ಕೆರ್ಜಾಡಿ ಶ್ರೀ ಬ್ರಹ್ಮಬೈದರ್ಕಳ, ಶಿವರಾಯ ಗರೋಡಿ ಮತ್ತು ಸಪರಿವಾರ ದೈವಗಳ ನೂತನ ಗರ್ಭಗುಡಿಯ ಲೋಕಾರ್ಪಣೆ ಮತ್ತು ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ಏ. 10ರಿಂದ ಏ. 12ರವರೆಗೆ ಮತ್ತು ನೇಮೋತ್ಸವವು ಏ. 22ರಿಂದ ಏ. 25ರವರೆಗೆ ಜರಗಲಿದೆ.
ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ಏ. 10ರಂದು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಏ. 11ರಂದು ಬೆಳಗ್ಗೆ ಫಲಪ್ರಾರ್ಥನೆ ಪುಣ್ಯಾಹ, ಗಣಹೋಮ, ನವಗ್ರಹ ಹೋಮ ಮತ್ತು ಪುಣ್ಯಾಹ, ಗೇಹ ಪರಿಗ್ರಹ, ವಾಸ್ತುಪೂಜೆ, ವಾಸ್ತು ಬಲಿ, ಬಿಂಬ ಶುದ್ದಿ, ಪ್ರತಿಷ್ಠಾ ಅಧಿವಾಸ ಹೋಮ, ಪ್ರತಿಷ್ಠಾಪನೆ. ಜೀವಕುಂಭ ಸೇಚನೆ, ಪ್ರಸನ್ನ ಪೂಜೆ ನಡೆಯಲಿದೆ.
ಏ. 12ರಂದು ಸಪರಿವಾರ ಶಿವರಾಯನಲ್ಲಿ ಪಂಚವಿಂಶತಿ, ಕಲಶ ಸ್ಥಾಪನೆ, ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ, ಬ್ರಹ್ಮಬೈದರ್ಕಳ ಹಾಗೂ ಪರಿವಾರ ದೈವಗಳಗಲ್ಲಿ ಅಷ್ಟೋತ್ತರ ಪರಿಕಲಶ ಸಹಿತ ಬ್ರಹ್ಮಕಲಶ ಸ್ಥಾಪನೆ, ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ, ತೀರ್ಥಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನ ಗಂಟೆ 3.00ರಿಂದ ರಾಜೇಶ್ ಪ್ರಭು ಸಾರಥ್ಯದ ಇಂಚರ ಮೆಲೋಡೀಸ್, ಹೆಬ್ರಿ ಇವರಿಂದ ಗಾನ ವೈಭವ ಕಾರ್ಯಕ್ರಮ, ಗಂಟೆ 4.00ರಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಸಮ್ಮಕಾನು ಶೇಡಿಮನೆ ಇಲ್ಲಿನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 5.00 ರಿಂದ ಸಭಾ ಕಾರ್ಯಕ್ರಮ ಮತ್ತು ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಂಜೆ ಗಂಟೆ 8.00ರಿಂದ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರು ಮಂಗಳೂರು ಇವರಿಂದ ಮಾರಣಕಟ್ಟೆ ಕ್ಷೇತ್ರದ ಐತಿಹ್ಯವನ್ನು ಸಾರುವ ನೃತ್ಯ ರೂಪಕ ‘ಬಿಡುವನೇ ಬ್ರಹ್ಮಲಿಂಗ’ ಜರಗಲಿದೆ.
ಅಗಲು ಹಾಗೂ ನೇಮೋತ್ಸವದ ಅಂಗವಾಗಿ ಏ. 22 ರಂದು ಕಂಬದ ಮುಹೂರ್ತ, ಏ. 23ರಂದು ಸಂಜೆ 7.00ಕ್ಕೆ ಅಗಲು ಸೇವೆ, ದರ್ಶನ, ರಾತ್ರಿ ಗಂಟೆ 12.00ಕ್ಕೆ ಗುಂಡ ಪ್ರವೇಶ, ಏ. 24ರಂದು ಮಧ್ಯಾಹ್ನ 12.00ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ6.00ರಿಂದ ಬ್ರಹ್ಮಬೈದರ್ಕಳ ನೇಮೋತ್ಸವ, ರಾತ್ರಿ 10.00ರಿಂದ ಶಿವರಾಯ ನೇಮೋತ್ಸವ, ಜುಮಾದಿಯ ಸಿರಿಸಿಂಗಾರ ನೇಮೋತ್ಸವ ಹಾಗೂ ಪರಿವಾರ ದೈವಗಳ ನೇಮೋತ್ಸವ ಬ್ರಹ್ಮಬೈದರ್ಕಳ ದರ್ಶನ, ಶಿವರಾಯ ದರ್ಶನ ಮತ್ತು ಪ್ರಸಾದ ವಿತರಣೆ, ಏ. 25ರಂದು ಸಂಜೆ 5.00ರಿಂದ ಮಹಾಮಾರಿ ಜರಗಲಿದೆ.
