ಕಾರ್ಕಳ

ಕಾರ್ಕಳ: ಸ್ಕೂಟರ್ ಹಾಗೂ ಮೋಟಾರ್ ಸೈಕಲ್ ಮುಖಾಮುಖಿ ಡಿಕ್ಕಿ- ಸವಾರರಿಗೆ ಗಾಯ

ಕಾರ್ಕಳ: ಬೋಳ ಗ್ರಾಮದ ಕುಕ್ಕುದಡಿ ಬಳಿ ಸ್ಕೂಟರ್ ಹಾಗೂ ಮೋಟಾರ್ ಸೈಕಲ್ ಮುಖಾಮುಖಿ ಡಿಕ್ಕಿಯಾಗಿ ಸವಾರರೀರ್ವರು ಗಾಯಗೊಂಡ ಘಟನೆ ವರದಿಯಾಗಿದೆ.

ಸಚ್ಚೇರಿಪೇಟೆಯಿಂದ ಬೋಳ ಕಡೆಗೆ ಬರುತ್ತಿದ್ದ ಕೃಷ್ಣಕುಮಾರ್ ಎಂಬುವವರ ಸ್ಕೂಟರ್ ಹಾಗೂ ಬೋಳ ಕಡೆಯಿಂದ ಸಚ್ಚೇರಿಪೇಟೆ ಕಡೆಗೆ ಬರುತ್ತಿದ್ದ ಸತೀಶ ಸಫಲಿಗರವರ ಮೋಟಾರು ಸೈಕಲ್ ಮುಖಾಮುಖಿ ಡಿಕ್ಕಿಯಾಗಿದೆ.

ಡಿಕ್ಕಿ ಪರಿಣಾಮ ಇಬ್ಬರೂ ದ್ವಿಚಕ್ರ ವಾಹನಗಳೊಂದಿಗೆ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸತೀಶ ಸಫಲಿಗ ರವರು ಮೂಡಬಿದ್ರೆಯ ಆಳ್ವಾಸ್ ಹೆಲ್ತ್ ಸೆಂಟರ್‌ನಲ್ಲಿ ಮತ್ತು ಕೃಷ್ಣ ಕುಮಾರ್ ರವರು ಮಂಗಳೂರು ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಮುದ್ರಾಡಿ : ಹಣಕಾಸು ಸಾಕ್ಷರತಾ ಸಪ್ತಾಹ  ಅಂಗವಾಗಿ ಗ್ರಾಹಕ ಸೇವಾ ಕೇಂದ್ರ ಉದ್ಘಾಟನೆ

Madhyama Bimba

ಸುಜ್ಞಾನನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ಹಾಗೂ ಅನುದಾನ ವಿತರಣಾ ಕಾರ್ಯಕ್ರಮ

Madhyama Bimba

ಹೆಬ್ರಿ ಶೇಖರ ನಾಯ್ಕ್ ನಿಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More