Blog

ಆಳ್ವಾಸ್ ಪಿಯುಸಿ ವಾಣಿಜ್ಯ ಪ್ರಥಮ, ವಿಜ್ಞಾನ ದ್ವಿತೀಯ ರಾಜ್ಯ ರ್ಯಾಂಕ್

ವಾಣಿಜ್ಯ ವಿಭಾಗದ ವಿದ್ಯಾರ್ಥಿ ರಾಜ್ಯಕ್ಕೆ ಮೊದಲ ರ್ಯಾಂಕ್ ವಿಜ್ಞಾನ ವಿಭಾಗದಲ್ಲಿ  ದ್ವಿತೀಯ ಬ್ಯಾಂಕ್ ಆಳ್ವಾಸ್ ಪದವಿಪೂರ್ವ ಕಾಲೇಜಿಗೆ ಒಂದರಿಂದ 10ರ ಒಳಗೆ 95 ಮಂದಿಗೆ ರ್ಯಾಂಕ್ ಲಭಿಸುವ ಮೂಲಕ ಉತ್ತಮ ಸಾಧನೆ ತೋರಿದೆ.  ಆಳ್ವಾಸ್ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 2026ರಲ್ಲಿ ಅಸಾಧಾರಣ ಸಾಧನೆಗೈದು ತನ್ನ ಶೈಕ್ಷಣಿಕ ಮೇಲುಗೈಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ದಿಶಾ 600ರಲ್ಲಿ 600 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಮುಂದೆ ಸಿ ಎ ಕಲಿಯುವ ಆಸಕ್ತಿ ಹೊಂದಿದ್ದು ಆಕೆಗೆ ಉಚಿತ ಕೋಚಿಂಗ್ ಸಹಿತ ಶಿಕ್ಷಣ ಹಾಗೂ 3ಲಕ್ಷ ರೂ ನಗದು ನೀಡುವುದಾಗಿ ಡಾ ಮೋಹನ್ ಆಳ್ವ ಘೋಷಿಸಿದ್ದಾರೆ. ಆಳ್ವಾಸ್ ಪದವಿಪೂರ್ವ ಕಾಲೇಜಿನ ಅನನ್ಯ ಕೆ. 2023ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದು, ದ್ವಿತೀಯ ಪಿಯು ಫಲಿತಾಂಶದ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಸಾಧನೆ ಮೆರೆದಿದ್ದಳು. ವಿಜ್ಞಾನ ವಿಭಾಗದಲ್ಲಿ ರಕ್ಷಿತಾ ಮಂಜುನಾಥ್ ಎಸ್ 598 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಶ್ರೇಷ್ಠ ಸಾಧನೆ ಮೆರೆದಿದ್ದಾಳೆ.

ಈ ವರ್ಷದ ಫಲಿತಾಂಶದಲ್ಲಿ 95 ವಿದ್ಯಾರ್ಥಿಗಳು ರಾಜ್ಯದ ಟಾಪ್ 10 ರಾಂಕ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ. 687 ವಿದ್ಯಾರ್ಥಿಗಳು 95% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದರೆ, 1557 ವಿದ್ಯಾರ್ಥಿಗಳು 90% ಕ್ಕಿಂತ ಅಧಿಕ, 1892 ವಿದ್ಯಾರ್ಥಿಗಳು 85% ಕ್ಕಿಂತ ಹೆಚ್ಚು (ಡಿಸ್ಟಿಂಕ್ಷನ್) ಅಂಕಗಳನ್ನು ಗಳಿಸಿದ್ದಾರೆ. 285 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪಲ್ಲವಿ ಕೆ. ಸಿ – 597, ಅಂಕಿತಾ ಬಸಪ್ಪ ಕೊನ್ನೂರ 596, ಜ್ಞಾನಶ್ರೀ ಡಿ ಅರಳ 596, 596, ໖ ໑ ಬಾಲಚಂದ್ರ ಹೆಗಡೆ 596, ಲಿಜ್ಜಿತಾ ವರ್ಜೀನಿಯಾ ಡಿ ಮೆಲ್ಲೋ – 596, ನೇಹಾ ಪಿ ಕಕರಡ್ಡಿ – 596, ಐಶ್ವರ್ಯ 595, ಮಾನವಿ ಡಿ ಎಸ್ 595, 2 ಹೆಗ್ಗರ್ 595, ಜಶ್ ಕಾವೇರಿಯಪ್ಪ ಎ. ಎಂ. 595, ವೈಷ್ಣವಿ ರಾವ್ 595, ಅಕ್ಷಯಕುಮಾರ್ ಸೋಮಶೇಖರ ಗುಗ್ಗಾರಿ 595 ಅಂಕವನ್ನು ಪಡೆದು ವಿಶೇಷ ಸಾಧನೆ ಮೆರೆದಿದ್ದಾರೆ.

