ಮೂಡುಬಿದಿರೆ

ಎನ್‌ಡಿಎ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನಿಂದ ಗಮನಾರ್ಹ ಸಾಧನೆ : 24 ವಿದ್ಯಾರ್ಥಿಗಳು ಉತ್ತೀರ್ಣ

ಮೂಡುಬಿದಿರೆ: ಕೇಂದ್ರದ ಲೋಕಸೇವಾ ಆಯೋಗದ ಮೂಲಕ ನಡೆಯುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಹಾಗೂ ನೇವಲ್ ಅಕಾಡೆಮಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ 24 ವಿದ್ಯಾರ್ಥಿಗಳು ಉತ್ತೀರ್ಣರಾಗಿ ರಾಷ್ಟ್ರದ ಗಮನ ಸೆಳೆದಿದ್ದಾರೆ.

ಭಾರತೀಯ ಸೇನೆ, ನೌಕಾಪಡೆ ಹಾಗೂ ವಾಯುಪಡೆಯ ಅಧಿಕಾರಿಗಳಾಗಲು ಎನ್‌ಡಿಎ ಪ್ರಮುಖ ಘಟ್ಟವಾಗಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಸಮರ್ಥವಾಗಿ ಸಿದ್ದಗೊಳಿಸುವ ಕಾರ್ಯವನ್ನು ಆಳ್ವಾಸ್ ಪದವಿಪೂರ್ವ ಕಾಲೇಜು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ.

ವಿದ್ಯಾರ್ಥಿಗಳಾದ ವಿವೇಕ್ ಎ, ಅದ್ವತ್ ವಿಕ್ರಾಂತ್ ಶೆಂಡೆ, ಅಮೋಫ್ ನಾಗರಾಜ್ ಬಿಲ್ಲೂರ್, ಮೊಹಮ್ಮದ್ ಯೂಸುಫ್ ನಿಸಾರ್ ಶೇಖ್, ಸಾಯೀಶ್ ಪ್ರಶಾಂತ್ ತಾಳೇಕರ್, ಪ್ರಹ್ಲಾದ್ ದತ್ತ ದೇಸಾಯಿ, ಸಂಹಿತ್ ವಿ ರಾವ್, ಹರ್ಷ ??, ಕೃತಿಕ್ ಬಿ, ಪ್ರಣವ್ ಎನ್ ಪಂಡಿತ್, ವಿಜಯಕುಮಾರ್ ಸಂಗಯ್ಯ ಚಿಕ್ಕಮಠ, ಪಿಯೂಷ್ ಎಚ್, ಶ್ರೇಯಸ್ ಸಿ ಕಬ್ಬಿನಕಂತಿಮಠ, ಭರತೇಶ್ ನಾಗೇಶ್ ಮೊಗೇರ್, ಚಿನ್ಮಯ್ ಎಸ್, ಸಂಕೇತ್ ಭಟ್, ಸುಮಿತ್ ವಿ ಕೆ, ಹರ್ಷ ರೆಡ್ಡಿ, ಮೋಹಿತ್ ಕುಮಾರ್ ಜೆ, ಅಕ್ಷಯ್ ಭಾರದ್ವಾಜ್, ಅನುಷ್ ಅರುಣ್ ಕೆ. ಪಿಯೂಷ್ ಎಚ್. ವಿಸ್ಮಯ್, ನಾರಾಯಣ್ ನಾಡಿಗ್, ಮೆಟ್ರಾಯ್ ಕ್ಯಾಸ್ಟೆಲಿನೋ, ಇಶಾನ ಉತ್ತೀರ್ಣರಾಗಿದ್ದಾರೆ.

