ಕಾರ್ಕಳಹೆಬ್ರಿ

ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಇದರ ಅಧ್ಯಕ್ಷರಾಗಿ ಸುನೀತ ಹೆಬ್ಬಾರ್ ಆಯ್ಕೆ

ಹೆಬ್ರಿ : ಅಲಯನ್ಸ್ 275 S ವ್ಯಾಪ್ತಿಯ ನೂತನವಾಗಿ ಆರಂಭಗೊಂಡಿರುವ   ಲೇಡಿ ಅಲಯನ್ಸ್ ಕ್ಲಬ್ ಹೆಬ್ರಿ ಇದರ ನೂತನ ಅಧ್ಯಕ್ಷರಾಗಿ ಸುನೀತಾ ಹೆಬ್ಬಾರ್ ಆಯ್ಕೆಯಾಗಿದ್ದಾರೆ.


ಸುನೀತಾ ಹೆಬ್ಬಾರ್ ಇವರು ಈಗಾಗಲೇ ಹಲವಾರು ಸಾಮಾಜಿಕ ಹಾಗು ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜ ಮುಖಿ ಸೇವೆಗಳನ್ನು ಸಲ್ಲಿಸಿರುತ್ತಾರೆ.

ಲೇಡಿ ಅಲಯನ್ಸ್ ಕ್ಲಬ್ ಹೆಬ್ರಿ ಇದರ ಕಾರ್ಯದರ್ಶಿಯಾಗಿ ರಮ್ಯಕಾಂತಿ ಹಾಗೂ ಕೋಶಾಧಿಕಾರಿಯಾಗಿ ಅಮೃತ ಆಯ್ಕೆಯಾಗಿರುತ್ತಾರೆ.
ಅಲಯನ್ಸ್ ಜಿಲ್ಲೆ 275S ರ ಪ್ರಥಮ ಉಪಜಿಲ್ಲಾ ಗವರ್ನರ್ ಅಲೈ ಸುನಿಲ್ ಕುಮಾರ್ ಶೆಟ್ಟಿ ಮತ್ತು ದ್ವಿತೀಯ ಉಪ ಜಿಲ್ಲಾ ಗವರ್ನರ್ ಅಲೈ ಸುಧಾಕರ್ ಹೆಗ್ಡೆ ಹಾಗೂ ಜಿಲ್ಲಾ ಸಂಪುಟ ಕಾರ್ಯದರ್ಶಿ ಜಗದೀಶ್ ಹೊಳ್ಳ ಇವರ ಮಾರ್ಗದರ್ಶನದಲ್ಲಿ ಲೇಡಿ ಅಲಯನ್ಸ್ ಕ್ಲಬ್ ಹೆಬ್ರಿ ಆರಂಭಗೊಂಡಿರುತ್ತದೆ ..

ಅಲಯನ್ಸ್ ಕ್ಲಬ್ ಹೆಬ್ರಿ ಇದರ ಅಧ್ಯಕ್ಷರಾದ ಕೆ . ರಾಮಚಂದ್ರ ಭಟ್ ಮತ್ತು ಕಾರ್ಯದರ್ಶಿ ಬಾಲಚಂದ್ರ ಮುದ್ರಾಡಿ  ಉಪಸ್ಥಿತರಿದ್ದು ನೂತನ ಅಧ್ಯಕ್ಷ ಹಾಗು ಕಾರ್ಯದರ್ಶಿಗೆ ಶುಭ ಹಾರೈಸಿದರು.

ಸಭೆಯಲ್ಲಿ ನೂತನ ಅಧ್ಯಕ್ಷೆ ಸುನೀತಾ ಹೆಬ್ಬಾರ್ ಸ್ವಾಗತಿಸಿದರು. ಕಾರ್ಯದರ್ಶಿ ರಮ್ಯಕಾಂತಿ ವಂದಿಸಿದರು .

Related posts

ಕುಕ್ಕುಂದೂರು ಹಾಲು ಉತ್ಪಾದಕರ ಸಹಕಾರ ಸಂಘದ  ನೂತನ ಕಟ್ಟಡ ಗೋಕುಲ ಉದ್ಘಾಟನಾ ಸಮಾರಂಭ

Madhyama Bimba

ಡಾ. ಎಂ. ವೀರಪ್ಪ ಮೊಯಿಲಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ

Madhyama Bimba

ನಮ್ಮ ಬದುಕಿನಲ್ಲಿ ಗುರಿ ತಲುಪಬೇಕಾದರೆ ಶಿಸ್ತು ಅತೀ ಅಗತ್ಯ : ಡಾ.ರವಿಪ್ರಸಾದ್ ಹೆಗ್ಡೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More