ಮೂಡುಬಿದಿರೆ

ಮೂಡಬಿದ್ರೆಯ ರೋಟರಿ ಶಾಲೆಯ ಸಂಸತ್ ಚುನಾವಣೆ

ಮೂಡಬಿದ್ರೆಯ ರೋಟರಿ ಶಾಲೆಯ ಸಂಸತ್ ಚುನಾವಣೆಯು ಜೂ. 12ರಂದು ಅಟಲ್ ಟಿಂಕರಿಂಗ್ ಲ್ಯಾಬ್‌ನಲ್ಲಿ ಶಿಸ್ತಿನ ಮತದಾನ ನಡೆಯಿತು.


ಮುಖ್ಯೋಪಾಧ್ಯಾಯಿನಿ ತಿಲಕಾ ಅನಂತವೀರ್ ಜೈನ್ ಮುಖ್ಯ ಚುನಾವಣಾ ಅಧಿಕಾರಿಯಾಗಿ, ಹಿರಿಯ ಸಂಯೋಜಕ ಗಜಾನನ ಮರಾಠೆ, ವಿಭಾಗ ಸಂಯೋಜಕ ಶಿಕ್ಷಕರಾದ ಡೀಲನ್ ಮಸ್ಕರೇನ್ಹಸ್, ಸರಿತಾ ಜೆ ಇವರ ಮೇಲ್ವಿಚಾರಣೆಯಲ್ಲಿ ಹಿರಿಯ ಪ್ರಾಥಮಿಕ ಮತ್ತು ಹೈಸ್ಕೂಲ್ ವಿಭಾಗದ ಮಕ್ಕಳಿಗೆ ಶಿಸ್ತುಬದ್ಧವಾಗಿ ಚುನಾವಣೆ ನಡೆಯಿತು.

ಎಲ್ಲಾ ಶಿಕ್ಷಕರ ಸಹಕಾರದೊಂದಿಗೆ ನಡೆದ ಶಾಲಾ ಸಂಸತ್ತು ಚುನಾವಣೆಯಲ್ಲಿ ಶಿಕ್ಷಕರಾದ ಭಾರತಿ ಮತ್ತು ರೇಖಾ ವೆಂಕಟೇಶ್ ತಾವೇ ತಯಾರಿಸಿದ ಇವಿಎಂನ ಮೇಲ್ವಿಚಾರಕರಾಗಿ, ಪ್ರೇಮಲತಾ, ವಿದೀಪ್, ನಿಶಾ, ಅಶ್ವಿನಿ ಸಂಸತ್ತಿನ ಮೇಲ್ವಿಚಾರಕ ಶಿಕ್ಷಕರಾಗಿ ಹಾಗೂ ಚುನಾವಣಾ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.

ಪ್ರೌಢಶಾಲೆ ವಿಭಾಗದ ಶಾಲಾ ನಾಯಕಿಯಾಗಿ ಜೆನಿಲಿಯ ಪಿಂಟೋ, ಶಾಲಾ ಉಪನಾಯಕನಾಗಿ ಬಿ. ಪುನೀತ್ ಶೆಟ್ಟಿ, ಸ್ಪೀಕರ್ ವೆಲೋನಿ ಕಾರ್ಡೋಜಾ, ವಿರೋಧ ಪಕ್ಷ ನಾಯಕ ಸಿದ್ದಾರ್ಥ್ ಆಯ್ಕೆಗೊಂಡರು.

ಹಿರಿಯ ಪ್ರಾಥಮಿಕ ವಿಭಾಗದ ಶಾಲಾ ನಾಯಕಿಯಾಗಿ ಪ್ರತ್ಯುಶ, ಉಪ ಶಾಲಾ ನಾಯಕನಾಗಿ ಕ್ಷಿತಿಜ್, ಸ್ಪೀಕರ್ ಅನಮ್ ಅಶ್ರಫ್, ವಿರೋಧ ಪಕ್ಷ ನಾಯಕಿಯಾಗಿ ಸಫ ಫಾತಿಮಾ ಆಯ್ಕೆಗೊಂಡರು.

ಮುಖ್ಯೋಪಾಧ್ಯಾಯಿನಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಚುನಾಯಿತ ಶಾಲಾ ಮುಖಂಡರಿಗೆ ಶುಭ ಹಾರೈಸಿದರು.

Related posts

ಬನ್ನಡ್ಕ ಪಾಡಿಯಾರ್ ಯುವಕರಿಂದ ಶ್ರಮದಾನ

Madhyama Bimba

ಮೂಡುಬಿದಿರೆ ರೋಟರಿ ಕ್ಲಬ್  ಅಧ್ಯಕ್ಷರಾಗಿ ಡಾ. ಆಶೀರ್ವಾದ್, ಕಾರ್ಯದರ್ಶಿ ಪ್ರಜ್ವಲ್

Madhyama Bimba

ಬಾಬು ರಾಜೇಂದ್ರ ಪ್ರೌಢಶಾಲೆಯಲ್ಲಿ ಸಂಸ್ಥಾಪಕರ ದಿನಾಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More