ಗಣಿತ ವಿಷಯದಲ್ಲಿ 199, ಸಂಸ್ಕೃತ -122, ಬಿಸಿನೆಸ್ ಸ್ಟಡೀಸ್-86, ಕಂಪ್ಯೂಟರ್ ಸೈನ್ಸ್ -86, ಭೌತಶಾಸ್ತ್ರ-85, ಕನ್ನಡ-82, ಬೇಸಿಕ್ ಮ್ಯಾನ್ಸ್- 54, ಅಕೌಂಟೆನ್ಸಿ-53, ಜೀವಶಾಸ್ತ್ರ-49, ಸಂಖ್ಯಾಶಾಸ್ತ್ರ-45, ಅರ್ಥಶಾಸ್ತ್ರ-36, ರಸಾಯನಶಾಸ್ತ್ರ-21, ಹಿಂದಿ-13, ಎಲೆಕ್ಟ್ರಾನಿಕ್ಸ್-6, ಇಂಗ್ಲೀಷ್-3, ಸಮಾಜಶಾಸ್ತ್ರ-2, ರಾಜ್ಯಶಾಸ್ತ್ರ-1, ಅರೇಬಿಕ್-1 ವಿದ್ಯಾರ್ಥಿಗಳು 100ಕ್ಕೆ ನೂರು ಅಂಕಗಳನ್ನು ಗಳಿಸಿದ್ದಾರೆ.

6 ವಿಷಯಗಳಲ್ಲಿ 100ಕ್ಕೆ ನೂರು ಅಂಕಗಳನ್ನು ಒರ್ವ ವಿದ್ಯಾರ್ಥಿ, 5 ವಿಷಯಗಳಲ್ಲಿ 4, 4 ವಿಷಯಗಳಲ್ಲಿ 20, 3 ವಿಷಯಗಳಲ್ಲಿ 66, 2 ವಿಷಯದಲ್ಲಿ 147, ಒಂದು ವಿಷಯದಲ್ಲಿ 481 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದುಕೊಂಡಿದ್ದಾರೆ. 76 ಕ್ರೀಡಾ ವಿಭಾಗದ ವಿದ್ಯಾರ್ಥಿಗಳು ದತ್ತು ಸ್ವೀಕಾರ ಯೋಜನೆಯಡಿ ಉತ್ತಮ ಅಂಕ ಪಡೆದುಕೊಂಡಿದ್ದಾರೆ. 9ಮಂದಿ ರಾಷ್ಟ್ರೀಯ ಕ್ರೀಡಾಪಟುಗಳು ಶೇಕಡಾ 95ಕ್ಕಿಂತ ಅಧಿಕ ಅಂಕ ಪಡೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಪ್ರೊ. ಎಂ. ಸದಾಕತ್, ಉಪಪ್ರಾಂಶುಪಾಲೆ ಝಾನ್ಸಿ ಪಿಎನ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ., ಕಲಾ ವಿಭಾಗದ ವೇಣುಗೋಪಾಲ ಶೆಟ್ಟಿ,ಅಧ್ಯಾಪಿಕೆ ವಿದ್ಯಾ ಉಪಸ್ಥಿತರಿದ್ದರು.

Related posts

ವಿದ್ಯಾ ನಿಕೇತನ ಶಾಲೆಯ ಮಕ್ಕಳ ಸಾಧನೆ

Madhyama Bimba

ಮಿಯ್ಯಾರುನಲ್ಲಿ ಭೀಕರ ರಸ್ತೆ ಅಪಘಾತ – ರಸ್ತೆ ಸಮಸ್ಯೆ – ಹೋರಾಟದ ಎಚ್ಚರಿಕೆ ನೀಡಿದ ಶೇಕ್ ಶಬೀರ್

Madhyama Bimba

ಸತೀಶ್ ಆಚಾರ್ಯರಿಗೆ ರಂಗ ಭೂಮಿ ಕಲಾ ರತ್ನ ಪ್ರಶಸ್ತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More