ಮೂಡುಬಿದಿರೆ

ಡಿಕೆ ಶಿವಕುಮಾರ್ ಹುಟ್ಟು ಹಬ್ಬ ಸಂಭ್ರಮಿಸಿದ ಮೂಡುಬಿದಿರೆ ಕಾಂಗ್ರೆಸ್ಸಿಗರು

ಕೆಪಿಸಿಸಿ ಅಧ್ಯಕ್ಷ, ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹುಟ್ಟು ಹಬ್ಬದ ದಿನವನ್ನು ಕಾಂಗ್ರೆಸ್ ಕಾನೂನು ವಿಭಾಗ ದಿಂದ ಆಲಂಗಾರು ಮೌಂಟ್ ರೋಸರಿ ಆಶ್ರಮಕ್ಕೆ ಹಣ್ಣು ಹಂಪಲು ವಿತರಿಸುವ ಮೂಲಕ ಆಚರಿಸಲಾಯಿತು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರು ಹಣ್ಣುಗಳನ್ನು ವಿತರಿಸಿ ಮಾತನಾಡಿ ಜಿಲ್ಲೆಯಲ್ಲಿ ನಿಸ್ವಾಥ೯ವಾದ ಸೇವೆ ನೀಡುವ ಸಂಸ್ಥೆಯಿದ್ದರೆ ಅದು ಆಲಂಗಾರಿನ ಮೌಂಟ್ ರೋಸರಿ ಆಶ್ರಮ. ಇಂದು ಉಪ ಮುಖ್ಯಮಂತ್ರಿ ಡಿಕೆಸಿ ಅವರ ಜನುಮದಿನವಾಗಿದ್ದು ಅವರಿಗೆ ಉತ್ತಮ ಆರೋಗ್ಯ, ರಾಜಕೀಯ ಜೀವನದಲ್ಲಿ ಉತ್ತುಂಗ ಶಿಖರಕ್ಕೆ ಹೋಗುವಂತಹ ಭಾಗ್ಯವನ್ನು ಕರುಣಿಸಲು ಹಿರಿಯರ ಆಶೀವಾ೯ದ ಮುಖ್ಯ. ಮುಂಬರುವ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಲು ನಿಮ್ಮೆಲ್ಲರ ಹಾರೈಕೆಯಿರಲಿ ಎಂದರು.

ಕೆಪಿಸಿಸಿ ವಕ್ತಾರ ಪದ್ಮಪ್ರಸಾದ್ ಜೈನ್, ಸಿಸ್ಟೆರ್ ಪ್ರೆಸಿಲ್ಲ, ಬ್ಲಾಕ್ ವಕ್ತಾರ ರಾಜೇಶ್ ಕಡಲಕೆರೆ, ಪುರಸಭೆಯ ಮಾಜಿ ಸದಸ್ಯರಾದ ಪಿ. ಕೆ ಥೋಮಸ್, ಪುರಂದರ ದೇವಾಡಿಗ, ಜೋಸ್ಸಿ ಮಿನೆಜಸ್, ಇಕ್ಬಾಲ್ ಕರೀಮ್, ಕಾಂಗ್ರೆಸ್ ಪದಾಧಿಕಾರಿಗಳಾದ , ಮರ್ವೀನ್ ಲೋಬೊ, ಅನೀಶ್ ಡಿಸೋಜ, ಪ್ರವೀಣ್ ಕುಮಾರ್,
ಪ್ರವೀಣ್ ಪೂಜಾರಿ, ಚಂದ್ರಹಾಸ ಸನಿಲ್, ಶೇಖರ್ ಪೂಜಾರಿ, ಸಂತೋಷ ಶೆಟ್ಟಿ ಮತ್ತಿತರರು ಈ ಸಂದಭ೯ದಲ್ಲಿದ್ದರು.

Related posts

ಆಳ್ವಾಸ್‌ನ ಓರ್ವರಿಗೆ ಏಕಲವ್ಯ, ನಾಲ್ವರಿಗೆ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ

Madhyama Bimba

ಮೂಡುಬಿದಿರೆ, ಗೌರಿಕೆರೆ ಬಳಿಯ ಶ್ರೀ ರಾಮಪುರದ ಸಪರಿವಾರ ಶ್ರೀ ರಾಮ ದೇವರ ಬಿಂಬ ಪುನರ್ ಪ್ರತಿಷ್ಠೆ ಹಾಗೂ ಅಷ್ಠಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Madhyama Bimba

ಎಲ್‌ಪಿಜಿ ಸರಬರಾಜು ಬಗ್ಗೆ ಕರ್ನಾಟಕ ಸರ್ಕಾರ ಮಹತ್ವದ ಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More