ಕಾರ್ಕಳಹೆಬ್ರಿ

ಪಳ್ಳಿ ಪದವಿ ಪೂರ್ವ ಕಾಲೇಜು: ಶಾಲಾ ಪ್ರಾರಂಭೋತ್ಸವ ಮತ್ತು ಪುಸ್ತಕ, ಸಮವಸ್ತ್ರ ವಿತರಣೆ

ಪಳ್ಳಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಪ್ರಾರಂಭೋತ್ಸವ ಹಾಗೂ ಪುಸ್ತಕ, ಸಮವಸ್ತ್ರ ವಿತರಣಾ ಸಮಾರಂಭವು ಜೂ. 1ರಂದು ನಡೆಯಿತು.


ಪಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಉಷಾ ಅಂಚನ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಜಗದೀಶ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ 2025-26ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ 100 ಶೇಕಡಾ ಫಲಿತಾಂಶ ಪಡೆದ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಪರಿಶ್ರಮವನ್ನು ಶ್ಲಾಘಿಸಿ ಮುಂದೆಯೂ ವಿದ್ಯಾರ್ಥಿಗಳ ಸಾಧನೆ ನಿರಂತರವಾಗಿರಲಿ ಎಂದರು.

ಇಲಾಖೆಯ ವತಿಯಿಂದ ನೀಡಿದ ಪಠ್ಯ ಪುಸ್ತಕ ಹಾಗೂ ಸಮವಸ್ತ್ರವನ್ನು ವಿತರಣೆ ಮಾಡಲಾಯಿತು. ದಾನಿಗಳಾದ ಪಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಉಷಾ ಅಂಚನ್ ರವರ ಪುತ್ರ ನಿತೀಶ್ ರವರು ನೀಡಿದ ಬ್ಯಾಗ್, ನೋಟ್ ಪುಸ್ತಕ, ಕೊಡೆ, ಕಂಪಾಸ್ ಬಾಕ್ಸ್ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಸಭೆಯಲ್ಲಿ “ಉತ್ತಮ ಮಕ್ಕಳು ಉಜ್ವಲ ಭವಿಷ್ಯ” ಎಂಬ ಧ್ಯೇಯ ವಾಕ್ಯದ ಮಹತ್ವವನ್ನು ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಪೋಷಕ ಶಿಕ್ಷಕರ ಮಹಾಸಭೆ ನಡೆಯಿತು.

ಮನೋಹರ ಶೆಟ್ಟಿ, ದುರ್ಗಾದಾಸ್ ಕಾಮತ್, ಕಾಲೇಜು ಪ್ರಾಂಶುಪಾಲರಾದ ಹೀಲದಳ್ಳಿ ಮಂಜಪ್ಪ, ಶಾಲಾ ಮುಖ್ಯೋಪಾಧ್ಯಾಯರಾದ ರಾಜೇಶ್ ನಾಯಕ್, ಎಸ್‌ಡಿಎಂಸಿ ಅಧ್ಯಕ್ಷರಾದ ದಿನೇಶ್ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಕಿ ಶ್ರೀಮತಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಆಶಾ ಶೆಟ್ಟಿ ವಂದಿಸಿದರು.

Related posts

ಬೆಂಗಳೂರಿನಲ್ಲಿ ನಾರಾಯಣ ಗುರು ಅಭಿವೃದ್ಧಿ ನಿಗಮದ ಕಚೇರಿ ಉದ್ಘಾಟನೆ

Madhyama Bimba

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3 ಮಂಗಳವಾರದಂದು ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

Madhyama Bimba

ಕಾಂಗ್ರೆಸ್ ಕ್ರೀಡೋತ್ಸವದ ಪೂರ್ವಭಾವಿ ಸಭೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More