ಕಾರ್ಕಳಮೂಡುಬಿದಿರೆ

ನಂಬಿಕೆಗೆ ಮತ್ತೊಂದು ಗರಿ – ಜಿ.ಎಲ್. ಆಚಾರ್ಯ ಜ್ಯುವೆಲ್ಲರಿಯ ಲಕ್ಷ್ಮೀಕಾಂತ್ ಆಚಾರ್ಯ, ಸುಧನ್ವ ಆಚಾರ್ಯಗೆ ‘ಪವರ್ ಆಫ್ ಯಂಗ್’ ಗೌರವ.

ಹೈದರಾಬಾದ್‌ನಲ್ಲಿ ಮೇ 8,9,10ರಂದು ನಡೆದ ‘ಪವರ್ ಆಫ್ ಯಂಗ್’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುತ್ತೂರಿನ ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನ ಲಕ್ಷ್ಮೀಕಾಂತ್ ಆಚಾರ್ಯ ಹಾಗೂ ಸುಧನ್ವ ಆಚಾರ್ಯ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.

ಹೈದರಾಬಾದ್ ಹೈಟೆಕ್ ಸಿಟಿ ಜ್ಯುವೆಲ್ಲರಿ ಮ್ಯಾನುಫ್ಯಾಕ್ಟರರ್ಸ್ ಅಸೋಸಿಯೇಷನ್ (ಹೆಚ್‌ಜೆಎಂಎ), ಆರ್ಟ್ ಆಫ್ ಜ್ಯುವೆಲ್ಲರಿ ಮ್ಯಾಗಜಿನ್ ಹಾಗೂ ಇನ್‌ಫಾರ್ಮಾ ಮಾರ್ಕೆಟ್ಸ್ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಆಭರಣ ಕ್ಷೇತ್ರದಲ್ಲಿ ತೋರಿದ ಸಮರ್ಪಣೆ, ಆಭರಣ ವಿನ್ಯಾಸ, ತಯಾರಿಕೆ, ಮಾರುಕಟ್ಟೆ ಹಾಗೂ ನಾವೀನ್ಯತೆಯಲ್ಲಿ ಅಸಾಧಾರಣ ಸಾಧನೆ ಮಾಡಿರುವ ಯುವ ಉದ್ಯಮಿಗಳನ್ನು ಗುರುತಿಸಿ ಗೌರವಿಸುವ ಉದ್ದೇಶದ ಈ ಪ್ರಶಸ್ತಿಗೆ ದೇಶದ ವಿವಿಧ ಭಾಗಗಳಿಂದ ೮ ಯುವ ಸಾಧಕರನ್ನು ಆಯ್ಕೆ ಮಾಡಲಾಗಿತ್ತು. ಆ ಎಂಟು ಸಾಧಕರಲ್ಲಿ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನ ಲಕ್ಷ್ಮೀಕಾಂತ್ ಆಚಾರ್ಯ ಹಾಗೂ ಸುಧನ್ವ ಆಚಾರ್ಯ ಕೂಡ ಸ್ಥಾನ ಪಡೆದಿದ್ದಾರೆ.

“ತಲೆಮಾರಿನ ನಂಬಿಕೆ, ಯುವ ತಲೆಮಾರಿನ ಸಾಧನೆ”

ನಾವೀನ್ಯತೆಯ ವಿನ್ಯಾಸ, ಶುದ್ಧತೆಯ ಭರವಸೆ ಮತ್ತು ಗ್ರಾಹಕ ಸ್ನೇಹಿ ಸೇವೆಯ ಮೂಲಕ ಕರಾವಳಿ ಹಾಗೂ ಮಲೆನಾಡಿನ ಜನರ ಮನೆಮಾತಾಗಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರಿ, ಪುತ್ತೂರಿನಲ್ಲಿ ಮುಖ್ಯ ಕಚೇರಿ ಹೊಂದಿದ್ದು ಸುಳ್ಯ, ಹಾಸನ, ಕುಶಾಲನಗರದಲ್ಲಿ ಶಾಖೆಗಳನ್ನು ಹೊಂದಿದೆ. ಇತ್ತೀಚೆಗೆ ಮೂಡಬಿದ್ರೆಯಲ್ಲಿ ನೂತನ ಮಳಿಗೆಯನ್ನು ಹೊಸ ವಿಳಾಸಕ್ಕೆ ಸ್ಥಳಾಂತರಿಸಿ ಉದ್ಘಾಟಿಸಲಾಗಿದೆ. ತಲೆಮಾರಿನ ನಂಬಿಕೆಯ ಸಂಸ್ಥೆಯನ್ನು ಯುವ ಪೀಳಿಗೆ ಯಶಸ್ವಿಯಾಗಿ ಮುನ್ನಡೆಸುತ್ತಿರುವುದು ಜಿ.ಎಲ್. ಆಚಾರ್ಯ ಜ್ಯುವೆಲ್ಲರಿಯ ಹೆಗ್ಗಳಿಕೆಯಾಗಿದೆ. ಈ ಪ್ರಶಸ್ತಿ ಸಂಸ್ಥೆಯ ಸಾಧನೆಯ ಬತ್ತಳಿಕೆಗೆ ಮತ್ತೊಂದು ಗರಿಯಾಗಿದೆ.

 

Related posts

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ “ವಿಶ್ವ ಮಹಿಳಾ ದಿನ” ಆಚರಣೆ

Madhyama Bimba

ಅರುಣ್ ಗೋವಿಯಸ್ ಇನ್ನಿಲ್ಲ

Madhyama Bimba

ಕಾರ್ಕಳ: ಟ್ರಾಕ್ಟರ್‌ನಿಂದ ಬಿದ್ದು ಮೃತ್ಯು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More