ಕಾರ್ಕಳ

ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಪಿ. ರವಿ ಆಚಾರ್ಯ ಆಯ್ಕೆ- ಜೊತೆ ಮೊಕ್ತೇಸರರಾಗಿ ನಿಟ್ಟೆ ಸುರೇಶ್ ಆಚಾರ್ಯ ಮತ್ತು ಪಿ. ವಸಂತ್ ಆಚಾರ್ಯ

ಕಾರ್ಕಳ : ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಪಿ ರವಿ ಆಚಾರ್ಯ ಪೆರ್ವಾಜೆ, ಜೊತೆ ಮೊಕ್ತೇಸರರಾಗಿ ನಿಟ್ಟೆ ಸುರೇಶ್ ಆಚಾರ್ಯ ಮತ್ತು ಪಿ. ವಸಂತ್ ಆಚಾರ್ಯ ಆಯ್ಕೆಯಾದರು.

ಜೂ.28ರಂದು ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ 10 ಗಂಟೆಗೆ ನಡೆದ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆಯು ಜರುಗಿತು. ಪದಗ್ರಹಣ ಸಮಾರಂಭವು ಜುಲೈ 9ರಂದು ದೇವಸ್ಥಾನದಲ್ಲಿ ನಡೆಯಲಿರುವುದು.

ಕುದುರೆಮುಖ ವನ್ಯಜೀವಿ ಅಭಯಾರಣ್ಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್. ಸತೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಶಿಲ್ಪಿ ರಾಮಚಂದ್ರ ಆಚಾರ್ಯ ವಹಿಸಿದ್ದರು.

ಕ್ಷೇತ್ರದ ಪ್ರಧಾನ ಅರ್ಚಕರಾದ ಪುರೋಹಿತ್ ವಿಠಲ್ ಆಚಾರ್ಯ ಪ್ರಾರ್ಥಿಸಿ, ನಿಕಟ ಪೂರ್ವ ಆಡಳಿತ ಮೊಕ್ತೇಸರರು ಶಿಲ್ಪಿ ರಾಮಚಂದ್ರ ಆಚಾರ್ಯ ಸ್ವಾಗತಿಸಿದರು. ಭಜನಾ ಸೇವಾ ಸಮಿತಿ ಅಧ್ಯಕ್ಷರಾದ ದಿನೇಶ್ ಆಚಾರ್ಯ ಅತ್ತೂರು ವಂದಿಸಿ, ಕಾರ್ಕಳ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷರು ಎಂ. ರಮೇಶ್ ಆಚಾರ್ಯ ನಿರೂಪಿಸಿದರು.

Related posts

ಅಂತರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ  ಮಿಂಚಿದ ಹಿರ್ಗಾನದ ಅದಿತಿ ಶರ್ಮಾ ಹಾಗೂ ರತಿ ಶರ್ಮಾ

Madhyama Bimba

ಕಾರ್ಕಳದಲ್ಲಿ ಸ್ಕೂಟಿ- ಕಾರು ಡಿಕ್ಕಿ

Madhyama Bimba

ಕಂದಾಯ ನಿರೀಕ್ಷಕರಾಗಿ ಪದೋನ್ನತಿ ಹೊಂದಿದ ರಾಚಪ್ಪಜಿ ಅವರಿಗೆ ಅಭಿನಂದನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More