ಕಾರ್ಕಳ

ಕಾರ್ಕಳ ರೋಟರಿ ಕ್ಲಬ್‌ಗೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

ರೋಟರಿ ಕ್ಲಬ್ ಕಾರ್ಕಳ ಇಲ್ಲಿಗೆ ರೋಟರಿ ಜಿಲ್ಲೆ, 3182 ರ ಜಿಲ್ಲಾ ಗವರ್ನರ್ ಎಂಪಿಹೆಚ್‌ಎಫ್ ಕೆ. ಪಾಲಾಕ್ಷರವರು ಅಧಿಕೃತ ಭೇಟಿ ನೀಡಿದರು.

“ಕಾಬೆಟ್ಟು ಅಂಬೇಡ್ಕರ್ ಭವನ” ದಲ್ಲಿ ನಡೆದ ಈ ಸಮಾರಂಭದಲ್ಲಿ ರೋಟರಿ ಕ್ಲಬ್ಬಿನ ಅಧ್ಯಕ್ಷ ರೋ. ಪಿಹೆಚ್‌ಎಫ್ ಕೆ.ನವೀನ್ ಚಂದ್ರ ಶೆಟ್ಟಿ ಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.

ಸಮಾರಂಭದ ಮುಖ್ಯ ಅತಿಥಿ ಜಿಲ್ಲಾ ಗವರ್ನರ್ ರೋ.ಎಂಪಿಹೆಚ್‌ಎಫ್ ಕೆ.ಪಾಲಾಕ್ಷ ರವರು ಮಾತನಾಡುತ್ತಾ ಕಾರ್ಕಳ ರೋಟರಿ ಕ್ಲಬ್‌ನ ಸಮುದಾಯ ಸೇವಾ ಕಾರ್ಯಕ್ರಮಗಳು, ಶಿಕ್ಷಣಕ್ಕೆ ನೀಡುತ್ತಿರುವ ಸೇವೆಗಳು, ಪರಿಸರ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಖ್ಯಾತ ಗುತ್ತಿಗೆದಾರ ಸುಜಯ್ ಕುಮಾರ್ ಶೆಟ್ಟಿ ಮತ್ತು ಚಲನಚಿತ್ರ ನಟ, ನಿರ್ದೇಶಕ ಮತ್ತು ಪ್ರಸಿದ್ಧ “ಪ್ರಶಂಸಾ” ನಾಟಕ ತಂಡದ ಕಲಾವಿದ ಪ್ರಸನ್ನ ಶೆಟ್ಟಿ ಬೈಲೂರ್ ಇವರನ್ನು ಸನ್ಮಾನಿಸಲಾಯಿತು.

ರೋಟರಿ ಗೃಹ ಪತ್ರಿಕೆ “ಸರ್ವಿಸ್” ಅನ್ನು ಗವರ್ನರ್ ಬಿಡುಗಡೆಗೊಳಿಸಿದರು.
ಸಹಾಯಕ ಗವರ್ನರ್ ರೋ. ಪಿಹೆಚ್‌ಎಫ್ ವಿಘ್ನೇಶ್ ಶೆಣೈ, ವಲಯ ಸೇನಾನಿ ರೋ. ಎಂಪಿಹೆಚ್‌ಎಫ್ ಜಾನ್ ಆರ್. ಡಿಸಿಲ್ವ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ರೋ. ಸುಬ್ರಹ್ಮಣ್ಯ ದೇವಾಡಿಗ ಅತಿಥಿಗಳನ್ನು ಪರಿಚಯಿಸಿದರು. ರೋ. ಒರಿಜ ಸುವರ್ಣ ನಾಯಕ್ ರೋಟರಿ ನಿಧಿಗೆ ಟಿಆರ್‌ಎಫ್ ಮೂಲಕ ದೇಣಿಗೆ ನೀಡಿದವರನ್ನು ಗುರುತಿಸಿದರು. ಕಾರ್ಯದರ್ಶಿ ರೋ. ಚೇತನ್ ನಾಯಕ್ ವಾರ್ಷಿಕ ವರದಿ ವಾಚಿಸಿದರು.

