ಮೂಡುಬಿದಿರೆ

ಮಹಾವೀರ ಕಾಲೇಜು ವಿದ್ಯಾರ್ಥಿಗಳಿಗೆ ಕಾರ್ಪೊರೇಟ್ ಓರಿಯಂಟೇಶನ್ ಡೇ’ ಕಾರ್ಯಾಗಾರ

ಮೂಡುಬಿದಿರೆ: ಮಾಹೆ ಮತ್ತು ಶ್ರೀ ಮಹಾವೀರ ಕಾಲೇಜು ಮೂಡುಬಿದಿರೆ ಸಂಸ್ಥೆಗಳ ವತಿಯಿಂದ ಅಂತಿಮ ಪದವಿ ವಿದ್ಯಾರ್ಥಿಗಳ ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ಉದ್ದೇಶದಿಂದ ‘ಕಾರ್ಪೊರೇಟ್ ಓರಿಯಂಟೇಶನ್ ಡೇ’ ಕಾರ್ಯಾಗಾರದ ಎರಡನೇ ಆವೃತ್ತಿಯನ್ನು ಫೆಬ್ರವರಿ 14ರಂದು ಶಾರದಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಾಗಾರವನ್ನು ಉದ್ಘಾಟಿಸಿದ ಮಾಹೆ ಮಣಿಪಾಲ್ ನ ಪ್ರೋ-ಛಾನ್ಸಲರ್ ಡಾ. ಹೆಚ್. ಎಸ್. ಬಲ್ಲಾಳ್ ಮಾತನಾಡಿ “ಇಂದು ಉದ್ಯೋಗ ದೊರೆಯಬೇಕಾದರೆ ಶಿಕ್ಷಣದೊಂದಿಗೆ ಅಗತ್ಯವಾದ ಉತ್ತಮ ಸಂವಹನ, ಕಾರ್ಯಕ್ಷೇತ್ರಕ್ಕೆ ಪೂರಕವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ. ಗ್ರಾಮೀಣ ಪ್ರದೇಶದಿಂದ ಬಂದ ವಿದ್ಯಾರ್ಥಿಗಳಲ್ಲಿ ಈ ಕೌಶಲಗಳನ್ನು ಬೆಳೆಸುವುದು ನಮ್ಮ ಸಂಸ್ಥೆಯ ಉದ್ದೇಶ. ಶ್ರೀ ಮಹಾವೀರ ಕಾಲೇಜು ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ 100 ಶೇ. ಉದ್ಯೋಗಾವಕಾಶ ಒದಗಿಸುತ್ತಿರುವುದು ಮತ್ತು ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಏರಿಕೆ ಕಂಡಿರುವುದು ಸಂತಸ ತಂದಿದೆ” ಎಂದರು.

ಮಾಹೆ ಆಡಳಿತಾಧಿಕಾರಿ ಡಾ. ಕೆ. ಶ್ರೀಧರ ರಂಗನಾಥ ಪೈ ಅವರು “ಮಹಾವೀರ ಕಾಲೇಜಿನ ವಿದ್ಯಾರ್ಥಿಗಳಿಗೆ ವೃತ್ತಿ ಆಧರಿತ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಏರ್ಪಡಿಸಲು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಶ್ರಮಿಸುತ್ತಿವೆ. ಈ ರೀತಿಯ ಕೌಶಲ್ಯಾಭಿವೃದ್ಧಿ ಕಾರ್ಯಾಗಾರಗಳ ಮುಖಾಂತರ ಯುವಜನತೆಗೆ ಉತ್ತಮ ಮಾರ್ಗದರ್ಶನ ನೀಡಲು ಸಾಧ್ಯ.” ಎಂದರು.

ಕಾಲೇಜಿನ ಹಳೆವಿದ್ಯಾರ್ಥಿ ಮತ್ತು ಕಾರ್ಯಕ್ರಮದ ಪ್ರವರ್ತಕ ಹಾಗೂ ಮೈಂಡ್‌ಫುಲ್ ಕನ್ಸಲಿಂಗ್, ಮಂಗಳೂರು ಇದರ ಸ್ಥಾಪಕ ಸಂಜಯ್ ಭಟ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಮಹಾವೀರ ಕಾಲೇಜಿನಲ್ಲಿ ಮಾಹೆ ಮತ್ತಿತರ ಸಂಸ್ಥೆಗಳ ಸಂಪನ್ಮೂಲ ವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗಾಗಿ ನಡೆಯುತ್ತಿರುವ ಉದ್ಯೋಗಾಧಾರಿತ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಕುರಿತು ತಿಳಿಸಿದರು.

