ಮೂಡುಬಿದಿರೆ

ಮೂಡುಬಿದಿರೆ, ಗೌರಿಕೆರೆ ಬಳಿಯ ಶ್ರೀ ರಾಮಪುರದ ಸಪರಿವಾರ ಶ್ರೀ ರಾಮ ದೇವರ ಬಿಂಬ ಪುನರ್ ಪ್ರತಿಷ್ಠೆ ಹಾಗೂ ಅಷ್ಠಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಮೂಡುಬಿದಿರೆ, ಗೌರಿಕೆರೆ ಬಳಿಯ ಶ್ರೀ ರಾಮಪುರದ ಸಪರಿವಾರ ಶ್ರೀ ರಾಮ ದೇವರ ಬಿಂಬ ಪುನರ್ ಪ್ರತಿಷ್ಠೆ ಹಾಗೂ ಅಷ್ಠಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಟಿ. ಮುರಳೀಧರ ತಂತ್ರಿಯವರು ಮೂಡುಬಿದಿರೆ ಮಾ. 14ರಂದು ಬಿಡುಗಡೆಗೊಳಿಸಿದರು.


ದೇವಾಡಿಗರ ಸುಧಾರಕ ಸಂಘ (ರಿ), ಮೂಡುಬಿದಿರೆ ಇದರ ಅಧ್ಯಕ್ಷರು ಹಾಗೂ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಪುರಂದರ ದೇವಾಡಿಗ, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ರತ್ನಾಕರ ಸಿ. ಮೊಲಿ, ಕಾರ್ಯಾಧ್ಯಕ್ಷರಾದ ವಿಶ್ವನಾಥ ಪಿ. ದೇವಾಡಿಗ ಮತ್ತು ಶಶಿಧರ ಎಸ್. ದೇವಾಡಿಗ ಶಿರ್ತಾಡಿ, ಸಮಿತಿಯ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು, ದೇವಾಡಿಗ ಮಹಿಳಾ ಮತ್ತು ಯುವ ವೇದಿಕೆ ಪದಾಧಿಕಾರಿಗಳು, ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಸ್ವಾತಂತ್ರ್ಯ ಪೂರ್ವದಲ್ಲಿ ಶ್ರೀ ರಾಮ ಭಜನಾ ಮಂಡಳಿಯ ಮುಖೇನ ಪ್ರಾರಂಭವಾದ ಈ ಸಂಸ್ಥೆಯು ಮುಂದೆ ಶ್ರೀ ರಾಮ ಮಂದಿರವಾಗಿ ಕಾಲಕಾಲಕ್ಕೆ ಅಭಿವೃದ್ಧಿ ಹೊಂದುತ್ತಾ, ಪ್ರಸ್ತುತ ಹಲವು ಜೀರ್ಣೋದ್ಧಾರ ಕಾಮಗಾರಿಗಳನ್ನು ಕೈಗೆತ್ತಿಕೊಂಡು, ಶ್ರೀ ರಾಮ ಮಂದಿರದಲ್ಲಿ ಬರುವ ಮೇ ತಿಂಗಳ 6ನೇ ತಾರೀಖಿನಿಂದ 10ನೇ ತಾರೀಖಿನವರೆಗೆ ಬಿಂಬ ಪುನರ್ ಪ್ರತಿಷ್ಠೆ ಹಾಗೂ ಅಷ್ಠಬಂಧ ಬ್ರಹ್ಮಕಲಶೋತ್ಸವವು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಂಘದ “ಅಮೃತ ಮಹೋತ್ಸವ” ಆಚರಣೆಯ ಕಾರ್ಯಕ್ರಮವು ನಡೆಯಲಿದೆ.

ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಹಲವು ಜೀರ್ಣೋದ್ಧಾರದ ಕಾಮಗಾರಿಗಳು ಪ್ರಗತಿಯಲ್ಲಿದ್ದು ಶ್ರೀ ರಾಮ ಮಂದಿರದ ಒಳ ಆವರಣದ ಗೋಡೆ ಮತ್ತು ನೆಲಕ್ಕೆ ಗ್ರಾನೈಟ್ ಅಳವಡಿಸಲಾಗಿದೆ. ಗರ್ಭಗುಡಿಯ ಕೆಳಅಂತಸ್ಥಿನ ಮೇಲ್ಛಾವಣಿಗೆ ತಾಮ್ರದ ಹೊದಿಕೆ ಹಾಸುವ ಕೆಲಸ ಪ್ರಗತಿಯಲ್ಲಿದೆ. ಗರ್ಭಗುಡಿಯ ಮರದ ದರಿಗಳಿಗೆ, ಮುಖದ್ವಾರದ ದಾರಂದ ಬಾಗಿಲುಗಳಿಗೆ ಮತ್ತು ಮಂದಿರದ ಮುಖ್ಯ ದ್ವಾರದ ದಾರಂದ ಬಾಗಿಲುಗಳಿಗೆ ಹಿತ್ತಾಳೆಯ ಕವಚ ಹಾಸುವ ಕೆಲಸ ಆಗಬೇಕಿದೆ. ಕ್ಷೇತ್ರದ ದೈವ ಶ್ರೀ ರಕ್ತೇಶ್ವರಿ ಮತ್ತು ಶ್ರೀ ಚಾಮುಂಡೇಶ್ವರಿಯ ಶಿಲಾಮಯ ಗುಡಿಗಳು ನಿರ್ಮಾಣವಾಗಲಿದೆ. ಜೊತೆಗೆ ಸುಮಾರು 1.15ಕೋಟಿ ವೆಚ್ಚದಲ್ಲಿ ಸಮುದಾಯ ಭವನ, ಭೋಜನ ಶಾಲೆ, ಪಾಕ ಶಾಲೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ದಿ. ಮೇ. 08ರಂದು ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದ ಮೊದಲು ಸಮುದಾಯ ಭವನದ ಉದ್ಘಾಟನೆಯಾಗಲಿದೆ.

Related posts

ಮೂಡುಬಿದಿರೆ ಮೊಬೈಲ್ ರಿಟೈಲರ್ಸ್ ಕ್ರಿಕೆಟ್-ಅಲ್ ಝೈನ್ ಪ್ರಥಮ: ಅಶ್ರಫ್ ವಾಲ್ಪಾಡಿ ಸನ್ಮಾನ

Madhyama Bimba

ಅಬ್ದುಲ್ ಅಹದ್ IPS ಡಿ.ಐ.ಜಿ.ಪಿ ಪದೋನ್ನತಿ

Madhyama Bimba

 ಚೇತನ ಯುವಕ ಮಂಡಲದ ವಾರ್ಷಿಕೋತ್ಸವ- ಮಾರ್ನಾಡಿನ ಸೇವಾ ಮಾಣಿಕ್ಯ ರಾಘು ಸಿ ಪೂಜಾರಿಯವರಿಗೆ ಹುಟ್ಟೂರ ಗೌರವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More