ಕಾರ್ಕಳಹೆಬ್ರಿ

ಬೈಲೂರು: ಬಸ್ರಿ ಶಾಲಾ ಮಕ್ಕಳಿಗೆ ದಾನಿಗಳಿಂದ ಉಚಿತ ನೋಟ್ ಪುಸ್ತಕ ವಿತರಣೆ

ಬೈಲೂರು: ಸ. ಹಿ. ಪ್ರಾ. ಶಾಲೆ ಬಸ್ರಿ ಬೈಲೂರು ಇಲ್ಲಿಯ ಸುಮಾರು 121 ವಿದ್ಯಾರ್ಥಿಗಳಿಗೆ ದಾನಿಗಳಾದ ಶಾಲೆಯ ಹಳೆ ವಿದ್ಯಾರ್ಥಿ ನ್ಯಾಯವಾದಿ ಬೈಲೂರು ಸದಾನಂದ ಸಾಲಿಯನ್ ಹಾಗೂ ಶಾಲಾ ಹಳೆ ವಿದ್ಯಾರ್ಥಿನಿ ಮಣಿಪಾಲ ಮೈಟ್ ಕಾಲೇಜಿನ ಪ್ರೊಫೆಸರ್ ಡಾ| ಭಾಗ್ಯಲಕ್ಷ್ಮಿ ಶೆಟ್ಟಿ ಇವರು ಕೊಡ ಮಾಡಿದ ನೋಟ್ ಪುಸ್ತಕಗಳ ವಿತರಣಾ ಸಮಾರಂಭವು ಶಾಲೆಯಲ್ಲಿ ಜೂನ್ 1 ರಂದು ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಡಿ. ಎಂ. ಸಿ. ಅಧ್ಯಕ್ಷ ವಸಂತ ಕುಲಾಲ್ ವಹಿಸಿದ್ದರು.

ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಕರುಣಾಕರ ಹೆಗ್ಡೆ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಸಂತಿ ಹೆಚ್. ಜಿ., ಕೃಷ್ಣ ಎನ್ ಪುತ್ರನ್, ಶ್ರೀಮತಿ ಶಾಂತ ಸಾಲಿಯಾನ್, ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಶ್ರೀಮತಿ ರೂಪ ಆಚಾರ್ಯ ಶಾಲಾ ಶಿಕ್ಷಕ ವೃಂದವರು ಉಪಸ್ಥಿತರಿದ್ದರು. ಸದಾನಂದ ಸಾಲಿಯಾನ್ ರೂ. 21,000 ಹಾಗೂ ಭಾಗ್ಯಲಕ್ಷ್ಮಿ 10,000 ದೇಣಿಗೆ ನೀಡಿ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ನೀಡುವಲ್ಲಿ ಸಹಕರಿಸಿದರು.

ಈ ಸಂದರ್ಭದಲ್ಲಿ 2026-27 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಇಲಾಖಾ ವತಿಯಿಂದ ನೀಡಲಾದ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳ ವಿತರಣೆ ನಡೆಸಲಾಯಿತು. ಪುಸ್ತಕ ದಾನಿಗಳಾದ ಸದಾನಂದ ಸಾಲಿಯಾನ್‌ರವರ ಮಾತಾ-ಪಿತರಾದ ಕೃಷ್ಣ ಎನ್ ಪುತ್ರನ್ ಹಾಗೂ ಶ್ರೀಮತಿ ಶಾಂತ ಸಾಲಿಯಾನ್ ದಂಪತಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಬೈಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಲಸ್ಟರ್ ಆರೋಗ್ಯಾಧಿಕಾರಿ ಶ್ರೀಮತಿ ತೇಜಸ್ವಿನಿ ಮಕ್ಕಳ ಪೌಷ್ಠಿಕಾಂಶದ ಬಗ್ಗೆ ಮಾಹಿತಿ ನೀಡಿದರು.

ಕಾರ್ಕಳ ನಗರ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕರು ಶೇಖರ್ ನಾಯ್ಕ್ ಮಕ್ಕಳ ರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ಸಹಶಿಕ್ಷಕರಾದ ದಿನೇಶ್ ಶೆಟ್ಟಿ ನಿರೂಪಿಸಿ, ಮುಖ್ಯ ಶಿಕ್ಷಕಿ ವಸಂತಿ ಹೆಚ್. ಜಿ. ಪ್ರಾಸ್ತಾವನೆಗೈದು ಸ್ವಾಗತಿಸಿದರು. ಸಹಶಿಕ್ಷಕಿ ಕಾವೇರಿ ವಂದಿಸಿದರು.

Related posts

ಕಡ್ತಲ: ವರ್ಗಾವಣೆಗೊಂಡ ಪಿಡಿಓ ಸುರೇಖಾರವರಿಗೆ ಅಭಿನಂದನಾ ಸಮಾರಂಭ

Madhyama Bimba

ನಾಡ್ಪಾಲು ಗ್ರಾಮದಲ್ಲಿ ಹುಲಿ, ಚಿರತೆಗಳ ಉಪಟಳ: ಸಾಕು ಪ್ರಾಣಿಗಳಿಗಿಲ್ಲ ರಕ್ಷಣೆ

Madhyama Bimba

ಕಾರ್ಕಳ ಸರಕಾರಿ ಪಾಲಿಟೆಕ್ನಿಕ್ ರೋಟ್ರಾಕ್ಟ್ ಕ್ಲಬ್ ಪದಗ್ರಹಣ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More