ಮೂಡುಬಿದಿರೆ

ರಾಜ್ಯ ಮಟ್ಟದ ಮಲ್ಲಕಂಬ ಸ್ಪರ್ಧೆಯಲ್ಲಿ ಆಳ್ವಾಸ್ ತಂಡದ ಸಾಧನೆ

ಮೂಡುಬಿದಿರೆ: ಕರ್ನಾಟಕ ಅಮೆಚೂರ್ ಮಲ್ಲಕಂಬ ಅಸೋಸಿಯೇಷನ್, ಲಕ್ಷ್ಮೇಶ್ವರ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಬೆಂಗಳೂರು ಗ್ರಾಮಾಂತರ ಮತ್ತು ಧಾರವಾಡ ಜಿಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಜುಲೈ 11 ಮತ್ತು 12ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹಾಗೂ ಜುಲೈ 17 ಮತ್ತು 18ರಂದು ಧಾರವಾಡ ಜಿಲ್ಲೆಯಲ್ಲಿ ನಡೆದ ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರ ಮಲ್ಲಕಂಬ ಕ್ರೀಡೋತ್ಸವದಲ್ಲಿ ಆಳ್ವಾಸ್ ಮಲ್ಲಕಂಬ ತಂಡವು ಎರಡು ಕಡೆಸಮಗ್ರ ಚಾಂಪಿಯನ್ಸ್ ಪಟ್ಟವನ್ನು ಅಲಂಕರಿಸಿತು.

ಬೆಂಗಳೂರು ಗ್ರಾಮಾಂತರ ಸ್ಪರ್ಧೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಆಳ್ವಾಸ್ ತಂಡವು 14 ವರ್ಷ ವಯೋಮಿತಿಯ ಬಾಲಕಿಯರ ವಿಭಾಗ ಹಾಗೂ 14 ವರ್ಷ ಮೇಲ್ಪಟ್ಟ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿತು. ಗುಂಪು ವಿಭಾಗದಲ್ಲಿ 14 ವರ್ಷ ಮೇಲ್ಪಟ್ಟ ಬಾಲಕರ ಹಗ್ಗದ ಮಲ್ಲಕಂಬದಲ್ಲಿ ಪ್ರಥಮ ಹಾಗೂ ಸ್ಥಿರ ಮಲ್ಲಕಂಬದಲ್ಲಿ ದ್ವಿತೀಯ ಸ್ಥಾನ, 14 ವರ್ಷ ಮೇಲ್ಪಟ್ಟ ಬಾಲಕಿಯರ ಹಗ್ಗದ ಮಲ್ಲಕಂಬದಲ್ಲಿ ಪ್ರಥಮ ಹಾಗೂ ಸ್ಥಿರ ಮಲ್ಲಕಂಬದಲ್ಲಿ ದ್ವಿತೀಯ ಸ್ಥಾನ ಲಭಿಸಿತು. 14ವರ್ಷ ವಯೋಮಿತಿಯ ಬಾಲಕಿಯರ ಹಗ್ಗದ ಮಲ್ಲಕಂಬದಲ್ಲಿ ಪ್ರಥಮ ಹಾಗೂ ಸ್ಥಿರ ಮಲ್ಲಕಂಬದಲ್ಲಿ ದ್ವಿತೀಯ ಸ್ಥಾನ ದೊರೆಯಿತು.

ವೈಯಕ್ತಿಕ ವಿಭಾಗದಲ್ಲಿ 14 ವರ್ಷ ಬಾಲಕಿಯರ ಹಗ್ಗದ ಮಲ್ಲಕಂಬದಲ್ಲಿ ವರ್ಷಿಣಿ ಪ್ರಥಮ ಹಾಗೂ ಸಿಂಚನಾ ದ್ವಿತೀಯ ಸ್ಥಾನ ಪಡೆದರು. 14 ವರ್ಷ ಮೇಲ್ಪಟ್ಟ ಬಾಲಕಿಯರ ವಿಭಾಗದಲ್ಲಿ ಪೂಜಾ ಸ್ಥಿರ ಮಲ್ಲಕಂಬದಲ್ಲಿ ದ್ವಿತೀಯ, ಸವಿತಾ ಆರ್. ಹಗ್ಗದ ಮಲ್ಲಕಂಬದಲ್ಲಿ ದ್ವಿತೀಯ ಹಾಗೂ ದಿವ್ಯ ಪಿ. ಹಗ್ಗದ ಮಲ್ಲಕಂಬದಲ್ಲಿ ತೃತೀಯ ಸ್ಥಾನ ಗಳಿಸಿದರು. 14ವರ್ಷ ಮೇಲ್ಪಟ್ಟ ಬಾಲಕರ ವಿಭಾಗದಲ್ಲಿ ಆಕಾಶ್ ಸ್ಥಿರ ಮಲ್ಲಕಂಬದಲ್ಲಿ ತೃತೀಯ, ವಿನಾಯಕ್ ಹಗ್ಗದ ಮಲ್ಲಕಂಬದಲ್ಲಿ ಪ್ರಥಮ ಹಾಗೂ ಸಂಗಪ್ಪ ಹಗ್ಗದ ಮಲ್ಲಕಂಬದಲ್ಲಿ ದ್ವಿತೀಯ ಸ್ಥಾನ ಪಡೆದರು. ಪಿರಮಿಡ್ ವಿಭಾಗದಲ್ಲಿ ಸ್ಥಿರ ಮಲ್ಲಕಂಬದಲ್ಲಿ ಪ್ರಥಮ ಹಾಗೂ ಹಗ್ಗದ ಮಲ್ಲಕಂಬದಲ್ಲಿ ದ್ವಿತೀಯ ಸ್ಥಾನ ಗಳಿಸಲಾಯಿತು.

