ಮೂಡುಬಿದಿರೆ

ಮೂಡುಬಿದಿರೆ ತಾಲೂಕು ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳ ನೇಮಕ ಹಾಗೂ ಪದಗ್ರಹಣ ಸಮಾರಂಭ

ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಮೂಡುಬಿದಿರೆ ತಾಲೂಕು ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜು. 22ರಂದು ನಡೆಯಿತು.


ರೋಟರಿ ಶಾಲೆಯ ಸಂಚಾಲಕರಾದ ಪ್ರವೀಣ್ ಚಂದ್ರ ಜೈನ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶಾರೀರಿಕ ಶಿಕ್ಷಕರ ಶಿಸ್ತು ಘನತೆ ಮತ್ತು ಮೌಲ್ಯದಾರಿತ ವೃತ್ತಿ ಜೀವನ ಎಲ್ಲರಿಗೂ ಮಾದರಿಯಾಗಲಿ ಎಂದು ಹಾರೈಸಿದರು..

ತಾಲೂಕು ದೈಹಿಕ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಶಾರೀರಿಕ ಶಿಕ್ಷಕರಾದ ಸುಧೀರ್ ಕುಮಾರ, ಕಾರ್ಯದರ್ಶಿಯಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಳಿಯೂರಿನ ದೈಹಿಕ ಶಿಕ್ಷಕಿ ಶ್ರೀಮತಿ ಶಾಂತಿ, ಕೋಶಾಧಿಕಾರಿ ಯಾಗಿ ಬಾಬು ರಾಜೇಂದ್ರ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಪ್ರಶಾಂತ್ ಅಧಿಕಾರ ವಹಿಸಿಕೊಂಡರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ ರೋಟರಿ ಶಾಲಾ ಮುಖ್ಯೋಪಾಧ್ಯಾಯನಿ ತಿಲಕಾ ಅನಂತವೀರ ಜೈನ್ ಇವರು ಅನುದಾನ ರಹಿತ ಶಾಲೆಯಿಂದ ಪ್ರಥಮ ಬಾರಿಗೆ ಅಧ್ಯಕ್ಷರಾಗಿ ನೇಮಕಗೊಂಡ ಅಧ್ಯಕ್ಷರಿಗೆ ಹಾಗೂ ಅವರ ತಂಡಕ್ಕೆ ಮತ್ತು ಸಂಘಟನೆಯ ಎಲ್ಲಾ ಸದಸ್ಯರಿಗೆ ಶುಭ ಹಾರೈಸಿದರು.

ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ರಿತೇಶ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ನೂತನ ಅಧ್ಯಕ್ಷರಿಗೆ ಹಾಗೂ ಪದಾಧಿಕಾರಿಗಳಿಗೆ ಶುಭಕೋರಿ , ಇಲಾಖೆಯ ಪಂದ್ಯಾಟಗಳ ಸಂಘಟನೆಗಳಲ್ಲಿ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ಮತ್ತು ಶಿಕ್ಷಕರ ಸಹಕಾರವನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ರಿತೇಶ್ ಶೆಟ್ಟಿ ಇವರನ್ನು ರೋಟರಿ ಶಾಲಾ ವತಿಯಿಂದ ಹಾಗೂ ಸಂಘದ ನೂತನ ಅಧ್ಯಕ್ಷರಾಗಿ ನಿಯೋಜನಗೊಂಡ ಸುಧೀರ್ ಕುಮಾರ್ ಅವರನ್ನು ಇಲಾಖಾವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸುಧೀರ್ ಕುಮಾರ್ ಸ್ವಾಗತಿಸಿ, ಇತರ ಸಂಘಗಳ ಹಾಗೂ ಎಲ್ಲಾ ಸದಸ್ಯರ ಸಹಕಾರವನ್ನು ಬಯಸಿ ತಮ್ಮ ಕರ್ತವ್ಯಗಳನ್ನು ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಉತ್ತಮವಾಗಿ ನಿರ್ವಹಿಸುವುದಾಗಿ ಹೇಳಿದರು.

ಶ್ರೀಮತಿ ಶಾಂತಿ ವಂದನಾರ್ಪಣೆಗೈದು, ನವೀನ ಅಂಬೂರಿ ಕಾರ್ಯಕ್ರಮ ನಿರೂಪಿಸಿದರು.

Related posts

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಿಂದ ನಡ್ಯೋಡಿ ದೈವಸ್ಥಾನದಲ್ಲಿ ಸಸ್ಯ ಶ್ಯಾಮಲಾ ಕಾರ್ಯ, ಸಸಿ ವಿತರಣೆ

Madhyama Bimba

ಮೇ 16ರಿಂದ ಸರ್ಕಾರಿ ಶಾಲೆಗಳಲ್ಲಿ  ದಾಖಲಾತಿ ಆಂದೋಲನ

Madhyama Bimba

ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘಕ್ಕೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಸಿಬ್ಬಂದಿ ಭೇಟಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More