ಕಾರ್ಕಳಹೆಬ್ರಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಹೆಬ್ರಿ ತಾಲ್ಲೂಕು ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಸಭೆ : ಪದೋನ್ನತಿ ಹೊಂದಿದ ಲೀಲಾವತಿ ಅವರಿಗೆ ಸನ್ಮಾನ

ಹೆಬ್ರಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಳಂಕ ಬಂದಾಗ, ನಮಗೆಲ್ಲ ಕಳಂಕ ಬಂದಂತೆ ಎಂದು ಭಾವಿಸಿ, ದುಷ್ಟಶಕ್ತಿಗಳ ವಿರುದ್ಧ ಹೋರಾಡಿದ ಲೀಲಾವತಿಯವರು ಧೀಮಂತ ಮಹಿಳೆ. ಒಬ್ಬ ಮಹಿಳೆ ಯೋಜನಾಧಿಕಾರಿಯಾಗಿ ಹೆಬ್ರಿ ತಾಲ್ಲೂಕನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ ಕೀರ್ತಿ ಅವರಿಗಿದೆ. ಮಹಿಳೆಯರಿಗೆ ಅವರು ಆದರ್ಶ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಹೇಳಿದರು.

ಅವರು ಹೆಬ್ರಿಯಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಬ್ರಿ ತಾಲ್ಲೂಕಿನ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಸಭೆ ಹಾಗೂ ಪದೋನ್ನತಿ ಹೊಂದಿ ಅಥಣಿ ಜಿಲ್ಲಾ ನಿರ್ದೇಶಕಿಯಾಗಿ ಪದೋನ್ನತಿಯಾದ ಲೀಲಾವತಿ ಅವರನ್ನು ಸನ್ಮಾನಿಸಿ ಮಾತನಾಡಿದರು.

ಸನ್ಮಾನ ಸ್ವೀಕರಿಸಿ, ಮಾತನಾಡಿದ ಲೀಲಾವತಿ ಹೆಬ್ರಿ ತಾಲ್ಲೂಕಿನ ಯೋಜನಾಧಿಕಾರಿಯಾಗಿ ನಿಯೋಜನೆಗೊಂಡ ದಿನದಿಂದ ಇಲ್ಲಿಯ ತನಕ ಬಹಳಷ್ಟು ಮಂದಿ ಸಹಕಾರ ನೀಡಿದ್ದರಿಂದ ನಾನು ಯಶಸ್ವಿಯಾಗಿ ಕೆಲಸ ಮಾಡಲು ಸಾಧ್ಯವಾಯಿತು. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆದರೆ ನಾವೆಲ್ಲರೂ ಒಗ್ಗಟ್ಟಾಗಿ ಪ್ರತಿಭಟಿಸಬೇಕು ಎಂದು ಹೇಳಿ ಎಲ್ಲರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

ವಿವಿಧ ವಲಯದ ವತಿಯಿಂದ ಲೀಲಾವತಿ ಅವರನ್ನು ಸನ್ಮಾನಿಸಲಾಯಿತು. ಹೆಬ್ರಿ ತಾಲ್ಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಚಾರ ವಾದಿರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ, ನೂತನ ಹೆಬ್ರಿ ತಾಲ್ಲೂಕಿನ ನೂತನ ಯೋಜನಾಧಿಕಾರಿ ರೇಷ್ಮಾ, ಜನಜಾಗೃತಿ ವೇದಿಕೆಯ ಪ್ರಮುಖರಾದ ನಂದಕುಮಾರ ಹೆಗ್ಡೆ, ಅಂಡಾರು ಮಹಾವೀರ ಹೆಗ್ಡೆ, ಹೆಬ್ರಿ ಭಾಸ್ಕರ ಜೋಯಿಸ್, ಶಾಂತಿರಾಜ್ ಜೈನ್, ಕಮಲಾಕ್ಷ ಹೆಬ್ಬಾರ್, ಹೆಚ್ ಜನಾರ್ಧನ್, ಮನೋಜ್ ಶೆಟ್ಟಿ, ಮೋಹನ್ ದಾಸ ನಾಯಕ್ ಶಿವಪುರ, ವಸಂತ ಕುಮಾರ್ ಶೆಟ್ಟಿ, ಜಗನಾಥ್ ಕುಲಾಲ್, ಸುಧಾಕರ ಶೆಟ್ಟಿ, ಸುರೇಶ ಶೆಟ್ಟಿ ಆರ್ಡಿ, ಯೋಜನೆಯ ಸಿಬ್ಬಂದಿಗಳು, ಪ್ರಮುಖರಿದ್ದರು

ನಂದಕುಮಾರ್ ಹೆಗ್ಡೆ ನಿರೂಪಿಸಿದರು. ಲೀಲಾವತಿ ಸ್ವಾಗತಿಸಿದರು. ಮೇಲ್ವಿಚಾರಕ ಉಮೇಶ್ ಬಿಕೆ ವಂದಿಸಿದರು.

 

Related posts

ಮುನಿಯಾಲು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಾರ್ಷಿಕೋತ್ಸವ – ಪ್ರತಿಭಾ ಪುರಸ್ಕಾರ

Madhyama Bimba

ಹೆಬ್ರಿ ತಾಲ್ಲೂಕಿನಾದ್ಯಂತ ಭಾರಿ ಗಾಳಿ ಮಳೆ : ನೂರಾರು ಮರಗಳು, ವಿದ್ಯುತ್ ಕಂಬಗಳು ಧರಗೆ : ಕೃಷಿಗೆ ಅಪಾರ ನಷ್ಟ !

Madhyama Bimba

ಮಂಗಳೂರು ವಿ ವಿ ಅಂತರ್ ಕಾಲೇಜು ಮಹಿಳಾ ಕ್ರಿಕೆಟ್ – ಆಳ್ವಾಸ್ ಚಾಂಪಿಯನ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More