ಜಿಲ್ಲಾ ಗವರ್ನರ್ ರೋ. ಎಂಪಿಹೆಚ್‌ಎಫ್ ಕೆ.ಪಾಲಾಕ್ಷರವರು ರೋಟರಿ ಕ್ಲಬ್ ವತಿಯಿಂದ ಮಾಡಿದ ವಿವಿಧ ಯೋಜನೆಗಳನ್ನು ವೀಕ್ಷಿಸಿ ಅವುಗಳ ಉದ್ಘಾಟನೆ ಹಾಗೂ ಹಸ್ತಾಂತರ ಕಾರ್ಯವನ್ನು ನೆರವೇರಿಸಿದರು.

ತೆಳ್ಳಾರ್ ಮತ್ತು ಮುಂಡ್ಲಿ ಶಾಲೆಗಳಿಗೆ 40,000 ವೆಚ್ಚದ 2 ಶುದ್ಧ ಕುಡಿಯುವ ನೀರಿನ ಘಟಕ, ಕಾಬೆಟ್ಟು ಸ. ಹಿ. ಪ್ರಾ. ಶಾಲೆಗೆ ಸುಮಾರು 80,000 ವೆಚ್ಚದ ಬೆಂಚ್ ಮತ್ತು ಡೆಸ್ಕುಗಳು, ಕಲ್ಲಂಬಾಡಿ ಪದವು ಶಾಲೆಗೆ 45,000 ವೆಚ್ಚದ ಪ್ರೊಜೆಕ್ಟರ್, 60,000 ವೆಚ್ಚದಲ್ಲಿ 6 ಸೂಚನಾ ಫಲಕಗಳು, ಶಿರ್ಲಾಲು ಶಾಲೆಗೆ 10,000 ವೆಚ್ಚದ ಧ್ವನಿವರ್ಧಕ, ಬಸ್ರಿ ಬೈಲೂರ್ ಶಾಲೆಗೆ 2 ಕಪಾಟುಗಳು, ವಿಜೇತ ಶಾಲೆಗೆ 12,000 ವೆಚ್ಚದ ಪ್ಯಾಡ್ ಬರ್ನಿಂಗ್ ಯಂತ್ರ, ಬಜಗೋಳಿ ಶಾಲೆಗೆ 40,000 ವೆಚ್ಚದಲ್ಲಿ ಮೇಲ್ಚಾವಣಿ , ಕಲ್ಲಂಬಾಡಿ ಪದವು ಅಂಗನವಾಡಿಗೆ 15,000 ವೆಚ್ಚದ ಪೀಠೋಪಕರಣ, ಪುಲ್ಕೆರಿ ಅಂಗನವಾಡಿ ಪುಟಾಣಿಗಳಿಗೆ 10,000ವೆಚ್ಚದ ಸೈಕಲ್, ಚೈರ್, ಚಾಪೆ ಗಳನ್ನು ಹಸ್ತಾಂತರಿಸಲಾಯಿತು.

ಗಾಯತ್ರಿ ವಿಜೇಂದ್ರ ಪ್ರಾರ್ಥಿಸಿದರು. ರೋ.ಚೇತನ್ ನಾಯಕ್ ವಂದಿಸಿದರು.

Related posts

ಮುನಿಯಾಲು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಾರ್ಷಿಕೋತ್ಸವ – ಪ್ರತಿಭಾ ಪುರಸ್ಕಾರ

Madhyama Bimba

ಮಾ. 24: ಕುಚ್ಚೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರಂಗಪೂಜಾ ಮಹೋತ್ಸವ ಹಾಗೂ ಕೆಂಡೋತ್ಸವ

Madhyama Bimba

ನಕ್ರೆ: ದಿ. ಯಶವಂತಿ ಎಸ್ ಸುವರ್ಣ ಹುಟ್ಟುಹಬ್ಬದ ಪ್ರಯುಕ್ತ ಅಶಕ್ತರಿಗೆ ಆರ್ಥಿಕ ನೆರವು ವಿತರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More