ಕಾರ್ಕಳಹೆಬ್ರಿ

ಪಳ್ಳಿ: ಕಿಶನ್ ಪ್ರಭುರವರಿಗೆ ಆಪ್ತಮಿತ್ರ ಪ್ರಶಸ್ತಿ

ವಿಕೋಪ ನಿರ್ವಹಣಾ ಕೇಂದ್ರ ಮಣಿಪಾಲ ಮತ್ತು ತುರ್ತು ವೈದ್ಯಕೀಯ ವಿಭಾಗ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮಾಹೆ ಮಣಿಪಾಲ ಇವರ ವತಿಯಿಂದ ವರ್ಷಂಪ್ರತಿ ಕೊಡ ಮಾಡುವ ಆಪ್ರಮಿತ್ರ ಪ್ರಶಸ್ತಿ ಈ ವರ್ಷ ಪಳ್ಳಿ ಕಿಶನ್ ಪ್ರಭುರವರಿಗೆ ಲಭಿಸಿದೆ.

ಆರೋಗ್ಯ ರಕ್ಷಣೆ ಮತ್ತು ಸಮುದಾಯಕ್ಕೆ ಇವರ ಅಚಲವಾದ ಸೇವೆಗೆ ಮತ್ತು ನಿಸ್ವಾರ್ಥ ಸಮರ್ಪಣೆ ಯನ್ನು ಗುರುತಿಸಿ ಅಂತರಾಷ್ಟ್ರೀಯ ದಿನವಾದ ಡಿಸಾಸ್ಟ್ರರ್ ರಿಸ್ಕ್‌ರಿಡಕ್ಷನ್ ಎಂದು ಆಚರಿಸಲ್ಪಡುವ ದಿನದಂದು ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಇವರು ಪಳ್ಳಿ ಅಡಪಾಡಿ ನಿವಾಸಿ. ಸೇವಾ ಮನೋಭಾವ ಹೊಂದಿದ್ದು, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಎಮರ್ಜೆನ್ಸಿ ವಾರ್ಡ್‌ನಲ್ಲಿ ಸೀನಿಯರ್ ಬ್ರದರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ರೋಗಿಗಳಿಗೆ ಆಸ್ಪತ್ರೆಯಿಂದ ದೊರೆ ಯುವ ಸವಲತ್ತು ಚಿಕಿತ್ಸೆಗಳು ಸಕಾಲಕ್ಕೆ ದೊರೆಯುವಂತೆ ಪ್ರಯತ್ನಿಸುತ್ತಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಇವರು ಅಡಪಾಡಿ ಉತ್ಸಾಹಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Related posts

ಕಾರ್ಕಳ: ವೆಸ್ಟರ್ನ್ ವತಿಯಿಂದ ಈಸ್ಟರ್ನ್ ಟ್ರೋಫಿ 2025 ಕ್ರಿಕೆಟ್ ಟೂರ್ನಮೆಂಟ್

Madhyama Bimba

“ಉದ್ಯೋಗ ಖಾತ್ರಿ” ಯೋಜನೆಗೆ ಕೇಂದ್ರ ಸರ್ಕಾರದ ನಿಯಂತ್ರಣ – ಬಡವರಿಗೆ ಅನ್ಯಾಯ : ನೀರೆ ಕೃಷ್ಣ ಶೆಟ್ಟಿ

Madhyama Bimba

ಜೇಸಿ ಇಂಟರ್ನ್ಯಾಷನಲ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಪರಿಸರ ದಿನಾಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More