ಕಾರ್ಕಳ

ನೀರೆ ಬೈಲೂರು ಲಯನ್ಸ್ ಕ್ಲಬ್ ವತಿಯಿಂದ ಹೊಸಬೆಳಕು ಆಶ್ರಮದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಬೈಲೂರು: ನೀರೆ ಬೈಲೂರು ಲಯನ್ಸ್ ಕ್ಲಬ್ ಹಾಗೂ ಎ. ಜೆ. ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್ ವತಿಯಿಂದ ಕೌಡೂರು ಹೊಸಬೆಳಕು ಆಶ್ರಮದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಜೂ. 17ರಂದು ನಡೆಯಿತು.


ಹೊಸಬೆಳಕು ಆಶ್ರಮದಲ್ಲಿರುವ ಎಲ್ಲರಿಗೂ ಉಚಿತವಾಗಿ ವಿವಿಧ ತಪಾಸಣೆಗಳನ್ನು ನಡೆಸಲಾಯಿತು. ಇದರೊಂದಿಗೆ ಈ ಭಾಗದ ಗ್ರಾಮಸ್ಥರು ಪಾಲ್ಗೊಂಡರು.

ನೀರೆ ಬೈಲೂರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಶೆಟ್ಟಿ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಸದಾನಂದ ಸಾಲಿಯಾನ್, ಕೋಶಾಧಿಕಾರಿ ರಾಜೇಶ್ ಶೆಟ್ಟಿ, ಸುರೇಶ್ ಶೆಟ್ಟಿ ಸಾಯಿ ರಾಮ್, ಗುರುಪ್ರಸಾದ್ ಶೆಟ್ಟಿ, ಉದಯ ಹೆಗ್ಡೆ, ವಿಕ್ರಂ ಹೆಗ್ಡೆ, ಜಗನ್ನಾಥ್ ಶೆಟ್ಟಿ, ರಮೇಶ್ ಶೆಟ್ಟಿ, ವಸಂತ್ ಕುಲಾಲ್, ಸತೀಶ್ ಶೆಟ್ಟಿ, ದಿಲೀಪ್ ಶೆಟ್ಟಿ, ಸಚ್ಚಿದಾನಂದ ಪ್ರಭು ಹಾಗೂ ರವೀಂದ್ರ ನಾಯಕ್ ಉಪಸ್ಥಿತರಿದ್ದರು.

ಶಿಬಿರದಲ್ಲಿ ಡಾ. ಬಿಂದು ಭಾಗವಹಿಸಿ ವೈದ್ಯಕೀಯ ಚಿಕತ್ಸೆ ನೀಡಿ ಸಹಕರಿಸಿದರು.
ಹೊಸಬೆಳಕು ಆಶ್ರಮದ ತನುಲ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Related posts

ಮಾಳದ ನಿವಾಸಿ ನಾರಾಯಣ ಮೃತ್ಯು

Madhyama Bimba

ಎಳ್ಳಾರೆ ಮಾವಿನಕಟ್ಟೆ : ಹಲವಾರು ದಿನಗಳಿಂದ ನೀರಿಗಾಗಿ ಪರದಾಟ. !- ಮನೆಮನೆಗೆ ನೀರು ಸರಬರಾಜು ಮಾಡಿದ ಸಮಾಜಸೇವಕ ಗೋಪಿನಾಥ ಭಟ್

Madhyama Bimba

ಮಕ್ಕಿ ಶಾಲೆಯಲ್ಲಿ ಉಚಿತ ಲೇಖನ ಸಾಮಗ್ರಿ, ಕೊಡೆ ವಿತರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More