ಕಾರ್ಕಳ

ಜೇಸಿ ಇಂಟರ್ನ್ಯಾಷನಲ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ

ಜೇಸಿ ಇಂಟರ್ನ್ಯಾಷನಲ್ ಆಂಗ್ಲಮಾಧ್ಯಮ ಶಾಲೆ, ಕಾರ್ಕಳ ಇಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

ಶಾರದಾಮಾತೆಯ ಮೆರವಣಿಗೆಯೊಂದಿಗೆ ಮಕ್ಕಳಿಗೆ ಆರತಿ ಬೆಳಗಿಸಿ, ತಿಲಕವಿಟ್ಟು, ಚಂಡೆ, ಬ್ಯಾಂಡ್‌ಸೆಟ್‌ನೊಂದಿಗೆ ಸಂಭ್ರಮದಿಂದ ಸ್ವಾಗತಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಲೋಕೋಪಯೋಗಿ ಇಲಾಖೆಯ ಒಂದನೆ ಶ್ರೇಣಿಗುತ್ತಿಗೆದಾರರಾದ ವಾದಿರಾಜ ಶೆಟ್ಟಿಯವರುನೆರವೇರಿಸಿದರು.
ಇವರು ಮಾತನಾಡುತ್ತಾ, ಜೇಸಿ ಶಾಲೆ ಭವಿಷ್ಯದ ಬುನಾದಿಯನ್ನು ಭದ್ರವಾಗಿ ಮಾಡಿಕೊಂಡಿದೆ. ಬಡತನಕ್ಕೆ ನಾವು ಕಾರಣರಾಗಬಾರದು. ಒಳ್ಳೆಯ ವಿದ್ಯಾವಂತರಾಗಿ ನಾವು ಗಳಿಸಿದ ಹಣವನ್ನು ಉಳಿಸಿಕೊಳ್ಳಲು ಕಲಿಯಬೇಕು. ಜೀವನದಲ್ಲಿ ಯಾವುದಕ್ಕೂ ಹಿಂಜರಿಯದೆ ಸಮಯಪ್ರಜ್ಞೆಯಿಂದ ಭದ್ರವಾಗಿ ಕೆಲಸ ಮಾಡಬೇಕು. ಈ ಪ್ರತಿಷ್ಠಿತ ಸಂಸ್ಥೆಯಲ್ಲಿ ಕಲಿತ ಹೆಮ್ಮೆ ನಿಮಗಿರಲಿ, ಸಮಾಜಕ್ಕೆ ನಿಮ್ಮಿಂದ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

‘ಚರಿತ್ರೆ’ಯ ಸಹಸಂಪಾದಕರಾದ ನಿತಿನ್ ಪೂಜಾರಿ ಮಾತನಾಡಿ ಸಂಸ್ಕೃತಿ ಮತ್ತು ಉತ್ತಮ ಕಲಿಕೆಗೆ ಅಡಿಪಾಯ ಹಾಕಿದ ದೊಡ್ಡಕಲ್ಲು ಜೇಸಿ ಶಾಲೆ. ನಾನು ಗಮನಿಸಿದ ಪ್ರಕಾರ ಮಕ್ಕಳು, ಶಿಕ್ಷಕರು ನೆಲದ ಮೇಲೆ ಕುಳಿತಿರುವುದು ಉತ್ತಮ ಸಂಸ್ಕೃತಿಯ ಪದ್ಧತಿ ಅದು ಇಲ್ಲಿದೆ. ಮಕ್ಕಳಿಗೆ ಬಡತನದ ಬಗ್ಗೆ ಕಲಿಸಿದರೆ, ಜೀವನದಲ್ಲಿ ತುಂಬಾ ಸಹಾಯವಾಗುತ್ತದೆ. ಜೀವನದಲ್ಲಿ ಹೇಗಿರಬೇಕು ಎಂಬ ಕಥೆಯನ್ನು ಹೇಳಿ, ಮುಂದೆ ಕಾಲ ಸೆಕೆಂಡುಗಳಲ್ಲಿ ಬದಲಾಗಬಹುದು. ಪುಸ್ತಕದ ಪಾಠದೊಂದಿಗೆ ಜೀವನ ಪಾಠ ಮುಖ್ಯ ಎಂದರು.