ಕಾಲೇಜು ವಿಶ್ವಸ್ತ ಮಂಡಳಿಯ ಅಧ್ಯಕ್ಷರಾದ ಕೆ ಅಭಯಚಂದ್ರ ಜೈನ್ ಸಭೆ ಅಧ್ಯಕ್ಷತೆ ವಹಿಸಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗಾಗಿ ಆರಂಭವಾದ ಮಹಾವೀರ ಕಾಲೇಜು ಮತ್ತು ಅಲ್ಲಿಯ ವಿದ್ಯಾರ್ಥಿಗಳ ಸಾಧನೆಗಳನ್ನು ಉಲ್ಲೇಖಿಸುತ್ತಾ “ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣವನ್ನು ನಿರ್ಮಿಸಲು ಮಾಹೆ ಪ್ರೋತ್ಸಾಹಿಸಿದೆ. ವಿದ್ಯಾರ್ಥಿಗಳು ದೇಶದ ಯಾವುದೇ ಭಾಗದಲ್ಲಾದರೂ ದುಡಿಯುವ ಸಾಮರ್ಥ್ಯವನ್ನು ಹೊಂದಿ ಸ್ವಾಭಿಮಾನಿಗಳಾಗಿ ಬದುಕಬೇಕು” ಎಂದರು.

ತೃತೀಯ ಬಿ.ಕಾಂ ವಿದ್ಯಾರ್ಥಿನಿ ದೀಕ್ಷಾ ಮತ್ತು ತಂಡ ಪ್ರಾರ್ಥಿಸಿದರು. ತೃತೀಯ ಬಿ.ಸಿ.ಎ ವಿದ್ಯಾರ್ಥಿನಿ ಸಾಕ್ಷಿ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ. ತೃತೀಯ ಬಿ.ಎ. ವಿದ್ಯಾರ್ಥಿನಿ ಶ್ರೇಷ್ಠ ಶೆಣೈ ಅವರು ವಂದಿಸಿದರು. ತೃತೀಯ ಬಿ.ಸಿ.ಎ ವಿದ್ಯಾರ್ಥಿನಿ ಪ್ರತಿಷ್ಠಾ ಜೈನ್ ಅವರು ನಿರೂಪಿಸಿದರು.

ಅಂತಿಮ ಪದವಿಯ ವಿದ್ಯಾರ್ಥಿಗಳಿಗೆ ಕಾರ್ಪೊರೇಟ್ ಜಗತ್ತಿನ ಕುರಿತು ಸ್ಪಷ್ಟ ಅರಿವು ಮೂಡಿಸಿ, ಅವರ ವೃತ್ತಿ ಜೀವನದ ದಿಕ್ಕನ್ನು ದೃಢಪಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿದ್ದ ಈ ಕಾರ್ಯಕ್ರಮದಲ್ಲಿ ಮಾಹೆಯ ಸ್ಪೂಡೆಂಟ್ ಆಕ್ಸಿಸಿಶನ್ ಮತ್ತು ಮಾರ್ಕೆಟಿಂಗ್ ವಿಭಾಗದ ಮುಖ್ಯ ಅಧಿಕಾರಿಯಾದ ಆದಿತ್ಯ ಮೋಹನ್ ಜಾಧವ್ ಅವರು ಕಾರ್ಯತಂತ್ರಗಳ ಕುರಿತು, ಮಾನವ ಸಂಪನ್ಮೂಲ ನಿರ್ದೇಶಕರಾದ ಸ್ಮಿತಾ ಮತ್ತು ಫ್ಲೋನಾ ಅವರು ಮಾನವ ಸಂಪನ್ಮೂಲಗಳ ಕುರಿತು, ಹಣಕಾಸು ವಿಭಾಗದ ನಿರ್ದೇಶಕರಾದ ಸಿ ಎ ದಿಲೀಪ್ ಭಂಡಾರಿ ಎಸ್ ಇವರು ಹಣಕಾಸಿನ ನಿರ್ವಹಣೆಯ ಕುರಿತು. ಕಾನೂನು ವಿಭಾಗದ ನಿರ್ದೇಶಕರಾದ ಮಿರುಲ್ ಧವಲ್ ಭವಸಾರ್ ಅವರು ಕಾರ್ಪೊರೆಟ್ ಜಗತ್ತಿನ ಕಾನೂನಿನ ಕುರಿತು ಮಾಹಿತಿ ನೀಡಿದರು.

