ಕಾರ್ಕಳ

ಕಾರ್ಕಳ: ರಸ್ತೆ ಬದಿ ನಿಲ್ಲಿಸಿದ್ದ ಮೋಟಾರ್ ಸೈಕಲ್ ಕಳವು

ಕಾರ್ಕಳ: ಆನೆಕೆರೆ ಬಸದಿ ರಸ್ತೆ ಬಳಿ ನಿಲ್ಲಿಸಿದ್ದ ಮೋಟಾರ್ ಸೈಕಲ್ ಕಳವಾದ ಘಟನೆ ಡಿ. 1ರಂದು ವರದಿಯಾಗಿದೆ.


ಜಾರ್ಕಳ ಮುಂಡ್ಲಿಯ ಗುಣಕರ ಶೆಟ್ಟಿ (56)ಯವರು ಡಿ. 1ರಂದು ಬೆಳಿಗ್ಗೆ ತನ್ನ ಸ್ಕೂಟಿ ಹಾಗೂ ಸ್ಕೂಟಿಯಲ್ಲಿ ರೆಡ್ಮಿ ಕಂಪೆನಿಯ ಸಿಮ್ ಸಹಿತ ಮೊಬೈಲ್‌ನೊಂದಿಗೆ ಆನೆಕೆರೆ ಬಸದಿ ಬಳಿ ರಸ್ತೆ ಬದಿ ನಿಲ್ಲಿಸಿ ಕೀಯನ್ನು ಸ್ಕೂಟರ್‌ನಲ್ಲಿ ಬಿಟ್ಟು ಹೋಗಿದ್ದರು. ಮಧ್ಯಾಹ್ನ ಬಂದು ನೋಡಿದಾಗ ನಿಲ್ಲಿಸಿದ್ದ ಸ್ಕೂಟಿಯನ್ನು ಯಾರೋ ಕಳ್ಳರು ಕಳವು ಮಾಡಿದ್ದರು.


ಕಳವಾದ ಸ್ಕೂಟಿಯ ಅಂದಾಜು ಮೌಲ್ಯ ರೂ. 48,000ಹಾಗೂ ಮೊಬೈಲ್‌ನ ಅಂದಾಜು ಮೌಲ್ಯ ರೂ. 3000 ಆಗಿರುತ್ತದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಕಲ್ಲೊಟ್ಟೆ ಯುವಕ ವೃಂದದಿಂದ ಸನ್ಮಾನ

Madhyama Bimba

ರವಿ ಶೆಟ್ಟಿ ಕುಕ್ಕುದಕಟ್ಟೆ ನಿಧನ

Madhyama Bimba

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಯಂಗ್ ಬ್ರಿಗೇಡ್‌ನ ರಾಜ್ಯ ಉಪಾಧ್ಯಕ್ಷರಾಗಿ ಬೈಲೂರು ಕನಿಷ್ಕ್ ಹೆಗ್ಡೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More