Blog

ಹರಿದಾಸ ಬಿ ಸಿ ರಾವ್ ಶಿವಪುರರ ಮನೆಗೆ ಭೇಟಿ ನೀಡಿದ ಕೇಮಾರು ಸ್ವಾಮೀಜಿ

ಶಿವಪುರ ಪಾಂಡುಕಲ್ಲು


ಹೆಬ್ರಿ: ಭಕ್ತಿ ಮಾರ್ಗದಿಂದ ಮುಕ್ತಿ ಸಾಧ್ಯ ಎನ್ನುವ ಉದ್ದೇಶದಿಂದ ಸುಮಾರು  40 ವರ್ಷಗಳಿಂದ ಸಾವಿರಕ್ಕೂ ಮಿಕ್ಕಿ ಹರಿಕಥಾ ಕಾರ್ಯಕ್ರಮದ ಮೂಲಕ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಿದ ಹರಿದಾಸ ಬಿ.ಸಿ. ರಾವ್  ಅವರ ಭಕ್ತಿ ಮಾರ್ಗದ ಪ್ರಸಾರ ಶ್ಲಾಘನೀಯ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.

ಅವರು ಶಿವಪುರ ಪಾಂಡು ಕಲ್ಲು ನಲ್ಲಿi ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹರಿದಾಸ ಬಿ. ಸಿ.ರಾವ್ ಶಿವಪುರ ಅವರ ಮನೆಗೆ ಭೇಟಿ ನೀಡಿ  ಅವರನ್ನು ಗೌರವಿಸಿ ಮಾತನಾಡಿದರು.
ಸ್ವಾಮೀಜಿಯವರ ಪಾದಪೂಜೆ ನೆರವೇರಿಸಿದ ಬಿ.ಸಿ.ರಾವ್ ಶಿವಪುರ ಮಾತನಾಡಿ  ನೇರ ನಡೆ-ನುಡಿ ಸರಳತೆಯ ಮೂಲಕ ಎಲ್ಲರೊಂದಿಗೆ ಬೆರೆಯುವ ಕೇಮಾರು ಸ್ವಾಮಿಗಳು ನಮ್ಮ ಸಂಸ್ಕೃತಿ ಮತ್ತು ನಮ್ಮ ಧರ್ಮದ ಬಗ್ಗೆ ಜನರಲ್ಲಿ  ಜಾಗೃತಿ ಮೂಡಿಸುತ್ತಾ  ಜನರ ಸ್ವಾಮೀಜಿಯಾಗಿ ಜನಪ್ರಿಯರಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಅಹಲ್ಯ  ಸಿ. ರಾವ್,  ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಹೆಬ್ರಿ ಉದಯ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಡಾ.ರಾಘವೇಂದ್ರ ಬಡ್ಕಿಲ್ಲಾಯ
ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Related posts

ಮೂಡುಬಿದಿರೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ  ಕುಸುಮಾಧರರಿಗೆ ಬೀಳ್ಕೊಡುಗೆ

Madhyama Bimba

ನ್ಯಾಯವಾದಿ ಎಂ ಕೆ ವಿಜಯ ಕುಮಾರ್ ಸ್ಮರಣಾರ್ಥ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

Madhyama Bimba

ಡಾ. ಬಿ ಆರ್ ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಗೆ ಪದಾಧಿಕಾರಿಗಳ ನಾಮ ನಿರ್ದೇಶನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More