ಕಾರ್ಕಳ

ಕಾರ್ಕಳ: ಮಟ್ಕಾ ಜುಗಾರಿ ಆಟ- ಪ್ರಕರಣ ದಾಖಲು

ಕಾರ್ಕಳ: ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಿರತರ ಮೇಲೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ ಏ. 01ರಂದು ವರದಿಯಾಗಿದೆ.

ಹಿರ್ಗಾನ ಗ್ರಾಮದ ಸುಧೀಂದ್ರ ಪೂಜಾರಿ (47) ಹಾಗೂ ಕುಕ್ಕುಂದೂರು ದುರ್ಗಾ ಹೈಸ್ಕೂಲ್ ಬಳಿಯ ಮಹಮ್ಮದ್ ರಫೀಕ್ (37) ಇವರು ಹಿರ್ಗಾನ ಗ್ರಾಮದ ತುಂಬೆಹಿತ್ಲು ಗೋಕುಲ್ ಕಂಪೌಂಡ್ ಬಳಿ ಸಾರ್ವಜನಿಕ ಸ್ಥಳದಲ್ಲಿ 1 ರೂಪಾಯಿಗೆ 70 ರೂಪಾಯಿ ನೀಡುವುದಾಗಿ ಹೇಳಿ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹ ಮಾಡುತ್ತಿದ್ದು, ಈ ಸಮಯ ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು (ತನಿಖೆ) ಶಿವಕುಮಾರ್ ಎಸ್ ಆರ್ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿದ್ದಾರೆ.

ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ನಗದು ಹಣ ಒಟ್ಟು 2,180/-ರೂಪಾಯಿ, ಮಟ್ಕಾ ಸಂಖ್ಯೆ ಬರೆದ ಚೀಟಿ, ಪೆನ್ನು ಇವುಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.

Related posts

ಎಸ್.ವಿ.ಟಿ. ಶಾಲೆಯಲ್ಲಿ “ಸಾಹಿತ್ಯ-ಕಲೆ-ಸಾಂಸ್ಕೃತಿಕ ಸಂಘ” ಉದ್ಘಾಟನೆ

Madhyama Bimba

ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಕಾರ್ಕಳ- ಸಾಮಾನ್ಯ ಅರಿವಳಿಕೆಯಡಿ ವೃದ್ದ ರೋಗಿಯ ಸಂಕೀರ್ಣ ಅಪಾಯಕರ ಕಣ್ಣಿನ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ಯಶಸ್ವಿ ನಿರ್ವಹಣೆ

Madhyama Bimba

ಕೆರೆಬೆಟ್ಟು ಶಾಲೆಯಲ್ಲಿ ನೋಟ್ಸ್ ಪುಸ್ತಕ ವಿತರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More