ಮೂಡುಬಿದಿರೆ

ಶಿರ್ತಾಡಿಯಲ್ಲಿ ನಾಳೆ ಮೈತ್ರಿ ಸೌಧ ಉದ್ಘಾಟನೆ

ಶಿರ್ತಾಡಿ ಕೇಂದ್ರ ವ್ಯಾಪ್ತಿ ಹೊಂದಿರುವ ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನೂತನ ಬೃಹತ್ ಕೇಂದ್ರ ಕಚೇರಿ ಕಟ್ಟಡ ಹಾಗೂ ವಾಣಿಜ್ಯ ವಸತಿ ಸಂಕೀರ್ಣ ಒಳಗೊಂಡ ಮೈತ್ರಿ ಸೌಧದ ಉದ್ಘಾಟನೆ ನಾಳೆ ಫೆಬ್ರವರಿ 8ರಂದು ಸಾಯಂಕಾಲ ಗಂಟೆ 5.30ಕ್ಕೆ ನಡೆಯಲಿದೆ.

ಭುವನ ಜ್ಯೋತಿ ವಸತಿ ಶಾಲೆಯ ಪ್ರಾಂಶುಪಾಲರಾದ ಪ್ರಶಾಂತ್ ಡಿಸೋಜಾ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ನ್ಯಾಯವಾದಿ ಮಯೂರ ಕೀರ್ತಿ ಸಹಕಾರಿಯ ಕೇಂದ್ರ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಸೌಹಾರ್ದ ಸಹಕಾರಿ ದಕ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಭಾಸ್ಕರ್ ದೇವಸ್ಯ, ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರಿಯ ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ, ಮಾತೃಭೂಮಿ ಸೌಹಾರ್ದ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಕೊಂಪದವು, ಪ್ರಗತಿಪರ ಕೃಷಿಕರಾದ ಶ್ರೀಮತಿ ಹೆಲೆನ್ ಮರಿಯ ಲೋಬೋ, ಶ್ರೀಮತಿ ಆಶಾ ಸುರೇಶ್ ಗೌರವ ಉಪಸ್ಥಿತಿ ಹೊಂದಲಿದ್ದಾರೆ.

ಸಭಾ ಕಾರ್ಯಕ್ರಮದ ನಂತರ ನಂತರ ಶರತ್ ಶೆಟ್ಟಿ ಕಿನ್ನಿಗೋಳಿ ನೇತೃತ್ವದ ವಿಜಯ ಕಲಾವಿದರಿಂದ ವಿಜಯಕುಮಾರ್ ಕೋಡಿಯಾಲ್ ಬೈಲ್ ನಿರ್ದೇಶನದ ಅಮ್ಮು ಆಮುಂಡರಾ ಎಂಬ ತುಳು ಸಾಂಸಾರಿಕ ಹಾಸ್ಯಮಯ ನಾಟಕ ನಡೆಯಲಿದೆ.

Related posts

ಇನ್ಸ್‌ಪೆಕ್ಟರ್ ಸಂದೇಶ್ ಪ್ರಕರಣಗಳ ತನಿಖೆ ಸಿಐಡಿಗೆ

Madhyama Bimba

ತೆಂಕಮಿಜಾರುನಲ್ಲಿ1 ಕೋ.ವೆಚ್ಚದ ಅಶ್ವತ್ಥಪುರ-ಸಂಪಿಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ

Madhyama Bimba

ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ‘ಪಶ್ಚಿಮ ಘಟ್ಟಗಳ ಸಸ್ಯ ವೈವಿಧ್ಯತೆ’ ಕುರಿತು ಜಾಗೃತಿ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More