Blog

ಬೈಲೂರಿನಲ್ಲಿ ನಮನ ಚಿತ್ರಕಲಾ ಪ್ರದರ್ಶನ ಉದ್ಘಾಟನೆ


ಬೈಲೂರು: ನಮ್ಮ ಪರಿಸರದ ಮಣ್ಣಿನ ಸಾರವನ್ನು ಅರ್ಥೈಸುವ
‘ನಮನ’ ಚಿತ್ರಕಲಾ ಪ್ರದರ್ಶನದ ಉದ್ಘಾಟನಾ ಸಮಾರಂಭವು
ಬೈಲೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಪ್ರಥಮ ಮಹಡಿಯ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ಏ.10 ರಂದು ಉದ್ಘಾಟನೆಗೊಂಡಿತು.
ಬಹು ಯಕ್ಷಗಾನ ಮೇಳಗಳ ಸಂಚಾಲಕರಾದ ಪಿ. ಕಿಶನ್ ಹೆಗ್ಡೆ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ, ಜಾಣ್ಮೆ, ಕೌಶಲ್ಯ, ಮತ್ತು ಕ್ರಿಯಾತ್ಮಕ ಪ್ರತಿಭೆಗೆ ಉತ್ತಮವಾದ ವೇದಿಕೆಯಾಗಿದೆ ಎಂದರು.

ಕಣಜಾರು ಲೂರ್ಡ್ಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಪ್ರಾಂಶುಪಾಲರಾದ ಜಾಸ್ಮಿನ್ ಪಿಂಟೋ, ಬೈಲೂರಿನ ಉಧ್ಯಮಿ ರಮೇಶ್ ಕಿಣಿ, ಉದಯಕುಮಾರ್ ಹೆಗ್ಡೆ,  ತಾಲೂಕು ಕ್ರಿಕೆಟ್ ಅಸೋಸಿಯೇಶನ್ ಕಾರ್ಕಳದ ಅಧ್ಯಕ್ಷರಾದ ಶಾಕೀರ್ ಹುಸೇನ್  ಉಪಸ್ಥಿತರಿದ್ದರು.

ಸಾಕ್ಷಿ ಎನ್. ಸಾಲ್ಯಾನ್ ಪ್ರಾರ್ಥಿಸಿದರು
ಹರೀಶ್ ಸಾಗಾ ಪ್ರಾಸ್ತಾವನೆಗೈದರು ಶ್ರೀಮತಿ ರೇಖಾ ದೇವಾಡಿಗ ಸ್ವಾಗತಿಸಿದರು ಆರಾಧ್ಯ ಎಸ್. ವಂದಿಸಿದರು. ಶ್ರೀಮತಿ ಶಿಲ್ಪಾ ನಿರೂಪಿಸಿದರು.

ಚಿತ್ರಕಲಾ ಪ್ರದರ್ಶನದಲ್ಲಿ ಪಂಚ ಗಂಗಾವಳಿ, ಥೀಂ ಪಾರ್ಕ್, ಮೀನುಗಾರರು, ಕೋಟಿಲಿಂಗೇಶ್ವರ, ಅನಂತ ಶಯನ, ಸಿದ್ದಿವಿನಾಯಕ, ಗೋ ಶಾಲಾ, ತೈಯಂ, ಬೇಸಾಯ, ಟೀ ಎಸ್ಟೇಟ್, ಪ್ರೇಯರ್, ಕಾಂತಾರ, ಸಮುದ್ರ ಸ್ನಾನ, ಪಾರ್ಧನ, ಹುಲಿ ವೇಷ, ಬ್ರಹ್ಮಲಿಂಗೇಶ್ವರ, ಕಂಬಳ, ಬಸದಿ, ಕಟ್ಟೆ ಪೂಜೆ, ಬಲಿ, ಕೋಟೆ ಆಂಜನೇಯ, ಜಾತ್ರೆ, ವಿನಾಯಕ, ಸುರಪಾನ, ಗೊಂಬೆಯಾಟ, ಬಾಹು ಬಲಿ, ಕೋಳಿ ಅಂಕ, ನಂದಾ ದೀಪ, ಭಕ್ತಿ, ಆನೆಕೆರೆ, ರಥಬೀದಿ, ಜೈನ
ಟೆಂಪಲ್ ಮತ್ತು ಡೊಳ್ಳು ಕುಣಿತ ಎಂಬ ಕಲಾಕೃತಿಗಳು 18 x18 ಇಂಚಿನ ಆಕ್ರಾಲಿಕ್ ಕ್ಯಾನ್ಸಾಸ್, ಚಾರ್ಕೋಲ್ ಮಿಶ್ರ ಮಾಧ್ಯಮದ ಶೇಡಿಂಗ್ಸ್‌ನ ಒಟ್ಟು 33 ಕಲಾಕೃತಿಗಳು ಪ್ರದರ್ಶನ ಗೊಂಡವು.ಏ.12 ರಂದು ಸಂಜೆ 7.00ಗಂಟೆಯ ತನಕ ಸಾರ್ವಜನಿಕ ವೀಕ್ಷಣೆಗೆ ತೆರೆದಿಡಲಾಗುತ್ತಿದ್ದು, ಮಕ್ಕಳ ಪ್ರತಿಭೆಯ ಉತ್ತಮ ಕಲಾಕೃತಿಯನ್ನು ಆಯ್ಕೆ ಮಾಡಿದ ಸಾರ್ವಜನಿಕರಿಗೂ 5,000/- ಮೊತ್ತದ ಅದೃಷ್ಟಶಾಲಿಯ ಬಹುಮಾನವನ್ನು ಪಡೆದುಕೊಳ್ಳಲು ಅವಕಾಶವಿದೆ.

Related posts

ಎನ್ ಪಿ ಚಿಲ್ ಸ್ಟೇಷನ್ ಉದ್ಘಾಟನೆ

Madhyama Bimba

ಮೊಹಮ್ಮದ್ ಶರೀಫ್ ಅವರಿಗೆ ‘ರಾಷ್ಟ್ರೀಯ ಮಾಧ್ಯಮ ರತ್ನ’ ಪ್ರಶಸ್ತಿ

Madhyama Bimba

ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ ಮಟ್ಟಕ್ಕೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More