ಕಾರ್ಕಳಹೆಬ್ರಿ

ಎಪ್ರಿಲ್‌ 26 ರಂದು  ಶಿವಪುರ ಶ್ರೀಶಂಕರದೇವ ದೇವಸ್ಥಾನದಲ್ಲಿ ಹೊರೆ ಕಾಣಿಕೆ ಸಮರ್ಪಣೆ

ಶಿವಪುರ. : ಇತಿಹಾಸ ಪ್ರಸಿದ್ಧ ಶಿವಪುರ ಶ್ರೀಶಂಕರದೇವ ದೇವಸ್ಥಾನದಲ್ಲಿ ಎಪ್ರಿಲ್‌ 26 ರಿಂದ ಮೇ 06ರ ತನಕ ನಡೆಯುವ ಶ್ರೀ ಗಣಪತಿ ದೇವರು ಹಾಗೂ ಶ್ರೀ ಅನ್ನಪೂರ್ಣೇಶ್ವರೀ ದೇವರ ಪುನ:ಪ್ರತಿಷ್ಠಾಷ್ಟಬಂಧ, ನೂತನ ಧ್ವಜಸ್ತಂಭ ಪ್ರತಿಷ್ಠೆ ಮತ್ತು ಶ್ರೀ ಶಂಕರಲಿಂಗೇಶ್ವರ ದೇವರಿಗೆ ಬ್ರಹ್ಮಕಲಶಾಭಿಷೇಕ ಹಾಗೂ ಶ್ರೀಮನ್ಮಹಾರಥೋತ್ಸವದ ಪ್ರಯುಕ್ತ ಹೊರೆ ಕಾಣಿಕೆ ಸಮರ್ಪಣೆ ಎಪ್ರಿಲ್‌ 26ರಂದು ಸಂಜೆ 4 ಗಂಟೆಗೆ ನಡೆಯಲಿದೆ.

ಶಿವಪುರ ಗ್ರಾಮದ ವಿವಿಧ ಪ್ರದೇಶಗಳಿಂದಭಕ್ತಸಮೂಹ ಮತ್ತು ವಿವಿಧ ಸಂಘಸಂಸ್ಥೆಗಳು ನೀಡುವ ಹೊರೆ ಕಾಣಿಕೆಯನ್ನು ಶಿವಪುರ ಪೇಟೆಯಿಂದ ವೈಭವದ ಮೆರವಣಿಗೆಯ ಮೂಲಕ ತಂದು ದೇವಸ್ಥಾನಕ್ಕೆ ಸಮರ್ಪಿಸಲಾಗುತ್ತದೆ.

ಅರ್ಚಕರಾದ ಮಹಾಬಲೇಶ್ವರ ಅಡಿಗ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಸಮಗ್ರ ವಿವಿರ ನೀಡಿ ತಿಳಿಸಿದರು. ಹೊರೆಕಾಣಿಕೆ ಮತ್ತು ಉಗ್ರಾಣ ಸಮಿತಿಯ ಸಂಚಾಲಕರಾದ ಬೈಕಾಡಿ ಮಂಜುನಾಥ ರಾವ್‌ ಎಲಿಕೋಡು ನೇತ್ರತ್ವದಲ್ಲಿ ಸಮಿತಿಯ ಸರ್ವ ಸದಸ್ಯರು ಹಾಗೂ ವಿವಿಧ ಸಮಿತಿಗಳು ಹೊರೆಕಾಣಿಕೆ ಸಮರ್ಪಣೆಗೆ ಸಕಲ ಸಿದ್ಧತೆ ನಡೆಸುತ್ತಿದೆ. ನಿಗದಿ ಪಡಿಸಿದ ಸ್ಥಳದಲ್ಲಿ ಗ್ರಾಮಸ್ಥರು ಹಾಗೂ ಭಕ್ತಸಮೂಹ ಹೊರೆಕಾಣಿಕೆ ಸಮರ್ಪಿಸುವಂತೆ ಸಮಿತಿಯ ತಿಳಿಸಿದೆ.

ಶಿವಪುರ ಶ್ರೀ ಶಂಕರದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾರ್ಮಕ್ಕಿ ವಿಶ್ವನಾಥ ನಾಯಕ್‌, ಮಾಜಿ ಅಧ್ಯಕ್ಷ ಮೂರ್ಸಾಲು ಮೋಹನದಾಸ ನಾಯಕ್‌, ಸದಸ್ಯರಾದ ಸಂತೋಷ ಕುಮಾರ್‌ ಶೆಟ್ಟಿ ನಾಯರಕೋಡು, ಕಾಮಗಾರಿ ಸಮಿತಿಯ ಸಂಚಾಲಕ ಶ್ರೀನಿವಾಸ ಹೆಬ್ಬಾರ್‌ ಶಿವಪುರ, ಆರ್ಥಿಕ ಸಮಿತಿ ಸಂಚಾಲಕ ಸುರೇಶ ಶೆಟ್ಟಿ ಹುಣ್ಸೆಯಡಿ ಶಿವಪುರ, ಜಗನ್ನಾಥ ಕುಲಾಲ್‌ ಶಿವಪುರ, ವಕೀಲ ಸುಮಿತ್‌ ಹೆಗ್ಡೆ ಶಿವಪುರ ಮುಂತಾದವರು ಉಪಸ್ಥಿತರಿದ್ದರು.

Related posts

ಕಾರ್ಕಳ ಆರಾಮ್ ಫರ್ನಿಚರ್‌ನಲ್ಲಿ ಪಿಜನ್ ಕಂಪೆನಿಯ ವಿಶೇಷ ಕೊಡುಗೆ

Madhyama Bimba

ಕಾರ್ಕಳ: ಸ್ಕೂಟರ್ ತಡೆಗೋಡೆಗೆ ಡಿಕ್ಕಿ- ಸವಾರ ಮೃತ್ಯು

Madhyama Bimba

ನಮ್ಮ ಕ್ಲಿನಿಕ್‌ನಲ್ಲಿ ವಿವಿಧ ಹುದ್ದೆ: ಅರ್ಜಿ ಆಹ್ವಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More