ಬಾವಿಗೆ ಬಿದ್ದಿದ್ದೆನ್ನಲಾದ ಮಹಿಳೆ ಜೀವಂತವಾಗಿ ಬಾವಿಯಿಂದ ಮೇಲೆ ಬರುತ್ತಿದ್ದಂತೆ ಪಕ್ಕದ ಮನೆಯ ರಿಕ್ಷಾ ಚಾಲಕ ರೆಂಜಾಳ ಕಾಡಿನಲ್ಲಿ ಆತ್ಮಹತ್ಯೆಗೆ ಶರಣಾದ ಪ್ರಕರಣ ನೆಲ್ಲಿಕಾರು ಎಂಬಲ್ಲಿ ನಡೆದಿದೆ.
ನೆಲ್ಲಿಕಾರು ಪರಿಸರದ 70 ವರ್ಷದ ಮಹಿಳೆ ಪದ್ಮಾವತಿ ಎಂಬವರು ನೆರೆಕರೆಯ ರಿಕ್ಷಾ ಚಾಲಕ ಸತೀಶ್ ಶೆಟ್ಟಿ ( 45) ಎಂಬವರ ರಿಕ್ಷಾದಲ್ಲಿ ಬಾಡಿಗೆ ಹೋಗುತ್ತಿದ್ದರು. ಏಪ್ರಿಲ್ 30ರಂದು ಬಾವಿಗೆ ಬಿದ್ದಿದ್ದ ಮಹಿಳೆ ಇರುವ ಬಾವಿಯ ಸಮೀಪ ಯಾರೋ ತೆರಳಿದಾಗ ಮಹಿಳೆ ಬಾವಿ ಯಲ್ಲಿ ಕಂಡುಬಂತೆಂದು ಸ್ಥಳೀಯರು ತಿಳಿಸಿದ್ದಾರೆ. ಮಹಿಳೆ ಜೀವಂತವಾಗಿ ಪತ್ತೆಯಾದ ನಂತರ ರಿಕ್ಷಾ ಚಾಲಕ ರೆಂಜಾಳ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
