ಕಾರ್ಕಳ

ಬಸ್ರಿ ಶಾಲೆ ಬೈಲೂರು ಶಾಲಾ ಮಕ್ಕಳಿಗೆ ಡಿಕ್ಷನರಿ ವಿತರಣೆ, ಧನಸಹಾಯ ಹಸ್ತಾಂತರ ಹಾಗೂ ಮಾಹಿತಿ ಕಾರ್ಯಗಾರ

ಬೈಲೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಬೈಲೂರು ಇಲ್ಲಿಯ ಹಳೆ ವಿದ್ಯಾರ್ಥಿ ಸಂಘ, ರೋಟರಿ ಕ್ಲಬ್ ಕಲ್ಯಾಣಪುರ ಇವರ ಜಂಟಿ ಆಶ್ರಯದಲ್ಲಿ ಶಾಲಾ ಮಕ್ಕಳಿಗೆ ಉಚಿತ ಡಿಕ್ಷನರಿ, ಧನ ಸಹಾಯ ಹಸ್ತಾಂತರ ಹಾಗೂ ಮಾಹಿತಿ ಕಾರ್ಯಗಾರ ಕಾರ್ಯಕ್ರಮವು ಜು. 11೧ರಂದು ಬಸ್ರಿ ಶಾಲೆಯಲ್ಲಿ ನಡೆಯಿತು.


ರೋಟರಿ ಕ್ಲಬ್ ಸದಸ್ಯರಾದ ವಿನಯ ಕುಮಾರ್ ಕಬ್ಯಾಡಿಯವರು ಮಕ್ಕಳಿಗೆ ಉಚಿತವಾಗಿ ಕೂಡಲ್ಪಟ್ಟ ಶಬ್ದಕೋಶವನ್ನು ಹಸ್ತಾಂತರಿಸಲಾಯಿತು ಹಾಗೂ ಕಲ್ಯಾಣ್‌ಪುರ ರೋಟರಿ ಕ್ಲಬ್‌ನಿಂದ ರೂ. 10ಸಾವಿರ ಧನಸಹಾಯದ ಚೆಕ್‌ನ್ನು ಶಾಲೆಗೆ ನೀಡಿದರು.


ವಿನಯ್ ಕುಮಾರ್ ಕಬ್ಯಾಡಿ ಮಕ್ಕಳು ಕಲಿಕೆಯ ಅಭ್ಯಾಸವನ್ನು ಮಾಡುವ ವಿಧಾನದ ಬಗ್ಗೆ ಮಾಹಿತಿ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷರಾದ ವಸಂತ ಕುಲಾಲ್ ವಹಿಸಿದ್ದರು.
ಕಲ್ಯಾಣಪುರ ರೋಟರಿ ಕ್ಲಬ್ ಅಧ್ಯಕ್ಷ ಗಿರೀಶ್ಚಂದ್ರ ಆರ್., ಸದಸ್ಯ ದಿವಾಕರ್, ಉದ್ಯಮಿ ಗುರುಪ್ರಸಾದ್ ಶೆಟ್ಟಿ ಜಾರ್ಕಳ, ಕಲ್ಯಾಣಪುರ ರೋಟರಿ ಕ್ಲಬ್ ನ ಕಾರ್ಯದರ್ಶಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿಶಿರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಹರೀಶ್ ಆಚಾರ್ಯ, ಎಸ್‌ಡಿಎಂಸಿ ಉಪಾಧ್ಯಕ್ಷೆ ಶ್ರೀಮತಿ ರೂಪಾ ಆಚಾರ್ಯ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಸಂತಿ ಹೆಚ್. ಜಿ. ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಮಕ್ಕಳಿಗೆ ಕೊಡೆ ನೀಡುವಲ್ಲಿ ಸಹಾಯಧನವಿತ್ತ ಉದ್ಯಮಿ ಗುರುಪ್ರಸಾದ್ ಶೆಟ್ಟಿ, ಶಬ್ದಕೋಶ ಉಚಿತವಾಗಿ ನೀಡಿದ ವಿನಯ್ ಕುಮಾರ್ ಕಬ್ಯಾಡಿ ಹಾಗೂ ಶಾಲಾ ಮಕ್ಕಳಿಗೆ ಗಿಡಗಳನ್ನು ಉಚಿತವಾಗಿ ನೀಡಿದ ರೋಟರಿ ಕ್ಲಬ್ ಅಧ್ಯಕ್ಷ ಗಿರೀಶ್ಚಂದ್ರ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಸಹ ಶಿಕ್ಷಕರಾದ ದಿನೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ವಸಂತಿ ಹೆಚ್. ಜಿ. ಸ್ವಾಗತಿಸಿ, ಸಹಶಿಕ್ಷಕಿ ಕಾವೇರಿ ವಂದಿಸಿದರು.

Related posts

ಮಾಹೆ ಫಲಿತಾಂಶ – 2026

Madhyama Bimba

ಹೆಬ್ರಿ: ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ- ಪ್ರಕರಣ ದಾಖಲು

Madhyama Bimba

ನಾಡ್ಪಾಲು ಗ್ರಾಮದಲ್ಲಿ ಹುಲಿ, ಚಿರತೆಗಳ ಉಪಟಳ: ಸಾಕು ಪ್ರಾಣಿಗಳಿಗಿಲ್ಲ ರಕ್ಷಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More