಗೆ ಕಾರ್ಮಿಕರಿಗೆ ಮತ್ತು ಅವರ ಕುಟುಂಬದವರಿಗೆ ಕಣ್ಣಿನ ತಪಾಸಣಾ

Madhyama Bimba

ಮೂಡುಬಿದಿರೆ ಕಂಬಳದಲ್ಲಿ ಸಾಧಕರಿಗೆ ಪ್ರಶಸ್ತಿ, ಗೌರವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More