ಆಳ್ವಾಸ್‌ನಲ್ಲಿ ಎನ್‌ಡಿಎ ಪರೀಕ್ಷೆಗಾಗಿ ವಿಶೇಷ ತರಬೇತಿ

ಆಳ್ವಾಸ್‌ನಲ್ಲಿ ಎನ್‌ಡಿಎ ತರಬೇತಿಗೆ ವಿಶೇಷ ಮಹತ್ವ ನೀಡಲಾಗುತ್ತಿದ್ದು, ಇಲ್ಲಿ ವಿದ್ಯಾರ್ಥಿಗಳಿಗೆ ಪಿಯು ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯನ್ನೂ ಸಮನ್ವಯಗೊಳಿಸಲಾಗಿದೆ. ಎನ್‌ಡಿಎ ಪರೀಕ್ಷೆಯ ಗಣಿತ, ಸಾಮಾನ್ಯ ಜ್ಞಾನ, ಇಂಗ್ಲಿಷ್ ಹಾಗೂ ತಾರ್ಕಿಕ ಚಿಂತನೆ ವಿಭಾಗಗಳಿಗೆ ಅನುಭವಸಂಪನ್ನ ಉಪನ್ಯಾಸಕರು ತರಬೇತಿ ನೀಡುತ್ತಾರೆ. ನಿಯಮಿತ ಮಾಕ್ ಟೆಸ್ಟ್‌ಗಳು, ಪ್ರಶ್ನಾಪತ್ರಿಕೆ ವಿಶ್ಲೇಷಣೆ, ಸಮಯ ನಿರ್ವಹಣೆ ಹಾಗೂ ವೈಯಕ್ತಿಕ ಮಾರ್ಗದರ್ಶನ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳ ದೈಹಿಕ ಕ್ಷಮತೆಯನ್ನು ವೃದ್ಧಿಸಲು ನಿಯಮಿತ ವ್ಯಾಯಾಮ, ಪೆರೇಡ್ ತರಬೇತಿ ಮತ್ತು ಕ್ರೀಡಾ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗುತ್ತದೆ.

ಆಳ್ವಾಸ್ ಶಿಕ್ಷಣ ಸಂಸ್ಥೆ ಎನ್‌ಡಿಎ ಕನಸು ಕಾಣುವ ವಿದ್ಯಾರ್ಥಿಗಳಿಗೆ ಸಮಗ್ರ ಮಾರ್ಗದರ್ಶನ ಮತ್ತು ಅತ್ಯುತ್ತಮ ತರಬೇತಿ ನೀಡುವ ಮೂಲಕ ರಾಷ್ಟ್ರ ಸೇವೆಗೆ ಯೋಗ್ಯ ಯುವಕರನ್ನು ರೂಪಿಸುತ್ತಿದೆ.

ಸಾಧಕ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ ಶ್ಲಾಘಿಸಿದ್ದಾರೆ.

ಈ ಪರೀಕ್ಷೆಯಲ್ಲಿ ನಾಲ್ಕು ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದು 7,399 ಹುಡುಗರು 54 ಹುಡುಗಿಯರು ತೇರ್ಗಡೆಯಾಗಿದ್ದಾರೆ ಉತ್ತೀರ್ಣರಾದ ವಿದ್ಯಾರ್ಥಿಗಳು ಮುಂದೆ ನಡೆಯುವ ಎಸ್ ಎಸ್ ಬಿ ಪರೀಕ್ಷೆಯನ್ನು ಎದುರಿಸಬೇಕಾಗಿದೆ ಎಂದು ಮೋಹನ್ ಆಳ್ವ ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಮಹಮ್ಮದ್ ಸದಾ ಕತ್ ಸಂಯೋಜಕರಾದ ವರುಣ್ ಪ್ರಭು, ದೇವಿಪ್ರಸಾದ್ ಭಾಗವಹಿಸಿದ್ದರು.

Related posts

ಮೂಡಬಿದ್ರೆಯ ರೋಟರಿ ಶಾಲೆಯ ಸಂಸತ್ ಚುನಾವಣೆ

Madhyama Bimba

ಭಜನಾ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ

Madhyama Bimba

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಪಡೀಲ್ ಮಂಗಳೂರು ಶಾಖೆ ದ. ಕ. ಜಿಲ್ಲಾಧಿಕಾರಿ ಕಾರ್ಯಾಲಯ ಪ್ರಜಾಸೌಧಕ್ಕೆ ಸ್ಥಳಾಂತರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More