ಕಾರ್ಕಳಹೆಬ್ರಿ

ಶಿವಪುರ ಶ್ರೀಶಂಕರದೇವ ದೇವಸ್ಥಾನದಲ್ಲಿ ಭಕ್ತಿ ವೈಭವದ ಬ್ರಹ್ಮಕಲಶಾಭಿಷೇಕ – ಮಹಾಅನ್ನಸಂತರ್ಪಣೆ

ಹೆಬ್ರಿ : ಶಿವಪುರ ಶ್ರೀಶಂಕರದೇವ ದೇವಸ್ಥಾನದಲ್ಲಿ ಶುಕ್ರವಾರ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬ್ರಹ್ಮಕಲಶಾಭಿಷೇಕ ಭಕ್ತಿವೈಭವದಿಂದ ಕ್ಷೇತ್ರ ತಂತ್ರಿವರೇಣ್ಯರಾದ ಹೆರ್ಗ ರಾಘವೇಂದ್ರ ತಂತ್ರಿಯವರ ಮಾರ್ಗದರ್ಶನದಲ್ಲಿ ನೆರವೇರಿತು.

ಸಾವಿರಾರು ಭಕ್ತ ಸಮೂಹ ಸಂಭ್ರಮದ ಬ್ರಹ್ಮಕಲಾಭಿಷೇಕಕ್ಕೆ ಸಾಕ್ಷಿಯಾದರು. ಮಹಾ ಅನ್ನಸಂತರ್ಪಣೆ ನಡೆಯಿತು. ಡ್ರೋನ್ ಮೂಲಕ ದೇವಸ್ಥಾನಕ್ಕೆ ಪುಪ್ಪಾರ್ಚನೆ ಮಾಡಿಸಿದ್ದು ಆಕರ್ಷಕವಾಗಿತ್ತು.

ದೇವಸ್ಥಾನಕ್ಕೆ ಉಡುಪಿಯ ಪಲಿಮಾರು ಮಠಾದೀಶ ಶ್ರೀ ಶ್ರೀ ವಿದ್ಯಾದೀಶ ಶ್ರೀಪಾದರು ಆಗಮಿಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರು ಎಂ ಆರ್ ಜಿ ಗ್ರೂಪ್ ಸಿಎಂಡಿ ಮಹಾದಾನಿಗಳಾದ ಡಾ.ಕೆ.ಪ್ರಕಾಶ್ ಶೆಟ್ಟಿ, ಹಾಗೂ ದಾನಿಗಳಾದ ಸುಗ್ಗಿ ಸುಧಾಕರ ಶೆಟ್ಟಿ ಅವರನ್ನು ಕ್ಷೇತ್ರದ ವತಿಯಿಂದ ಭವ್ಯವಾಗಿ ಸ್ವಾಗತಿಸಿ ಶ್ರೀ ದೇವರ ಪ್ರಸಾದ ನೀಡಿ ಗೌರವಿಸಲಾಯಿತು.

ಉದ್ಯಮಿಗಳಾದ ರಾಜರಾಮ ಹೆಗ್ಡೆ ಹಿರಿಯಡ್ಕ, ಉದಯ ಕಡಂಬ ಶಿವಮೊಗ್ಗ, ಪ್ರಸನ್ನ ಶೆಟ್ಟಿ ಕೆರೆಬೆಟ್ಟು, ಹರೀಶ ಶೆಟ್ಟಿ ಚಿಟ್ಟೆಬೆಟ್ಟು ಸೇರಿದಂತೆ ಊರಪರವೂರ ಗಣ್ಯರು ಉಪಸ್ಥಿತರಿದ್ದರು.