ಜೇಸಿ ಅವಿನಾಶ್ ಪಿ. ಶೆಟ್ಟಿಯವರು ಮಾತನಾಡುತ್ತಾ, ನೀವು ಏನು ಸಾಧನೆ ಮಾಡಿದರೂ ನಿಮ್ಮ ತಂದೆ -ತಾಯಿ ಶಿಕ್ಷಕರಿಗೆ ಗೌರವ ಕೊಡಿ. ನಿಮ್ಮ ಗೌರವ ಹೆಚ್ಚಾಗುತ್ತದೆ. ನಮ್ಮ ಟ್ರಸ್ಟ್ ವತಿಯಿಂದ ಸ್ಕೂಲ್ ಡೇ ದಿನ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಕೊಡುತ್ತೇವೆ ಎಂದರು.

ಶಾಲಾ ಅಧ್ಯಕ್ಷರಾದ ಜೇಸಿ ಚಿತ್ತರಂಜನ್ ಶೆಟ್ಟಿಯವರು ಮಾತನಾಡುತ್ತಾ, ಕಲಿಕೆಯಲ್ಲಿ ಯಾವಾಗಲೂ ವಿದ್ಯಾರ್ಥಿನಿಯರದೇ ಮೇಲುಗೈ. ಆದರೆ ವ್ಯವಹಾರದಲ್ಲಿ ಯುವಕರೇ ಮೇಲುಗೈ ಸಾಧಿಸುತ್ತಾರೆ. ಯಾವುದೇ ಶಾಲೆಗೆ ೧೦೦% ಫಲಿತಾಂಶ ಬರಲು ಮುಖ್ಯ ಕಾರಣ ಕೊನೆಯ ಸ್ಥಾನದಲ್ಲಿರುವ ವಿದ್ಯಾರ್ಥಿ. ಹಾಗಾಗಿ ಎಲ್ಲರಿಗೂ ಅಭಿನಂದಿಸುತ್ತೇವೆ. ಇಲ್ಲಿಂದ ಹೊರಹೋದ ವಿದ್ಯಾರ್ಥಿಗಳು ಇಲ್ಲಿಕಳಿಸಿದ ಸಂಸ್ಕೃತಿಯನ್ನು ಮುಂದುವರೆಸಿದರೆ ಉತ್ತಮ ವ್ಯಕ್ತಿಗಳಾಗುತ್ತಾರೆ. ಪೋಷಕರು ಶಿಕ್ಷಕರಿಗೆ ತಮ್ಮ ಮಕ್ಕಳು ಗೌರವ ಕೊಡುವಂತೆ ಕಲಿಸಬೇಕು. ಆಗ ಪೋಷಕರನ್ನು ಮಕ್ಕಳು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದರು.

ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಡಾ. ಶಂಕರನ್ ಪಿ., ಶಾಲಾ ಆಡಳಿತಾಧಿಕಾರಿಯಾದ ಪ್ರಣಿತ್ ಹಾಗೂ ಕಾರ್ಕಳ ಎಜುಕೇಶನ್ ಸೊಸೈಟಿಯ ಜಯಕುಮಾರ್‌ರವರು ಉಪಸ್ಥಿತರಿದ್ದರು.

Related posts

ಪಳ್ಳಿ ಪದವಿ ಪೂರ್ವ ಕಾಲೇಜು: ಶಾಲಾ ಪ್ರಾರಂಭೋತ್ಸವ ಮತ್ತು ಪುಸ್ತಕ, ಸಮವಸ್ತ್ರ ವಿತರಣೆ

Madhyama Bimba

ಹೆಬ್ರಿಯಲ್ಲಿ ಹಣ ಕಳವು- ಪ್ರಕರಣ ದಾಖಲು

Madhyama Bimba

ಕ್ರೈಸ್ಟ್‌ಕಿಂಗ್: ಪ್ರೌಢ ಶಾಲಾ ವಾರ್ಷಿಕೋತ್ಸವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More