ಕಾರ್ಕಳಹೆಬ್ರಿ

ಹೆಬ್ರಿ ಶೇಖರ ನಾಯ್ಕ್ ನಿಧನ

ಹೆಬ್ರಿ : ಹೆಬ್ರಿಯ ಮುಳ್ಕುಂಬ್ರಿ ಶೇಖರ ನಾಯ್ಕ್ (57) ಎಂಬವರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಮನೆಯ ನೀರಿನ ಟ್ಯಾಂಕ್ ಗೆ ನೀರು ತುಂಬಿರುವುದನ್ನು ನೋಡುವಾಗ ಮೊಬೈಲ್ ಟ್ಯಾಂಕ್ ಗೆ ಬಿದ್ದಿದೆ. ಮೊಬೈಲ್ ಹೆಕ್ಕಲು ಪ್ರಯತ್ನಿಸಿದಾಗ ಆಕಸ್ಮಿಕವಾಗಿ ನೀರಿನ ಟ್ಯಾಂಕಿಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಹೆಬ್ರಿಯ ಪರಿಸರದಲ್ಲಿ ಸಕ್ರೀಯರಾಗಿದ್ದ ಶೇಖರ ನಾಯ್ಕ್ ಪ್ರತಿಷ್ಠಿತ ಹೆಬ್ರಿ ಚೈತನ್ಯ ಯುವವೃಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಟನೆಯ ಸ್ಥಾಪಕ ಸದಸ್ಯರು, ಬಳಿಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ನೂರಾರು ಮಂದಿ ಅಂತಿಮ ದರ್ಶನ ಪಡೆದರು. ಮಕ್ಕಳು ಇಲ್ಲದ ಶೇಖರ ನಾಯ್ಕ್ ದಂಪತಿಗಳು ಹೆಬ್ರಿಯ ಮುಳ್ಕುಂಬ್ರಿಯಲ್ಲಿ ಪತ್ನಿಯೊಂದಿಗೆ ವಾಸವಿದ್ದರು. ಹೆಬ್ರಿ ಠಾಣೆಯಲ್ಲಿ ಕೇಸು ದಾಖಲಾಗಿದೆ.

Related posts

ಕಾರ್ಕಳ ತಾಲೂಕು ಮಹಿಳಾ ಒಕ್ಕೂಟ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

Madhyama Bimba

ರಿಕ್ಷಾಕ್ಕೆ ಇನೋವಾ ಕಾರು ಡಿಕ್ಕಿ- ರಿಕ್ಷಾ ಚಾಲಕನಿಗೆ ಅಲ್ಪ ಪ್ರಮಾಣದ ಗಾಯ

Madhyama Bimba

ಕಾರ್ಕಳ: ಚಾಲಕನ ನಿರ್ಲಕ್ಷ- ಪ್ರಯಾಣಿಕನಿಗೆ ಗಾಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More