ಕಾರ್ಕಳ

ನೀರೆ: ಉಚಿತ ಟೈಲರಿಂಗ್ ತರಬೇತಿ

ಕಾರ್ಕಳ ತಾಲೂಕು ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಟಿಎಂಜಿ ಸುನಿಧಿ ಫೌಂಡೇಶನ್ ಮತ್ತು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ವತಿಯಿಂದ ನೀರೆ ಮತ್ತು ಎರ್ಲಪಾಡಿ ವ್ಯಾಪ್ತಿಯ ಸ್ತ್ರೀಶಕ್ತಿ ಸಂಘದ 30ಜನ ಮಹಿಳೆಯರಿಗೆ 10 ದಿನಗಳ ಉಚಿತ ಟೈಲರಿಂಗ್ ತರಬೇತಿಯನ್ನು ನೀರೆ ಶ್ರೀ ಬನಶಂಕರಿ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದ ಕಟ್ಟಡದಲ್ಲಿ ನಡೆಯಿತು.

ತಾಲೂಕು ಪಂಚಾಯತ್‌ನ ನಿಕಟ ಪೂರ್ವ ಅಧ್ಯಕ್ಷರಾದ ವಿಕ್ರಂ ಹೆಗ್ಡೆಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗರಾಜು ಎಂ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗ್ರಾಮ ಪಂಚಾಯತ್‌ನ ನಿಕಟ ಪೂರ್ವ ಅಧ್ಯಕ್ಷರಾದ ಸಚ್ಚಿದಾನಂದ ಎಸ್ ಪ್ರಭುರವರು ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸುಪ್ರೀತಾ ಮತ್ತು ಭಾರತೀಯ ಸೇವಾ ಟ್ರಸ್ಟ್‌ನ ಕಾರ್ಯಕ್ರಮ ಅಧಿಕಾರಿ ಶ್ರೀಮತಿ ಪ್ರತೀಮಾರವರು ಸಂಸ್ಥೆ ಮತ್ತು ತರಬೇತಿಯ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಟೈಲರಿಂಗ್ ತರಬೇತಿ ಫಲಾನುಭವಿಗಳಿಗೆ ಉಚಿತ ಟೈಲರಿಂಗ್ ಕಿಟ್ ನೀಡಲಾಯಿತು.

ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರಾದ ಶ್ರೀಮತಿ ಬಬಿತಾ, ತರಬೇತದಾರರಾದ ಶ್ರೀಮತಿ ಶುಭ, ತಾಲೂಕು ಪಂಚಾಯತ್‌ನ ನಿಕಟ ಪೂರ್ವ ಅಧ್ಯಕ್ಷರಾದ ಮಾಲಿನಿ ಜೆ ಶೆಟ್ಟಿ, ನೀರೆ ಮತ್ತು ಎರ್ಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀಮತಿ ಉಮಾ ಸ್ವಾಗತಿಸಿದರು.

Related posts

ಅಜೆಕಾರು: ಕಾಡುಹೊಳೆಯಿಂದ ವ್ಯಕ್ತಿ ನಾಪತ್ತೆ- ಮಾಹಿತಿ ತಿಳಿದರೆ ಅಜೆಕಾರು ಪೊಲೀಸ್ ಠಾಣೆಗೆ ಮಾಹಿತಿ ನೀಡಿ

Madhyama Bimba

ಬಜಗೋಳಿ: ವಲಯ ಮಟ್ಟದ ಭಜನಾ ತರಬೇತಿ ಮತ್ತು ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ ಸಮಾರೋಪ

Madhyama Bimba

ಕಲಂಬಾಡಿ ಪದವು ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More