ಕಾರ್ಕಳಹೆಬ್ರಿ

ಶಿವಪುರ ಎಲಿಕೋಡು ಮಠ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ- ಶಿಲಾಮಯ ಗರ್ಭಗೃಹ ಸಮರ್ಪಣೆ – ಪುನ: ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ : ಕೃಷ್ಣಾಪುರ ಮಠಾದೀಶರು ಭಾಗಿ

ಹೆಬ್ರಿ : ಹೆಬ್ರಿ ತಾಲ್ಲೂಕಿನ ಶಿವಪುರ ಎಲಿಕೋಡು ಮಠದಲ್ಲಿ ಶಿಲಾಮಯ ಗರ್ಭಗೃಹ ಸಮರ್ಪಣೆ, ಸಪರಿವಾರ ನಾಗಬ್ರಹ್ಮ ಪರಿವಾರ ದೇವರುಗಳು ಪ್ರತಿಷ್ಠಾಪನೆ ಮತ್ತು ಸಪರಿವಾರ ಶ್ರೀ ಗೋಪಾಲಕೃಷ್ಣ ಹಾಗೂ ಶ್ರೀ ದುರ್ಗಾಪರಮೇಶ್ವರಿ ದೇವರ ಪುನ:ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕವು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ   ನಡೆಯಿತು.

ಉಡುಪಿ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ದಿವ್ಯ ಉಪಸ್ಥಿತರಿದ್ದು ಪೂಜೆ ನೆರವೇರಿಸಿ ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು. ಅರ್ಚಕ ವೇದಮೂರ್ತಿ ವಾಸುದೇವಾ ಭಟ್ ಶಿವಪುರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು.

ಸರ್ತಿ ವ್ಯವಸ್ಥಾಪಕರಾದ ಶ್ರೀನಿವಾಸ ಎಲಿಕೋಡು, ಬೈಕಾಡಿ ಮಂಜುನಾಥ ರಾವ್ ಎಲಿಕೋಡು ಶಿವಪುರ, ಭೋಜ ಶೆಟ್ಟಿ ಎಲಿಕೋಡು ಮತ್ತು ಎಲಿಕೋಡು ಪ್ರದೇಶದ ಪ್ರಮುಖರಿಗೆ ಕ್ಷೇತ್ರದ ಮಹಾಪ್ರಸಾದ ನೀಡಿ ಗೌರವಿಸಲಾಯಿತು. ಎಲಿಕೋಡು, ಶಿವಪುರ ಪರಿಸರದ ಪ್ರಮುಖರು, ಗಣ್ಯರ ಸಹಿತ ನೂರಾರು ಭಕ್ತ ಸಮೂಹ ಭಾಗಿಯಾದರು. ಎಲಿಕೋಡು ಮಠದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಎಲಿಕೋಡು ಮನೆತನದವರು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದರು.

ಎಲಿಕೋಡು ಮಠದ ಪ್ರಧಾನ ಅರ್ಚಕ ವಾಸುದೇವ ಆಚಾರ್ಯ, ಅರ್ಚಕ ವೃಂದದವರು, ಪ್ರಮುಖರಾದ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಪರಿವೀಕ್ಷಕ ನಿತ್ಯಾನಂದ ಶೆಟ್ಟಿ ಶಿವಪುರ ಎಲಿಕೋಡು, ಶ್ರೀನಾಥ್ ಎಲಿಕೋಡು, ಶಂಕರನಾರಾಯಣ ಕೊಡಂಚ, ಡಾ. ಗುರುಪ್ರಸಾದ ಕೊಡಂಚ, ರಾಧಮ್ಮ ಎಲಿಕೋಡು, ಎಲಿಕೋಡಿನ ವಿವಿಧ ಪ್ರಮುಖರಾದ ಚಂದು ನಾಯ್ಕ್, ರಮೇಶ ನಾಯ್ಕ್, ಪಾಂಡು ನಾಯ್ಕ್, ಹರೀಶ ನಾಯ್ಕ್, ಸಂತೋಷ ನಾಯ್ಕ್, ಪ್ರದೀಪ ನಾಯ್ಕ್ ಸಹಿತ ಎಲಿಕೋಡು ಮಠದ ಪ್ರಮುಖರು, ಎಲಿಕೋಡು ಮನೆತನದವರು, ವಿವಿಧ ಪ್ರಮುಖರು, ಗಣ್ಯರು, ಅರ್ಚಕ ವೃಂದದವರು, ಸ್ಥಳೀಯ ಪ್ರಮುಖರು, ವ್ಯವಸ್ಥಾಪನಾ ಮತ್ತು ಜೀರ್ಣೋದ್ಧಾರ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಎಲಿಕೋಡು ಶಿವಪುರ ನಿತ್ಯಾನಂದ ಶೆಟ್ಟಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

Related posts

ಕಾರ್ಕಳ ಶ್ರೀ ಶಾರದಾ ಪೂಜಾ ಸಮಿತಿಯ ನೂತನ ಕಾರ್ಯಾಲಯ ಉದ್ಘಾಟನೆ

Madhyama Bimba

ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಕಟ್ಟೆಮಕ್ಕಿ ಶಂಕರನಾರಾಯಣ- ಮೇ.13ರಿಂದ 14: ಶ್ರೀ ಬ್ರಹ್ಮಲಿಂಗೇಶ್ವರ ದೇವರ ಶಿಲಾಮಯ ದೇಗುಲ ಲೋಕಾರ್ಪಣೆ ಹಾಗೂ ಪುನಃ ಪ್ರತಿಷ್ಠಾ ಮತ್ತು ಬ್ರಹ್ಮಕಲಶೋತ್ಸವ

Madhyama Bimba

ಕಾರ್ಕಳ: ಚಲಿಸುತ್ತಿದ್ದ ಸ್ಕೂಟಿಯಿಂದ ಬಿದ್ದು ಮಹಿಳೆಗೆ ಗಂಭೀರ ಗಾಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More