Blog

ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದ ಮಂಜುನಾಥ್ ಪೂಜಾರಿ

ರಾಜ್ಯದಲ್ಲಿ ಹೊಸದಾಗಿ ರೂಪಿತವಾಗಿರುವ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡುವಂತೆ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಂಜುನಾಥ್ ಪೂಜಾರಿಯವರು ಮುಖ್ಯ ಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಮಾಡಿದರು.

ಈಗಾಗಲೇ ಈ ಅಭಿವೃದ್ಧಿ ನಿಗಮಕ್ಕೆ ರೂ 10 ಕೋಟಿ ಅನುದಾನ ನೀಡಲಾಗಿದೆ.   ಪ್ರತಿ ವರ್ಷ ರೂ 100 ಕೋಟಿ ನೀಡುವುದಾಗಿ ಮುಖ್ಯ ಮಂತ್ರಿಗಳು ತಿಳಿಸಿದ್ದರು.

ಈ ನಿಟ್ಟಿನಲ್ಲಿ ಈ ಅನುದಾನ ನೀಡುವಂತೆ ಮುಖ್ಯ ಮಂತ್ರಿಗಳಲ್ಲಿ ಮಂಜುನಾಥ್ ಪೂಜಾರಿಯವರು ಪ್ರಸ್ತಾಪ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯ ಮಂತ್ರಿಗಳು ಶೀಘ್ರದಲ್ಲಿ ಈ ಬಗ್ಗೆ ಕ್ರಮ ಕೈ ಗೊಳ್ಳುವುದಾಗಿ ತಿಳಿಸಿದರು.

ಈಗಾಗಲೇ ಮಂಜೂರು ಗೊಂಡಿರುವ ರೂ 10 ಕೋಟಿಯಲ್ಲಿ 4 ಕೋಟಿ ಅನುದಾನ ಅರಿವು ಕಾರ್ಯಕ್ರಮಕ್ಕೆ, ರೂ 2.5 ಕೋಟಿ ಗಂಗಾ ಕಲ್ಯಾಣ ಕ್ಕೆ, ರೂ 1.5 ಕೋಟಿ ಸಮುದಾಯದಲ್ಲಿ ಮುರ್ತೆದಾರಿಕೆಯಲ್ಲಿ ತೊಡಗಿಕೊಂಡವರಿಗಾಗಿ ಉಡುಪಿ ಜಿಲ್ಲೆಗೆ, ಮಂಗಳೂರು ಜಿಲ್ಲೆಗೆ, ಶಿವಮೊಗ್ಗ ಜಿಲ್ಲೆಗೆ ಪೈಲೇಟ್ ಪ್ರಾಜೆಕ್ಟ್ ಮಹಿಳೆಯರಿಗೂ ಆದ್ಯತೆ ನೀಡುವ ನಿಟ್ಟಿನಲ್ಲಿ ಸಾಲ ಯೋಜನೆ ನೀಡಲಾಗಿದೆ ಎಂದು ಮಂಜುನಾಥ್ ಪೂಜಾರಿಯವರು ತಿಳಿಸಿದ್ದಾರೆ

Related posts

ಹೆಬ್ರಿ ಮಠದಬೆಟ್ಟು : ನವಕಪ್ರಧಾನ ಹೋಮ, ಕಲಶಾಭಿಷೇಕ, ಪ್ರಸನ್ನ ಪೂಜೆ

Madhyama Bimba

ಪದ್ಮನಾಭ ಭಟ್ ಮುನಿಯಾಲು ನಿಧನ

Madhyama Bimba

ಉದಯ ಶೆಟ್ಟಿ ಮುನಿಯಾಲು ಸಂತಾಪ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More