ಕಾರ್ಕಳಹೆಬ್ರಿ

ಹೆಬ್ರಿ ಅಮೃತ ಭಾರತಿ ವಿದ್ಯಾಲಯ ಎಸ್‌ಎಸ್‌ಎಲ್‌ಸಿಯಲ್ಲಿ  ಶೇಕಡಾ 100 ಫಲಿತಾಂಶ

ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆ 2025-26 ನೇ ಸಾಲಿನ 10ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಸಂಸ್ಥೆಯ 100 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗುವುದರ ಮೂಲಕ ಶೇಕಡಾ 100 ಫಲಿತಾಂಶ ದಾಖಲಾಗಿದೆ.

625ರಲ್ಲಿ 612 ಅಂಕವನ್ನು ಪಡೆದು ಲಾವಣ್ಯ ಹೆಚ್ ವಿ. ಸಂಸ್ಥೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. 610 ಅಂಕ ಪಡೆದು ಸೃಜನ್ ಭಟ್ ದ್ವಿತೀಯ ಸ್ಥಾನ, 606 ಅಂಕ ಪಡೆದು ಪ್ರಣಮ್ಯ ಕೆ. ತೃತೀಯ ಸ್ಥಾನ, 605 ಅಂಕ ಪಡೆದು ಶ್ರಾವ್ಯ ಹೆಗ್ಡೆ ಚತುರ್ಥ ಸ್ಥಾನವನ್ನು ಹಾಗೂ ಯತೀಶ್ ಶೆಟ್ಟಿ 601 ಅಂಕ ಪಡೆದಿರುತ್ತಾರೆ.

ಸಂಸ್ಕೃತ ಪ್ರಥಮ ಭಾಷೆಯಲ್ಲಿ 10, ಕನ್ನಡ ಪ್ರಥಮ ಭಾಷೆಯಲ್ಲಿ 01, ದ್ವಿತೀಯ ಭಾಷೆ ಇಂಗ್ಲೀಷ್ ನಲ್ಲಿ 02, ತೃತೀಯ ಭಾಷೆ ಹಿಂದಿಯಲ್ಲಿ 01, ತೃತೀಯ ಭಾಷೆ ಕನ್ನಡದಲ್ಲಿ 06 ವಿದ್ಯಾರ್ಥಿಗಳು ಪೂರ್ಣಾಂಕ ಪಡೆದಿರುತ್ತಾರೆ.

38 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 56 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಫಲಿತಾಂಶದ ಸಾಧನೆಗಾಗಿ ಅಮೃತ ಭಾರತಿ ಟ್ರಸ್ಟಿನ ಅಧ್ಯಕ್ಷ ಸಿಎ ಎಂ. ರವಿರಾವ್, ಕಾರ್ಯದರ್ಶಿ ಹೆಚ್. ಗುರುದಾಸ್ ಶೆಣೈ, ಅಮೃತಭಾರತಿ ವಿದ್ಯಾಲಯದ ಅಧ್ಯಕ್ಷ ಶೈಲೇಶ್ ಕಿಣಿ, ಸರ್ವ ಪದಾಧಿಕಾರಿಗಳು, ಮುಖ್ಯೋಪಾಧ್ಯಾಯಿನಿ ಅಪರ್ಣಾ ಆಚಾರ್, ಶಿಕ್ಷಕರು ಮತ್ತು ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

Related posts

ವಿಶೇಷ ಠೇವಣಿ ಯೊಜನೆಯ ಮೂಲಕ ಒಂದೇ ತಿಂಗಳಲ್ಲಿ 2.76 ಕೋಟಿ ಸಂಗ್ರಹ

Madhyama Bimba

ಜೆಸಿಐ ಬೆಳ್ಮಣ್ ಘಟಕಕ್ಕೆ ರಾಷ್ಟ್ರಪ್ರಶಸ್ತಿ

Madhyama Bimba

ಸಾಣೂರು ಯುವಕ ಮಂಡಲ ವಾರ್ಷಿಕೋತ್ಸವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More