ಕಾರ್ಕಳ

ಅಜೆಕಾರು: ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಆಟ – ಪ್ರಕರಣ ದಾಖಲು

ಅಜೆಕಾರು: ಕುಕ್ಕುಜೆ ಗ್ರಾಮದ ದೊಂಡೆರಂಗಡಿ ಪೇಟೆ ಬಳಿ ಮಟ್ಕಾ ಆಟದಲ್ಲಿ ನಿರತನ ಮೇಲೆ ಪ್ರಕರಣ ದಾಖಲಾದ ಘಟನೆ ಏ. 30ರಂದು ವರದಿಯಾಗಿದೆ.

ಅಶ್ವಿನ್ ಎಂಬಾತನು ಸಾರ್ವಜನಿಕ ಸ್ಥಳದಲ್ಲಿ ಚೀಟಿಯಲ್ಲಿ ನಂಬ್ರ ಬರೆದು ಕೊಟ್ಟು ಅವರಿಂದ ಹಣವನ್ನು ಸಂಗ್ರಹಿಸುತ್ತಿದ್ದನು. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಹೇಶ್ ಟಿ.ಎಮ್ ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಜನರಿಂದ ಹಣವನ್ನು ಸಂಗ್ರಹಿಸಿ ಸಂತೋಷ ಪೂಜಾರಿ ಎಂಬವರಿಗೆ ನೀಡುತ್ತಿದ್ದು ಅವರು ತನಗೆ 100 ರೂಪಾಯಿಗೆ 20 ರೂಪಾಯಿಯಂತೆ ಕಮಿಷನ್ ನೀಡುತ್ತಿರುವುದರ ಬಗ್ಗೆ ಮಾಹಿತಿ ನೀಡಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಆತನಿಂದ ಮಟ್ಕಾ ಆಟಕ್ಕೆ ಬಳಸಿದ್ದ ಪರಿಕರಗಳನ್ನು ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಕಾರ್ಕಳ: ಚಾಲಕನ ನಿರ್ಲಕ್ಷ- ಪ್ರಯಾಣಿಕನಿಗೆ ಗಾಯ

Madhyama Bimba

ಹೆಬ್ರಿ: ಚೈತನ್ಯ ಯುವ ವೃಂದ ವತಿಯಿಂದ ಕ್ರಿಕೆಟ್ ಪಂದ್ಯಾಟ ಚೈತನ್ಯ ಟ್ರೋಫಿ-2026

Madhyama Bimba

ಕಾರ್ಕಳ ಜೋಡುರಸ್ತೆಯ ದುರ್ಗಾ ಎಲೆಕ್ರ್ಟಾನಿಕ್ಸ್ & ಫರ್ನಿಚರ್ಸ್’ನಲ್ಲಿ ವಿಶೇಷ ಕೊಡುಗೆಗಳು ಲಭ್ಯ-ಪ್ರತಿಯೊಂದು ಖರೀದಿಯ ಮೇಲೆ ವಿಶೇಷ ರಿಯಾಯಿತಿ ಮತ್ತು ಗಿಫ್ಟ್ ಕೂಪನ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More