ಮೂಡುಬಿದಿರೆ

ಮೂಡುಬಿದಿರೆ ಕಂಬಳದಲ್ಲಿ ಸಾಧಕರಿಗೆ ಪ್ರಶಸ್ತಿ, ಗೌರವ

ಮೂಡುಬಿದಿರೆಯಲ್ಲಿ ಶನಿವಾರ ನಡೆಯುವ ಪ್ರತಿಷ್ಠಿತ 23ನೇ ವರ್ಷದ ಕೋಟಿ-ಚೆನ್ನಯ ಜೋಡುಕರೆ ಕಂಬಳದಲ್ಲಿ ಪ್ರತಿ ವರ್ಷವೂ ಸಾಧಕ ಗಣ್ಯರನ್ನು ಸನ್ಮಾನಿಸುವ ಸಂಪ್ರದಾಯವಿದೆ. ಈ ಬಾರಿಯ 23 ನೇ ವರ್ಷದ ಪ್ರತಿಷ್ಠಿತ ಮೂಡುಬಿದಿರೆ ಕೋಟಿ-ಚೆನ್ನಯ ಜೋಡುಕರೆ ಕಂಬಳದ ರಾಜ್ಯ ಮಟ್ಟದ ವೀರರಾಣಿ ಅಬ್ಬಕ್ಕ 500ರ ಸಂಭ್ರಮದ ಪ್ರಶಸ್ತಿ ಪುರಸ್ಕೃತರಾಗಿರುವವರು ಪ್ರಖ್ಯಾತ ಉದ್ಯಮಿ
ಕೆ. ಪ್ರಕಾಶ್ ಶೆಟ್ಟಿ ಅಧ್ಯಕ್ಷರು, ಎಂ.ಆರ್.ಜಿ. ಗ್ರೂಪ್. ಕೋಟಿ ಚೆನ್ನಯ ಪ್ರಶಸ್ತಿ ಪುರಸ್ಕೃತರು ಮಂಗಳೂರಿನ ಉದ್ಯಮಿ ಲಾಂಚುಲಾಲ್ ಕೆ. ಎಸ್. ಸಿಇಓ ಅಸ್ತ್ರ ಗ್ರೂಪ್. ಅವರನ್ನು ವಿಶೇಷವಾಗಿ ಗೌರವಿಸಲು ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದ ಕಂಬಳ ಸಮಿತಿ ನಿರ್ಧರಿಸಿದೆ.

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಭಾಸ್ಕರ್ ಎಸ್. ಕೋಟ್ಯಾನ್ ಕೊಳಕೆ ಇರ್ವತ್ತೂರು , ವಿಶ್ವಕಪ್ ವಿಜೇತ ಭಾರತ ತಂಡದ ಕಬಡ್ಡಿ ಆಟಗಾರ್ತಿ ಕು| ಧನಲಕ್ಷ್ಮೀ , ಅಂತರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿ ಪುರಸ್ಕೃತರು ರವಿ ಕೋಟ್ಯಾನ್ ಮೂಡುಬಿದಿರೆ , ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂತೋಷ್ ಶೆಟ್ಟಿ ಕಡಂದಲೆ ಪರಾರಿ, ರುಕ್ಕಯ್ಯ ಪೂಜಾರಿ ಅಳಿಯೂರು, ಗೋಪಾಲ್ ಕೋಟ್ಯಾನ್ ಮಾರೂರು, ದಿನೇಶ್ ದೇವಾಡಿಗ ಅಶ್ವತ್ಥಪುರ, ಪ್ರಗತಿಪರ ಭತ್ತದ ಬೆಳೆಗಾರ ಡೊಂಬಯ್ಯ ಮೊಯ್ಲಿ ಪುತ್ತಿಗೆ ಪಾಪಣ್ಣ ಪೂಜಾರಿ ಗುಮಡಬೆಟ್ಟು ಮನೆ ಅವರನ್ನು ಗೌರವಿಸಲು ನಿರ್ಧರಿಸಲಾಗಿದೆ.

ನೂತನ ಕರೆ ನಿರ್ಮಾಣದ ಗೌರವ ಎಂಬಂತೆ ಕರೆ ನಿರ್ಮಾಣಕಾರ ಜೋನ್ ಸಿರಿಲ್ ಡಿಸೋಜಾ ಸರಪ್ಪಾಡಿ, ಶ್ರೀನಿವಾಸ ಗೌರ ಮಿಜಾರು ಅಶ್ವತ್ಥಪುರ, ಕಂಬಳ ಓಟಗಾರ ರಾಜೇಶ್ ಮಾರ್ನಾಡ್ ರನ್ನು ಗುರುತಿಸಲಾಗುವುದು.

Related posts

ಮೂಡುಬಿದಿರೆ ಸಾಹಿತ್ಯ ಸಮ್ಮೇಳನದಲ್ಲಿ ಶಾಸಕ ಕೋಟ್ಯಾನ್ ಭಾಗಿ

Madhyama Bimba

 ಉಮೇಶ್ ಭಟ್ ಅವರಿಗೆ ಸಂಸ್ಕೃತದಲ್ಲಿ ಪ್ರಥಮ ರ್‍ಯಾಂಕ್

Madhyama Bimba

ಮೂಡುಬಿದಿರೆ ಗುಂಡ್ಯಡ್ಕದ ಶ್ರೀ ವಿಠೋಬಾ ರುಕುಮಾಯಿ ದೇವಸ್ಥಾನದಲ್ಲಿ ಭಜನಾ ಮಂಡಳಿಯ ವಜ್ರ ಮಹೋತ್ಸವ ಪ್ರಯುಕ್ತ”ಅಖಂಡ ಭಜನಾ ಸಪ್ತಾಹ ” ಆರಂಭ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More