ಕಾರ್ಕಳ: ನಿಟ್ಟೆ ಫಾರ್ ಎವರ್ ಹೋಟೆಲ್ ಎದುರುಗಡೆ ಕಾರ್ಕಳ -ಪಡುಬಿದ್ರಿ ರಾಜ್ಯ ಹೆದ್ದಾರಿ ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟರ್‌ಗೆ ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಗಾಯಗೊಂಡ ಘಟನೆ ಜ. 08ರಂದು ವರದಿಯಾಗಿದೆ.

ಸ್ಕೂಟರ್ ಸವಾರ ನಾಗರಾಜ್ ಗಾಯಗೊಂಡವರು.
ಬೆಳ್ಮಣ್ ಕಡೆಯಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ಕಾರಿನ ಚಾಲಕ ಸಾತ್ವಿಕ್ ಹೆಗ್ಡೆ ಅತೀವೇಗದಿಂದ ಚಲಾಯಿಸಿಕೊಂಡು ಬಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿ ಪರಿಣಾಮ ಸ್ಕೂಟರ್ ಸವಾರ ನಾಗರಾಜ್ ರಸ್ತೆಗೆ ಬಿದ್ದು ಗಾಯವಾಗಿರುತ್ತದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
