ಕಾರ್ಕಳಹೆಬ್ರಿ

ಕೌಡೂರು ಯುವಸಂಗಮ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಮತ್ತು ಪ್ರತಿಭಾ ಪುರಸ್ಕಾರ

ಬೈಲೂರು: ಯುವಸಂಗಮ (ರಿ.) ಕೌಡೂರು ಇವರ ವತಿಯಿಂದ ಜೂ. 21ರಂದು ಆದಿತ್ಯವಾರ ಬೆಳಿಗ್ಗೆ 8.00ರಿಂದ ಮಧ್ಯಾಹ್ನ 1.00 ಶ್ರೀ ಮಾರಿಯಮ್ಮ ದೇವಸ್ಥಾನ ಸಭಾಂಗಣ ಬೈಲೂರು ಇಲ್ಲಿ ಸಾರ್ವಜನಿಕರಿಗಾಗಿ ಉಚಿತ ಹೃದಯ ತಪಾಸಣೆ (ಇಸಿಜಿ), ಉಚಿತ ಮಂಡಿನೋವು ತಪಾಸಣೆ, ಉಚಿತ ಚರ್ಮರೋಗ ತಪಾಸಣೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಮತ್ತು ಪ್ರತಿಭಾ ಪುರಸ್ಕಾರ ನಡೆಯಲಿದೆ.

2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 85 ಶೇ. ಮೇಲ್ಪಟ್ಟು ಅಂಕ ಗಳಿಸಿದ ಕೌಡೂರು ಗ್ರಾಮದ ಆಯ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.

ದುರ್ಗಾ ಸಂಜೀವಿನಿ ಮಣಿಪಾಲ್ ಆಸ್ಪತ್ರೆ ಕಟೀಲು ಇಲ್ಲಿಯ ಎಲುಬು ಮತ್ತು ಕೀಲುರೋಗ ತಜ್ಞ ವೈದ್ಯರಾದ ಡಾ. ಸುಧೀಂದ್ರ ಕಾರ್ನಾಡ್, ಇರ್ವತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಖ್ಯಾತ ಚರ್ಮರೋಗ ತಜ್ಞರಾದ ಡಾ. ಯಶೋಧರ ಕಾರ್ಕಳ, ಬೆಂಗಳೂರು ಜಯದೇವ ಆಸ್ಪತ್ರೆ, ಉಡುಪಿಯ ಹೈಟೆಕ್ ಮತ್ತು ಮಿತ್ರ ಆಸ್ಪತ್ರೆಯ ಖ್ಯಾತ ಹೃದಯ ತಜ್ಞರಾದ ಡಾ. ಅನೂಪ್ ಕೆ. ಶೆಟ್ಟಿ, ಬೈಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಹಂತ್ ಹೆಗ್ಡೆ, ಹೆಬ್ರಿ ಹೆಲ್ತ್‌ಕೇರ್ ಸೆಂಟರ್‌ನ ಕನ್ಸಲ್ಟೆಂಟ್ ಪಿಸಿಯೋಥೆರಫಿಸ್ಟ್ ಡಾ. ನಿಶಾ ಶೆಟ್ಟಿ ಭಾಗವಹಿಸಲಿದ್ದಾರೆ.

ಮಧುಮೇಹ ರೋಗಿಗಳು ಶಿಬಿರಕ್ಕೆ ಬರುವಾಗ ಖಾಲಿ ಹೊಟ್ಟೆಯಲ್ಲಿ ಇದ್ದು ಮತ್ತು ಮಂಡಿನೋವು ತಪಾಸಣೆಯಲ್ಲಿ ಅವಶ್ಯಕತೆಯಿದ್ದಲ್ಲಿ ಎಕ್ಸ್ ರೇ ವ್ಯವಸ್ಥೆಯು ಶಿಬಿರದಲ್ಲಿ ಆಯೋಜಿಸಲಾಗಿದೆ.

ಯುವಸಂಗಮದ ಸಮಾಜಮುಖಿ ಕಾರ್ಯಕ್ರಮದ ಅಂಗವಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಘಟನೆಯು ವಿನಂತಿಸಿಕೊಂಡಿದೆ.

 

Related posts

ಬೆಳ್ಳಿ ಹಬ್ಬದ ಸಂಭ್ರಮಾಚರಣೆಯಲ್ಲಿರುವ ಕಾರ್ಕಳ ಜೋಡುರಸ್ತೆಯ ಶ್ರೀ ದುರ್ಗಾಪರಮೇಶ್ವರಿ ವಿವಿಧೊದ್ಧೇಶ ಸಹಕಾರಿ ಸಂಘಕ್ಕೆ ರೂ. 52.10 ಲಕ್ಷ ನಿವ್ವಳ ಲಾಭ

Madhyama Bimba

ಉದ್ಯೋಗ ಮೇಳ ಚುನಾವಣ ಗಿಮಿಕ್ ಆಗದಿರಲಿ – ಯುವ ಜನತೆಯ ನಿರೀಕ್ಷೆ ಹುಸಿಯಾಗದಿರಲಿ: ಶುಭದರಾವ್

Madhyama Bimba

ಕಾರ್ಕಳ: ನಮ್ಮ ನಡೆ- ಕೃಷಿಯ ಕಡೆ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More