ಕಾರ್ಕಳಹೆಬ್ರಿ

ಹೆಬ್ರಿ ಧಾರ್ಮಿಕ ಶಿಕ್ಷಣ ಶಿಬಿರಕ್ಕೆ ಪೇಜಾವರ ಶ್ರೀ ಭೇಟಿ

ಹೆಬ್ರಿ ಗಿಲ್ಲಾಳಿ ಶ್ರೀ ವಿಶ್ವೇಶಕೃಷ್ಣ ಗೋಶಾಲೆಯಲ್ಲಿ ಶ್ರೀ ಪೇಜಾವರ ಮಠ ಉಡುಪಿ, ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಬೆಂಗಳೂರು ಮತ್ತು ಶಿಬಿರ ಸಮಿತಿ ಹೆಬ್ರಿ ಇವರ ಸಹಯೋಗದಲ್ಲಿ ನಡೆಯುತ್ತಿರುವ ಧಾರ್ಮಿಕ ಶಿಕ್ಷಣ ಶಿಬಿರಕ್ಕೆ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಭೇಟಿ ನೀಡಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿ ನೀಡಿದ ಸಂಸ್ಕಾರ, ಶಿಕ್ಷಣ ಮಹತ್ತರ ಪಾತ್ರ ವಹಿಸುತ್ತದೆ. ಆದ್ದರಿಂದ ಧಾರ್ಮಿಕ ವಿಚಾರಗಳನ್ನು ತಿಳಿದುಕೊಂಡು ಸಮಾಜಕ್ಕೆ ಉತ್ತಮ ಆದರ್ಶ ವ್ಯಕ್ತಿಯಾಗಬೇಕಾದರೆ ವಿಪ್ರರು ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿ ಅನುಗ್ರಹಿಸಿದರು.

ಈ ಸಂದರ್ಭದಲ್ಲಿ ಗೋಶಾಲೆಯ ಟ್ರಸ್ಟ್ ನ ವಿದ್ವಾನ್ ಪದ್ಮನಾಭ ಆಚಾರ್ಯ, ವಿದ್ವಾನ್ ವಿಷ್ಣುಮೂರ್ತಿ ಆಚಾರ್ಯ ಗಿಲ್ಲಾಳಿ, ಶಿಬಿರ ಸಮಿತಿಯ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ, ಸುದರ್ಶನ ಕಲ್ಕೂರ್, ಚಂದ್ರಶೇಖರ ಭಟ್ ಬಲ್ಲಾಡಿ , ವಿದ್ವಾನ್ ರಾಘವೇಂದ್ರ ಅಡಿಗ ಮತ್ತು ಶಿಬಿರದ ಅಧ್ಯಾಪಕರಾದ, ಶ್ರೀವಾಸ ಆಚಾರ್ಯ, ಶ್ರೀಧಾಮ ಆಚಾರ್ಯ, ಶ್ರೀವತ್ಸ, ಸುಬ್ರಹ್ಮಣ್ಯ ಅಡಿಗ, ಅಮೋಘ ಭಟ್ ಮತ್ತು ಹರೀಶ್ ಭಟ್ ಹಾಗೂ ಪೋಷಕರು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಕಾರ್ಕಳ: ಕಾರುಗಳ ನಡುವೆ ಅಪಘಾತ

Madhyama Bimba

ಶ್ರೀ ರವಿಶಂಕರ ವಿದ್ಯಾ ಮಂದಿರದ ವಾರ್ಷಿಕೋತ್ಸವ

Madhyama Bimba

ವಿದ್ಯಾರ್ಥಿನಿಲಯ ಪ್ರವೇಶಾತಿ: ಅರ್ಜಿ ಆಹ್ವಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More