ಮೂಡುಬಿದಿರೆ

  ಮಳೆ ಗಾಳಿಗೆ ಮಗುಚಿ ಬೀಳುವ ಹೋರ್ಡಿಂಗ್ಸ್ !

ಮೂಡುಬಿದಿರೆ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಶುಕ್ರವಾರ ಮೇ 8ರಂದು ಸಾಯಂಕಾಲ ಸುರಿದ ಮಳೆ ಸಹಿತ ಭಾರೀ ಗಾಳಿಗೆ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಅಪಾರ ಹಾನಿಯಾಗಿರುವುದು ಕಂಡು ಬಂದಿದೆ.

ಹಂಚಿನಮಾಡು ಹೊಂದಿರುವ ವಾಸದ ಮನೆಗೆ ಹೆಚ್ಚಿನ ಪ್ರಮಾಣದಲ್ಲಿ ಅಪಾಯವನ್ನು ಕಂಡುಕೊಂಡರೆ, ಮರದ ಗೆಲ್ಲುಗಳು ತುಂಡಾಗಿ ಬಿದ್ದು ವಿದ್ಯುತ್ ವೈರುಗಳು ಹಾಗೂ ಕಟ್ಟಡಗಳಿಗೆ ಹಾನಿ ಉಂಟಾಗಿರುವುದು ತಿಳಿದು ಬಂದಿದೆ. ಈ ನಡುವೆ ಇತ್ತೀಚೆಗೆ ತಾಲೂಕಿನ ಬೇರೆ ಬೇರೆ ಭಾಗಗಳಲ್ಲಿ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಕಾರಣಗಳಿಗಾಗಿ ಫ್ಲೆಕ್ಸ್ ಮತ್ತು ಹೋರ್ಡಿಂಗ್ಸ್ ಗಳನ್ನು ಅಳವಡಿಸಲಾಗಿದ್ದು, ಮುಂಗಾರು ಮುಂಚಿತವಾದ ಭಾರೀ ಗಾಳಿಗೆ ಸಿಲುಕಿ ಫ್ಲೆಕ್ಸ್ ಹೋರ್ಡಿಂಗ್ಸ್ ಅಪಾಯವನ್ನು ತಂದೊಡುತ್ತಿರುವುದು ಕಂಡು ಬಂದಿದೆ.

ಗಾಳಿಯ ತೀವ್ರತೆಗೆ ಹಲವಾರು ಫ್ಲೆಕ್ಸ್ ಗಳು ಧರೆಗುಳಿದರೆ ಕೆಲವೊಂದು ಫ್ಲೆಕ್ಸ್ ಬೋರ್ಡ್ ಗಳಿಂದಾಗಿ ಕೆಲವು ಜನ, ಜಾನುವಾರು ಸಂಚಾರಕ್ಕೆ ಅಪಾಯ ಕಾಣುವಂತಾಗಿದೆ. ಶುಕ್ರವಾರ ಬಿರುಗಾಳಿ ರೀತಿಯಲ್ಲಿ ಬಂದ ಗಾಳಿಯು ತೆಂಗು ಕಂಗು ಮರಗಳನ್ನು ತುಂಡರಿಸಿರುವುದಲ್ಲದೆ ಹೋರ್ಡಿಂಗ್ಸ್ ಗಳನ್ನು ಮಗುಚಿ ಬೀಳುವಂತೆ ಮಾಡಿದೆ. ರಸ್ತೆಯ ತಿರುವುಗಳಲ್ಲಿ ಮತ್ತು ರಸ್ತೆಯ ಪಕ್ಕದಲ್ಲಿಯೇ ಹೋರ್ಡಿಂಗ್ಸ್ ಗಳು ಬಹುತೇಕ ಕಡೆ ಇರುವುದರಿಂದ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ. ಗಾಳಿ ತೀವ್ರತರವಾಗಿ ಬೀಸಲು ಪ್ರಾರಂಭಿಸಿದರೆ ಫ್ಲೆಕ್ಸ್ ಹರಿಯುವ ಶಬ್ದವು ಭೀಕರವಾಗಿರುತ್ತದೆ. ಅಲ್ಲದೆ ರಸ್ತೆಯ ಮೇಲೆ ಕಟ್ಟಡಗಳ ಮೇಲೆ ಹಾರಿ ಬೀಳುತ್ತಿರುವುದನ್ನು ಕಾಣಬಹುದಾಗಿದೆ.