ಧಾರವಾಡ ಸ್ಪರ್ಧೆ
ಧಾರವಾಡ ಜಿಲ್ಲೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಆಳ್ವಾಸ್ ತಂಡವು 14 ವರ್ಷ ವಯೋಮಿತಿಯ ಬಾಲಕಿಯರ ವಿಭಾಗ ಹಾಗೂ 14ವರ್ಷ ಮೇಲ್ಪಟ್ಟ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು. ಗುಂಪು ವಿಭಾಗದಲ್ಲಿ 14 ವರ್ಷ ಮೇಲ್ಪಟ್ಟ ಬಾಲಕರ ಸ್ಥಿರ ಮತ್ತು ಹಗ್ಗದ ಮಲ್ಲಕಂಬದಲ್ಲಿ ಪ್ರಥಮ ಸ್ಥಾನ, 14 ವರ್ಷ ಮೇಲ್ಪಟ್ಟ ಬಾಲಕಿಯರ ಸ್ಥಿರ ಮತ್ತು ಹಗ್ಗದ ಮಲ್ಲಕಂಬದಲ್ಲಿ ಪ್ರಥಮ ಸ್ಥಾನ, 14 ವರ್ಷ ಬಾಲಕಿಯರ ಹಗ್ಗದ ಮಲ್ಲಕಂಬದಲ್ಲಿ ಪ್ರಥಮ ಹಾಗೂ ಸ್ಥಿರ ಮಲ್ಲಕಂಬದಲ್ಲಿ ದ್ವಿತೀಯ ಸ್ಥಾನ ಲಭಿಸಿತು.

ವೈಯಕ್ತಿಕ ವಿಭಾಗದಲ್ಲಿ 14 ವರ್ಷ ಬಾಲಕಿಯರ ವಿಭಾಗದಲ್ಲಿ ಕವನ ಹಗ್ಗದ ಮಲ್ಲಕಂಬದಲ್ಲಿ ಪ್ರಥಮ ಹಾಗೂ ಸ್ಥಿರ ಮಲ್ಲಕಂಬದಲ್ಲಿ ತೃತೀಯ ಸ್ಥಾನ ಪಡೆದರೆ, ಸ್ಪೂರ್ತಿ ಹಗ್ಗದ ಮಲ್ಲಕಂಬದಲ್ಲಿ ತೃತೀಯ ಸ್ಥಾನ ಪಡೆದರು. 14 ವರ್ಷ ಮೇಲ್ಪಟ್ಟ ಬಾಲಕಿಯರ ವಿಭಾಗದಲ್ಲಿ ದಿವ್ಯ ಹಗ್ಗ ಮತ್ತು ಸ್ಥಿರ ಮಲ್ಲಕಂಬ ಎರಡರಲ್ಲೂ ಪ್ರಥಮ ಸ್ಥಾನ ಗಳಿಸಿದರೆ, ನಿಂಗವ್ವ ಹಗ್ಗದ ಮಲ್ಲಕಂಬದಲ್ಲಿ ದ್ವಿತೀಯ ಸ್ಥಾನ ಪಡೆದರು. 14 ವರ್ಷ ಮೇಲ್ಪಟ್ಟ ಬಾಲಕರ ವಿಭಾಗದಲ್ಲಿ ಆಕಾಶ್ ಸ್ಥಿರ ಮಲ್ಲಕಂಬದಲ್ಲಿ ಪ್ರಥಮ, ವಿನಾಯಕ್ ಹಗ್ಗದ ಮಲ್ಲಕಂಬದಲ್ಲಿ ಪ್ರಥಮ ಹಾಗೂ ಸ್ಥಿರ ಮಲ್ಲಕಂಬದಲ್ಲಿ ದ್ವಿತೀಯ, ಸಂಗಮೇಶ್ ಹಗ್ಗದ ಮಲ್ಲಕಂಬದಲ್ಲಿ ತೃತೀಯ ಸ್ಥಾನ ಗಳಿಸಿದರು.

120 ವಿದ್ಯಾರ್ಥಿಗಳನ್ನು ಒಳಗೊಂಡ ಆಳ್ವಾಸ್ ಮಲ್ಲಕಂಬ ತಂಡವನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

Related posts

ಜ. 4ರಂದು ಅಲ್ ಬಿರ್ ಇಂಟರ್ನ್ಯಾಶನಲ್ ಸ್ಕೂಲ್ ನೂತನ ಕಟ್ಟಡ ಲೋಕಾರ್ಪಣೆ, ‘ಕಿಡ್ಸ್ ಫೆಸ್ಟ್’ ಸಂಭ್ರಮ

Madhyama Bimba

ಆಳ್ವಾಸ್‌ನ ಓರ್ವರಿಗೆ ಏಕಲವ್ಯ, ನಾಲ್ವರಿಗೆ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ

Madhyama Bimba

 ಟೆಂಪೋ ಬೈಕ್ ಡಿಕ್ಕಿ- ಶಿಕ್ಷಕನಿಗೆ ಗಂಭೀರ ಗಾಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More