ಸಾರ್ವಜನಿಕ ಸಂಪರ್ಕ, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ಕುರಿತು ಅವುಗಳ ತಜ್ಞರಾದ ಭರತ್ ಕುಮಾರ್. ಸಂಗ್ರಹಣೆಯ ಕುರಿತು ಉತ್ಪನ್ನಗಳ ಕೊಳ್ಳುವಿಕೆ ವಿಭಾಗದ ನಿರ್ದೇಶಕರಾದ ರಾಜೇಶ್ ಕೋಮರ್ಲ, ಐಟಿ ಮತ್ತು ಡಿಜಿಟಲ್ ಟ್ರಾನ್ಸಾರ್ಮೇಷನ್ ವಿಭಾಗದ ತಜ್ಞರಾದ ಸತೀಶ್ ಕಾಮತ್ ಅವರಿಂದ ಮಾಹಿತಿ ತಂತ್ರಜ್ಞಾನದ ಕುರಿತು, ಪ್ರವೇಶಾತಿ ವಿಭಾಗದ ನಿರ್ದೇಶಕರಾದ ಮಹೇಶ್ ಪ್ರಭು ಅವರು ಸೇಜಸ್ ವಿದ್ಯಾರ್ಥಿವೇತನದ ಕುರಿತು ಮಾಹಿತಿ ನೀಡಿದರು.

ಶ್ರೀ ಮಹಾವೀರ ಕಾಲೇಜಿನ ಬೋಧಕರಾದ ಸುವರ್ಣಲತಾ ಶೆಣೈ, ಶೃತಿ ಎಸ್. ಡಾಂಗೆ, ಕೀರ್ತಳಾ, ಅಕ್ಷಿತ್ ರೈ, ರಾಧಿಕಾ ರಾವ್, ನಿಶಾ ಎಸ್. ಬಂಗೇರ, ಪ್ರಜ್ಞಾ ಜೈನ್ ಅವರು ಉಪಸ್ಥಿತರಿದ್ದರು. ಬೆಳಗಿನಿಂದ ಸಂಜೆಯವರೆಗೂ ನಡೆದ ಒಂದು ದಿನದ ಈ ತರಬೇತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದ ಎಲ್ಲ ಸಂಪನ್ಮೂಲ ವ್ಯಕ್ತಿಗಳನ್ನೂ, ಈ ಹಿನ್ನೆಲೆಯಲ್ಲಿ ಸಹಕಾರ ನೀಡಿದ ಮಾಹೆಯ ಪ್ರೋ-ಛಾನ್ಸಲರ್, ಆಡಳಿತಾಧಿಕಾರಿ ಮತ್ತು ಮಾಹೆ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರಿಗೆ ಶ್ರೀ ಮಹಾವೀರ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಧನ್ಯವಾದವಿತ್ತರು.

Related posts

ಮೂಡುಬಿದಿರೆಯಲ್ಲಿ ಸಮಾಜ ಮಂದಿರ, ಯುವವಾಹಿನಿಯಿಂದ ಬೆದ್ರ ಗೂಡುದೀಪ ಮತ್ತು ರಂಗೋಲಿ

Madhyama Bimba

ಲಿಂಗಮ್ಮ ಮೂಲ್ಯ ಇನ್ನಿಲ್ಲ

Madhyama Bimba

ಅಪಘಾತದಲ್ಲಿ ವಿದ್ಯಾರ್ಥಿ ಮೃತ್ಯುವಶ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More