ಶಿವಪುರ ಶ್ರೀ ಶಂಕರದೇವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಾಸುದೇವಾ ಭಟ್, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾರ್ಮಕ್ಕಿ ವಿಶ್ವನಾಥ ನಾಯಕ್, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಅಜಿತ್ ಎಸ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮುರ್ಸಾಲು ಗೋಕುಲದಾಸ ನಾಯಕ್, ಸಮಿತಿಯ ಪ್ರಧಾನ ಸಲಹೆಗಾರ ಚಂದ್ರಶೇಖರ ಶೆಟ್ಟಿ ಬಿಲ್ಲುಬೈಲು, ಕಾಮಗಾರಿ ಸಮಿತಿಯ ಸಂಚಾಲಕ ಶ್ರೀನಿವಾಸ ಹೆಬ್ಬಾರ್ ಶಿವಪುರ, ಉಪಾಧ್ಯಕ್ಷರಾದ ಶಿವಪ್ರಸಾದ್ ಅಡಿಗ, ರಾಮ ಬೆಳಿರಾಯ ನಾಯರಕೋಡು, ಆರ್ಥಿಕ ಸಮಿತಿಯ ಅಧ್ಯಕ್ಷ ಹುಣ್ಸೆಯಡಿ ಸುರೇಶ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಮೂರ್ಸಾಲು ಮೋಹನದಾಸ ನಾಯಕ್, ಅರ್ಚಕ ಮಹಾಬಲೇಶ್ಚರ ಅಡಿಗ, ವಿವಿಧ ಪ್ರಮುಖರಾದ ಸುಬ್ರಹ್ಮಣ್ಯ ನಕ್ಷತ್ರಿ ಬೆಂಗಳೂರು, ರಮೇಶ್ ಕುಮಾರ್, ಬೈಕಾಡಿ ಮಂಜುನಾಥ ರಾವ್ ಶಿವಪುರ, ಡಾ.ಗುರುಪ್ರಸಾದ ಕೊಡಂಚ, ಸಂತೋಷ ಕುಮಾರ್ ಶೆಟ್ಟಿ, ಸಚಿನ್ ನಾಯ್ಕ್, ಜಗನ್ನಾಥ ಕುಲಾಲ್, ಸುಮಿತ್ರಾ ನಾಯ್ಕ್, ಭಾಸ್ಕರ ಶೆಟ್ಟಿ, ರಾಘವೇಂದ್ರ ಪ್ರಭು, ಶಿವಪ್ರಸಾದ್ ಅಡಿಗ, ಸುನಂದ ಕುಲಾಲ್, ಸಂಜಯ ಆಚಾರ್, ರೇಷ್ಮಾ ದೇವಾಡಿಗ ವಿಶಾಲಾಕ್ಷಿ ಶೆಟ್ಟಿ, ಪೂರ್ಣಿಮಾ ಹಾಂಡ ಸೇರಿದಂತೆ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿ, ಸ್ವಾಗತ ಸಮಿತಿ, ಅರ್ಚಕ ವೃಂದದವರು, ವಿವಿಧ ಉಪಸಮಿತಿಗಳ ಪ್ರಮುಖರು, ಸದಸ್ಯರು ಭಾಗಿಯಾದರು.

 

 

 

Related posts

ಕಾರ್ಕಳ: ಬೆಳ್ಮಣ್ ಬಳಿ ಪಾದಚಾರಿಗೆ ದ್ವಿಚಕ್ರ ವಾಹನ ಡಿಕ್ಕಿ- ಗಾಯ

Madhyama Bimba

ರಕ್ತದಾನಿಗಳಿಗೆ ಪುರಸ್ಕಾರ ಆಹ್ವಾನ

Madhyama Bimba

ರಂಗನಪಲ್ಕೆಯ ಡಾ|ಬಿ.ಆರ್.ಅಂಬೇಡ್ಕರ್ ರಸ್ತೆ ಡಾಮಾರೀಕರಣ ಮಾಡಿದ ಕಾಂಗ್ರೆಸ್ ಸರಕಾರಕ್ಕೆ ಅಭಿನಂದನೆ: ಅಂತೋನಿ ಮಿರಾಂದಾ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More