ಕಾರ್ಕಳಹೆಬ್ರಿ

” ಬೆಸ್ಟ್‌ ಪೋಸ್ಟ್‌ ಮ್ಯಾನ್‌ ಅವಾರ್ಡ್‌” ಪುರಸ್ಕೃತ  ಪಡುಕುಡೂರು ಚಂದ್ರಯ್ಯ ಆಚಾರ್ಯ ನಿಧನ

ಪಡುಕುಡೂರು : ಹೆಬ್ರಿ ತಾಲ್ಲೂಕಿನ ಮುನಿಯಾಲು ಪಡುಕುಡೂರು ನಿವಾಸಿ ನಿವೃತ್ತ ಪೋಸ್ಟ್‌ ಮ್ಯಾನ್‌ ಚಂದ್ರಯ್ಯ ಆಚಾರ್ಯ (82) ಬುಧವಾರ ನಿಧನರಾದರು.

1964ರಲ್ಲಿ ಭಾರತೀಯ ಅಂಚೆ ಇಲಾಖೆಯಲ್ಲಿ ಪೋಸ್ಟ್‌ ಮ್ಯಾನ್‌ ಸೇವೆಗೆ ಪಾದಾರ್ಪಣೆ ಮಾಡಿ 1978ರ ತನಕ ಎಳ್ಳಾರೆ ಪಡುಕುಡೂರು ಭಾಗದ ಪೋಸ್ಟ್‌ ಮ್ಯಾನ್‌ ಆಗಿ ಸೇವೆ ಸಲ್ಲಿಸಿದ್ದರು.

1978 ರಿಂದ 1992 ವರೆಗೆ ಮಂಗಳೂರು ಹಾಗು 2003 ರ ವರೆಗೆ ಕಾರ್ಕಳದಲ್ಲಿ ಸೇವೆ ಸಲ್ಲಿಸಿ ಜನರ ಅಪಾರ ಪ್ರೀತಿಗೆ ಪಾತ್ರರಾಗಿದ್ದರು. 40 ವರ್ಷಗಳ ವಿಶೇಷ ಸಾರ್ಥಕ ಸೇವೆಯನ್ನು ಪರಿಗಣಿಸಿ ಚಂದ್ರಯ್ಯ ಆಚಾರ್ಯ ಅವರಿಗೆ ಭಾರತೀಯ ಅಂಚೆ ಇಲಾಖೆಯು ” ಬೆಸ್ಟ್‌ ಪೋಸ್ಟ್‌ ಮ್ಯಾನ್‌ ಅವಾರ್ಡ್‌” ನೀಡಿ ಗೌರವಿಸಿದೆ. 2003ರಲ್ಲಿ ಕಾರ್ಕಳದಲ್ಲಿ ಸೇವೆಯಿಂದ ನಿವೃತ್ತರಾಗಿ ಪಡುಕುಡೂರಿನಲ್ಲಿ ನೆಲೆಸಿದ್ದರು. ಊರಿನಲ್ಲೂ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಮೃತರು ಪತ್ನಿ, 2 ಗಂಡು 2 ಹೆಣ್ಣು ಮಕ್ಕಳು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Related posts

ವರಂಗ ಅಂಗನವಾಡಿ ಕೇಂದ್ರಕ್ಕೆ ಕೊಡುಗೆ

Madhyama Bimba

ಹೆಬ್ರಿ: ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ- ಪ್ರಕರಣ ದಾಖಲು

Madhyama Bimba

ಜ್ಞಾನಸುಧಾ ಸಂಸ್ಥೆಗಳಲ್ಲಿ “ಸಂಸ್ಥಾಪಕರ ದಿನಾಚರಣೆ” ಹಾಗೂ ಇತರ ಕಾರ್ಯಕ್ರಮಗಳು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More