ಮೂಡುಬಿದಿರೆ

ಜಿ.ಎಲ್. ಆಚಾರ್ಯ ಜುವೆಲರ್ಸ್‌ ಮೂಡುಬಿದಿರೆ- ಎ.12: ನೂತನ ವಿಶಾಲ ಮಳಿಗೆ ಉದ್ಘಾಟನೆ

ಮೂಡುಬಿದಿರೆ: ಪುತ್ತೂರಿನ ಹೆಸರಾಂತ ಹಾಗೂ ದಕ್ಷಿಣ ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಚಿನ್ನಾಭರಣ ಸಂಸ್ಥೆ “ಜಿ ಎಲ್ ಆಚಾರ್ಯ ಜುವೆಲರ್ಸ್‌ 5ನೇ ಶಾಖೆ ಮೂಡುಬಿದಿರೆಯಲ್ಲಿ 2024ರಲ್ಲಿ ಶುಭಾರಂಭಗೊಂಡಿತ್ತು.ಈಗ ತನ್ನ ನವೀಕೃತ ನೂತನ ಶಾಖೆಯು ಮೂಡುಬಿದಿರೆಯ ನವಮಿ ಪ್ಲಾಝಾ ಬಸ್‌ಸ್ಟ್ಯಾಂಡ್ ಎದುರಿಗೆ, ಮುಖ್ಯರಸ್ತೆಗೆ ಸ್ಥಳಾಂತರಗೊಂಡಿದೆ.

ಈ ನೂತನ ವಿಶಾಲ ಮಳಿಗೆಯ ಉದ್ಘಾಟನೆ ಎ.12ರಂದು ಬೆಳಗ್ಗೆ 10.30ಕ್ಕೆ ನೆರವೇರಲಿದೆ. ಶಾಸಕ ಉಮಾನಾಥ್‌ ಕೋಟ್ಯಾನ್‌, ಮಾಜಿ ಸಚಿವ ಅಭಯಚಂದ್ರ ಜೈನ್, ಆಳ್ವಾಸ್‌ ಎಜುಕೇಶನ್‌ ಟ್ರಸ್ಟ್‌ ಸ್ಥಾಪಕಾಧ್ಯಕ್ಷ ಮೋಹನ್ ಆಳ್ವ, ಮೂಡುಬಿದಿರೆಯ ಶ್ರೀ ಧನಲಕ್ಷ್ಮೀ ಕ್ಯಾಶ್ಯೂ ಎಕ್ಸ್‌ಪೋರ್ಟ್ಸ್ ನ ಶ್ರೀಪತಿ ಭಟ್, ಚೌಟರ ಅರಮನೆಯ ಕುಲದೀಪ್ ಎಂ., ನವಮಿ ಗ್ರೂಪ್‌ ಆಡಳಿತ ನಿರ್ದೇಶಕ ನಂದಕುಮಾರ್ ಕುಡ್ವ ಆಗಮಿಸಲಿದ್ದಾರೆ ಎಂದು ಸಂಸ್ಥೆಯ ಚೇರ್ಮನ್‌ ಜಿ.ಎಲ್.ಬಲರಾಮ್ ಆಚಾರ್ಯ, ನಿರ್ದೇಶಕರಾದ ಲಕ್ಷ್ಮಿಕಾಂತ್ ಬಿ.ಆಚಾರ್ಯ, ಸುಧನ್ವ ಬಿ.ಆಚಾರ್ಯ ತಿಳಿಸಿದ್ದಾರೆ.


ವಿಶೇಷ ಕೊಡುಗೆ
ನೂತನ ಮಳಿಗೆಯ ಉದ್ಘಾಟನೆ ಸಲುವಾಗಿ ಎ.12ರಿಂದ 20ರವರೆಗೆ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳು ಲಭ್ಯವಿವೆ. 10 ಗ್ರಾಂ ಚಿನ್ನಾಭರಣಗಳ ಮೇಲೆ 5,000ರೂ. ರಿಯಾಯಿತಿ, ಬೆಳ್ಳಿ ಆಭರಣಗಳ ಮೇಲೆ ಪ್ರತೀ ಕೆ.ಜಿ.ಗೆ 6,000 ರೂ.ರಿಯಾಯಿತಿ, ವಜ್ರದ ಆಭರಣಗಳ ಮೇಲೆ ಪ್ರತೀ ಕ್ಯಾರಟ್‌ಗೆ 7,000 ರೂ. ರಿಯಾಯಿತಿ ನೀಡಲಾಗುತ್ತಿದೆ.

ಈ ನೂತನ ಮಳಿಗೆಯಲ್ಲಿ ಸಾಂಪ್ರದಾಯಿಕ ಹಾಗೂ ಆಧುನಿಕ ವಿನ್ಯಾಸಗಳ ಚಿನ್ನಾಭರಣಗಳು, ಬೆಳ್ಳಿ ಮತ್ತು ವಜ್ರಾಭರಣಗಳ ವೈವಿಧ್ಯಮಯ ಸಂಗ್ರಹ ಲಭ್ಯವಿದ್ದು, ಎಲ್ಲ ವಯೋಮಾನದ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಸಮಾಜದ ಎಲ್ಲಾ ವರ್ಗದ ಜನರ ಅಭಿರುಚಿಗೆ ತಕ್ಕಂತೆ ಚಿನ್ನ,ಬೆಳ್ಳಿ ಮತ್ತು ವಜ್ರಾಭರಣಗಳ ವಿನೂತನ ಕಲೆಕ್ಷನ್‌ಗಳು ಇಲ್ಲಿ ಲಭ್ಯವಿದೆ. ವಿಶಾಲವಾದ ಪ್ರದರ್ಶನ ವ್ಯವಸ್ಥೆ, ಸುಸಜ್ಜಿತ ಒಳಾಂಗಣ ವಿನ್ಯಾಸ ಮತ್ತು ಅತ್ಯಾಧುನಿಕ ಭದ್ರತಾ ವ್ಯವಸ್ಥೆಗಳು ಶೋರೂಂನ ಪ್ರಮುಖ ವೈಶಿಷ್ಟ್ಯಗಳಾಗಿವೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟನೆ ತಿಳಿಸಿದೆ.

Related posts

ಜಿಲ್ಲಾಮಟ್ಟದ ಪ.ಪೂ. ಕಾಲೇಜುಗಳ ಖೋ-ಖೋ ಪಂದ್ಯಾಟ: ೧೭ನೇ ಬಾರಿಗೆ ಆಳ್ವಾಸ್‌ಗೆ ಅವಳಿ ಪ್ರಶಸ್ತಿ

Madhyama Bimba

ಆದೂರು , ಮಂದಾರ ಸಹಿತ 10 ಮಂದಿಗೆ ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿ

Madhyama Bimba

  ಬೋರುಗುಡ್ಡೆ: ಶಿಕ್ಷಕರಿಗೆ ಅಭಿನಂದನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More