ಕಾರ್ಕಳಹೆಬ್ರಿ

ಕಡ್ತಲ ಶಾಲೆಯಲ್ಲಿ ಬ್ಯಾಗ್ ಹಾಗೂ ಶಾಲಾ ಪರಿಕರಗಳ ವಿತರಣೆ

ಕಾರ್ಕಳ : ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡ್ತಲ ಇಲ್ಲಿನ ವಿದ್ಯಾರ್ಥಿಗಳಿಗೆ ಪುಣೆ ಬಿಲ್ಲವ ಸಂಘದ ಅಧ್ಯಕ್ಷರಾದ, ಪುಣೆ ಉದ್ಯಮಿ ವಿಶ್ವನಾಥ ಪೂಜಾರಿ ಇವರ ವತಿಯಿಂದ ಶಾಲಾ ಮಕ್ಕಳಿಗೆ ಶಾಲಾ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಹರಿಶ್ಚಂದ್ರ ಹೆಗ್ಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯರಾದ ಸಂಜೀವ ಪೂಜಾರಿ, ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷರಾದ ಸುಕೇಶ್ ಹೆಗ್ಡೆ, ಅಜೆಕಾರ್ ಸಿಏ ಬ್ಯಾಂಕ್ ನಿರ್ದೇಶಕರಾದ ಅರುಣ್ ಕುಮಾರ್ ಹೆಗ್ಡೆ, ಎಸ್. ಡಿ. ಎಂ ಸಿ ಸದಸ್ಯರಾದ ಸುಧಾಕರ್ ಕುಲಾಲ್, ಪ್ರಕಾಶ್ ನಾಯಕ್ ಹಾಗೂ ಉದ್ಯಮಿಗಳಾದ ತಾರಾನಾಥ್, ಮತ್ತು ವಸಂತಿ ಕುಲಾಲ್, ಗುಲಾಬಿ ಪೂಜಾರ್ತಿ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಕಸ್ತೂರಿ ಸ್ವಾಗತಿಸಿ ನಿರೂಪಿಸಿದರು. ಸಹ ಶಿಕ್ಷಕಿ ಸರಸ್ವತಿ ಧನ್ಯವಾದವಿತ್ತರು.

 

Related posts

ಜಿಲ್ಲೆಯಲ್ಲಿ ಗುರುತಿಸಲಾದ ಬ್ಲ್ಯಾಕ್ ಸ್ಪಾಟ್ ಸ್ಥಳಗಳನ್ನು ಅಪಘಾತ ಮುಕ್ತ ವಲಯಗಳನ್ನಾಗಿಸಲು ಕ್ರಮ ವಹಿಸಿ : ಜಿಲ್ಲಾಧಿಕಾರಿ ಡಾ . ಕೆ ವಿದ್ಯಾಕುಮಾರಿ

Madhyama Bimba

ಹೆಬ್ರಿ ಎಸ್.ಆರ್.ಪಿ.ಯು. ಕಾಲೇಜಿನಲ್ಲಿ ‘ಅನ್ವೇಷಣಂ 2026’ ಪ್ರತಿಭಾನ್ವೇಷಣೆ

Madhyama Bimba

ಕುಕ್ಕುಂದೂರು – ಕಿನ್ಯಾರ್ ಕಟ್ಟ- ನಕ್ರೆ ಸಂಪರ್ಕ ರಸ್ತೆ ಕುಕ್ಕುಂದೂರು ಪಂಚಾಯತ್ ವತಿಯಿಂದ ರಿಪೇರಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More