ಕಳೆದ ಕೆಲವು ದಿನಗಳಲ್ಲಿ ಸಿಕ್ಕಾಪಟ್ಟೆ ಫ್ಲೆಕ್ಸ್ ಗಳನ್ನು ರಸ್ತೆ ಪಕ್ಕದಲ್ಲಿ ಅಳವಡಿಸಿದ್ದು, ಸ್ಥಳಿಯಾಡಳಿತಗಳು ರಸ್ತೆಯ ಪಕ್ಕದಲ್ಲಿ ಅಳವಡಿಸಲಾದ ಹೋರ್ಡಿಂಗ್ಸ್ ಗಳು ವಾಹನ ಸವಾರರಿಗೇ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆಗಳು ಇವೆ. ಮಳೆಗಾಲದ ಸಂದರ್ಭದಲ್ಲಿ ಬೀಸುವ ಭಾರಿ ಗಾಳಿಯು ಹೋರ್ಡಿಂಗ್ಸ್ ಗಳನ್ನು ಫ್ಲೆಕ್ಸ್ ಗಳನ್ನು ಬಹಳಷ್ಟು ಕಾಡುವುದರಿಂದ ಜನ ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿ ಕಂಡುಬರುವುದರಿಂದ ಈ ಬಗ್ಗೆ ತುರ್ತು ಕ್ರಮ ಅವಶ್ಯಕತೆವಾಗಿದೆ.

ಹೋರ್ಡಿಂಗ್ಸ್ ಗಳನ್ನು ಭೂಮಿಯ ಮೇಲ್ಭಾಗದಲ್ಲಿ ಹಾಕುವ ಹಿನ್ನೆಲೆಯಲ್ಲಿ ಮಳೆಗಾಲದ ಗಾಳಿಗೆ ಶೀಘ್ರ ತುತ್ತಾಗಲಿವೆ. ಕಳೆದ ವರ್ಷ ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಮಳೆಗಾಲದ ಗಾಳಿಗೆ ವಾಣಿಜ್ಯ ಸಂಕೀರ್ಣವೊಂದರ ಮೇಲೆ ಅಳವಡಿಸಲಾದ ಬೃಹತ್ ಫ್ಲೆಕ್ಸ್ ಗಳಿಗೆ ಹಾರಿ ನಿಲ್ದಾಣದ ಮೇಲೆ ಬಿದ್ದಿತ್ತು. ಅದೃಷ್ಟವಶಾತ್ ಜನ ತುಂಬಾ ಇದ್ದರಾದರೂ ಅಪಾಯದಿಂದ ಪಾರಾಗಿದ್ದರು. ಆ ರೀತಿ ಈ ಬಾರಿ ನಡೆಯದಂತೆ ಅಪಾಯ ತಡೆಯಲು ಸ್ಥಳಿಯಾಡಳಿತ ಅಪಾಯ ನಡೆಯುವ ಮುಂಚಿತವಾಗಿಯೇ ಕ್ರಮ ಕೈಗೊಳ್ಳುವುದು ಅವಶ್ಯಕವೆನಿಸಿದೆ.

Related posts

ಪ್ರೇರಣಾ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Madhyama Bimba

ಮೂಡುಬಿದಿರೆ ಶ್ರೀ ರಾಮ ಮಂದಿರದಲ್ಲಿ ಮೇ 6ರಿಂದ ಬ್ರಹ್ಮಕಲಶ ಸಂಭ್ರಮ- ದೇವಸ್ಥಾನದ ನವೀಕರಣ, ಸಮುದಾಯ ಭವನ ಅನ್ನಚತ್ರ, ಪಾಕಶಾಲೆ ಆಧುನೀಕರಣ

Madhyama Bimba

ವಾಲ್ಪಾಡಿ ಪಂಚಾಯತ್ ಅರಿವು ಕೇಂದ್ರ ಉದ್ಘಾಟನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More